ಸಾಂದರ್ಭಿಕ ಚಿತ್ರ 
ರಾಜ್ಯ

ಬೆಂಗಳೂರಿನಲ್ಲಿ ಪ್ರತಿದಿನ 16 ವಾಹನ ಕಳ್ಳತನ!

ಬೆಂಗಳೂರು ನಗರದಲ್ಲಿ ಪ್ರತಿದಿನ ಸುಮಾರು 16 ವಾಹನಗಳು ಕಳುವಾಗುತ್ತಿದೆ ಎಂದು ನಗರ ಪೊಲೀಸರ ಅಂಕಿ ಅಂಶದಿಂದ ತಿಳಿದು ಬಂದಿದೆ. ಇದರಲ್ಲಿ ...

ಬೆಂಗಳೂರು: ಬೆಂಗಳೂರು ನಗರದಲ್ಲಿ ಪ್ರತಿದಿನ ಸುಮಾರು 16 ವಾಹನಗಳು ಕಳುವಾಗುತ್ತಿದೆ ಎಂದು ನಗರ ಪೊಲೀಸರ ಅಂಕಿ ಅಂಶದಿಂದ ತಿಳಿದು ಬಂದಿದೆ. ಇದರಲ್ಲಿ ಶೇ.27 ರಷ್ಟು ಪ್ರಕರಣಗಳು ಮಾತ್ರ ಪತ್ತೆ ಹಚ್ಚಲಾಗುತ್ತಿದೆ ಎಂದು ನಗರ ಪೊಲೀಸ್ ಆಯುಕ್ತ ಟಿ. ಸುನೀಲ್ ಕುಮಾರ್ ತಿಳಿಸಿದ್ದಾರೆ.
ಹೈದರಾಬಾದ್ ಮತ್ತು ಮುಂಬಯಿ ನಗರಗಳಿಗೆ ಹೋಲಿಸಿದರೇ ಬೆಂಗಳೂರಿನಲ್ಲಿ ವಾಹನ ಕಳ್ಳತನ ಕಡಿಮೆ ಪ್ರಮಾಣದಲ್ಲಿದೆ ಎಂದು ಡಿಸಿಪಿ ರಾಮ್ ನಿವಾಸ್ ಸೆಪಟ್ ಹೇಳಿದ್ದಾರೆ. ಈ ವರ್ಷದ ಜನವರಿ ತಿಂಗಳಲ್ಲಿ ಹಲವು ಕಳ್ಳತನ ಕೇಸ್ ಗಳು ದಾಖಲಾಗಿವೆ. 
ಬೆಂಗಳೂರಿನಲ್ಲಿ 72.3 ಲಕ್ಷ ವಾಹನಗಳಿವೆಸ ಅದರಲ್ಲಿ 50 ಲಕ್ಷ ದ್ವಿಚಕ್ರ ವಾಹನಗಳು, ಕಳ್ಳತನ ಪ್ರಕರಣಗಳಲ್ಲಿ ಕೆಲವೇ ಕೆಲವು ಪ್ರಕರಣಗಳು ಮಾತ್ರ ಪತ್ತೆಯಾಗುತ್ತಿವೆ, ಜನವರಿ ತಿಂಗಳಲ್ಲಿ ನಗರದಲ್ಲಿ 446 ಕಳ್ಳತನ ಪ್ರಕರಣಗಳು ನಡೆದಿವೆ, ಅದರಲ್ಲಿ ಕೇವಲ 68 ಪ್ರಕರಣಗಳು ಮಾತ್ರ ಪತ್ತೆಯಾಗಿವೆ,
ನೋ ಪಾರ್ಕಿಂಗ್ ಪ್ರದೇಶದಲ್ಲಿ ನಿಲ್ಲಿಸಿದ್ದ ವಾಹನಗಳು ಕಣ್ಮರೆಯಾಗುತ್ತಿವೆ,  ವಿಶೇಷವಾಗಿ ಜಯನಗರ,  ಜೆಪಿ ನಗರ, ಬನಶಂಕರಿ, ಆಡುಗೋಡಿ, ವೈಟ್ ಫೀಲ್ಡ್, ಕೆ.ಆರ್ ಪುರಂ, ಕೋರಮಂಗಲ ಮತ್ತು ಎಚ್ ಎಸ್ ಆರ್ ಲೇಔಟ್ ಗಳಲ್ಲಿ ಹೆಚ್ಚಿನ ಕಳ್ಳತನ ಪ್ರಕರಣಗಳು ದಾಖಲಾಗಿವೆ.
ರಾತ್ರಿ ಹೊತ್ತು ಹೆಚ್ಚಿನ ವಾಹನಗಳು ವಸತಿ ಪ್ರದೇಶಗಳಲ್ಲಿ ಕಳ್ಳತನವಾಗುತ್ತಿರುತ್ತವೆ. ದ್ವಿಚಕ್ರ ವಾಹನಗಳ ಕಳ್ಳತನ ಮಾಡುವ ಗ್ಯಾಂಗ್ ಒಂದಿದ್ದು, ಕಳ್ಳತನ ಮಾಡಿದ ವಾಹನಗಳನ್ನು ಗ್ಯಾರೇಜ್ ಗೆ ಮಾರಾಟ ಮಾಡುತ್ತಾರೆ, ಜೊತೆಗೆ ಓಎಲ್ ಎಕ್ಸ್ ಮತ್ತು ಆನ್ ಲೈನ್ ನಲ್ಲಿ ವಾಹನ ಮಾರಾಟ ಮಾಡುತ್ತಾರೆ ಎಂದು ಪೊಲೀಸರು ಹೇಳುತ್ತಾರೆ.
ಕಳೆದ 3 ವರ್ಷಗಳಲ್ಲಿ  ನಗರದಲ್ಲಿ ಒಟ್ಟು 17,344 ನಾಪತ್ತೆ ಪ್ರಕರಣಗಳು ದಾಖಲಾಗಿವೆ, ಅದರಲ್ಲಿ 2017 ರಲ್ಲಿ ಶೇ.27, 2016 ರಲ್ಲಿ 25, 2015 ರಲ್ಲಿ ಶೇ. 29 ರಷ್ಟು ಪ್ರಕರಣಗಳು ಮತ್ತೆ ಪತ್ತೆಯಾಗಿವೆ ಎಂದು ಪೊಲೀಸರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ಸ್ಪರ್ಧೆಗೆ ಯಾರೇ ಬರಲಿ, ಹೆದರುವ ಪ್ರಶ್ನೆಯೇ ಇಲ್ಲ, ಕಾನೂನು ಪಾಲನೆ ಕಡ್ಡಾಯ: ಎಲಾನ್ ಮಸ್ಕ್ 'ಏಕಸ್ವಾಮ್ಯ' ಆರೋಪಕ್ಕೆ Reliance ತಿರುಗೇಟು..!'

ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಶತ್ರುತ್ವ ತೀವ್ರ ಕಳವಳಕಾರಿ: ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತ ಅಸಮಾಧಾನ..!

ಡಿಕೆಶಿ ಸಿಎಂ ವಿಚಾರ ಪ್ರಶ್ನಿಸಲು ನೀವು ಯಾರು? ಕಾಂಗ್ರೆಸ್ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಬದಲು ನಿಮ್ಮ ಕೆಲಸ ನೋಡಿಕೊಳ್ಳಿ: HDKಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು

CJP ಯ 'ತಿರಂಗಾ ಮೆರವಣಿಗೆ: 6,000 ಪೊಲೀಸರು, 220 ಸಿಎಪಿಎಫ್ ತುಕಡಿಗಳ ನಿಯೋಜನೆ, ಸಿಸಿಟಿವಿ ಕಣ್ಗಾವಲು!

729 ಕೋಟಿ ರೂ. ವೆಚ್ಚದಲ್ಲಿ ಮೈಸೂರು ಫಿಲ್ಮ್ ಸಿಟಿ ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ