ರಾಜ್ಯ

ಕುಷ್ಠರೋಗಿಗಳ ಆಧಾರ್ ಸಮಸ್ಯೆ: ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಕರ್ತೆಗೆ ಚಮೇಲಿ ದೇವಿ ಜೈನ್ ಪ್ರಶಸ್ತಿ

Srinivas Rao BV
ಬೆಂಗಳೂರು: ಕುಷ್ಠರೋಗದಿಂದ ಆಧಾರ್ ನೋಂದಣಿಗೆ ತೊಡಕುಂಟಾಗಿ ಸೌಲಭ್ಯ ವಂಚಿತರ ಬಗ್ಗೆ ಸರಣಿ ವರದಿಗಳನ್ನು ಪ್ರಕಟಿಸಿದ್ದ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನ ಹಿರಿಯ ವರದಿಗಾರ್ತಿ ಸುರಕ್ಷಾ.ಪಿ ಅವರಿಗೆ ಚಮೇಲಿ ದೇವಿ ಜೈನ್ ಪ್ರಶಸ್ತಿ ಲಭಿಸಿದೆ.  
ಚಮೇಲಿ ದೇವಿ ಜೈನ್ ಅಪ್ರತಿಮ ಮಹಿಳಾ ಪತ್ರಕರ್ತರಿಗೆ ನೀಡಲಾಗುವ ಪ್ರತಿಷ್ಠಿತ ಪ್ರಶಸ್ತಿಯಾಗಿದ್ದು, ತೀರ್ಪುಗಾರರು ಸುರಕ್ಷಾ ಅವರ ವರದಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಮಾ.09 ರಂದು ನವದೆಹಲಿಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಡಿ.02 ರಿಂದ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್  ಕುಷ್ಠರೋಗಿಗಳು ಆಧಾರ್ ನೋಂದಣಿ ಹಾಗೂ ಅದರಿಂದ ಸಿಗಬೇಕಾಗಿದ್ದ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗದೇ ಎದುರಿಸುತ್ತಿದ್ದ ಬಗ್ಗೆ ಸರಣಿ ವರದಿಗಳನ್ನು ಪ್ರಕಟಿಸಿತ್ತು.  ಇದೇ ಸಮಸ್ಯೆ ಎದುರಿಸುತ್ತಿದ್ದ ಸಜೀದಾ ಬೇಗಂ (65) ಅವರ ಬಗ್ಗೆಯೂ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನಲ್ಲಿ ವರದಿ ಪ್ರಕಟವಾಗಿತ್ತು. 
ಎಕ್ಸ್ ಪ್ರೆಸ್ ವರದಿಯ ಬೆನ್ನಲ್ಲೆ ಎಚ್ಚೆತ್ತುಕೊಂಡಿದ್ದ ರಾಷ್ಟ್ರೀಯ ಹೆಲ್ತ್ ಮಿಷನ್ ನ ನಿರ್ದೇಶಕ ರಥನ್ ಕೇಲ್ಕರ್,  ಸಜೀದಾ ಬೇಗಂ ಪ್ರಕರಣವನ್ನು ಸೆಂಟರ್ ಫಾರ್ ಇ-ಕಾಮರ್ಸ್ ನ ಗಮನಕ್ಕೆ ತಂದು, ಆ ರೀತಿಯ ಪ್ರಕರಣಗಳಿಗೆ ಪರಿಹಾರ ಕಂಡುಕೊಳ್ಳುವುದಕ್ಕೆ ಕ್ರಮ ಕೈಗೊಂಡಿದ್ದರು. ಸಜೀದಾ ಬೇಗಂಗೆ ನೆಟಿಜನ್ ಗಳ ನೆರವು ಸಹ ಲಭಿಸಿತ್ತು. 
SCROLL FOR NEXT