ರಾಜ್ಯ

ಬೆಂಗಳೂರು ತಾಯಿ-ಮಗ ಆತ್ಮಹತ್ಯೆ ಪ್ರಕರಣ: ಕೋಲಾರ ಇನ್ಸ್ ಪೆಕ್ಟರ್ ಬಂಧನ

Raghavendra Adiga
ಬೆಂಗಳೂರು: ಬೆಂಗಳೂರು ಕಾಡುಗೋಡಿ ಅಪಾರ್ಟ್‍ಮೆಂಟ್‍ನ ಐದನೇ ಮಹಡಿಯಿಂದ ಜಿಗಿದು ತಾಯಿ-ಮಗ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣ ಸಂಬಂಧ ಕೋಲಾರದ ಇನ್ಸ್ ಪೆಕ್ಟರ್ ಒಬ್ಬರನ್ನು ಬಂಧಿಸಲಾಗಿದೆ.
ಕೋಲಾರದ ಡಿಸಿಆರ್‍ಬಿಯಲ್ಲಿ ಇನ್‍ಸ್ಪೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದ ಚಂದ್ರಪ್ಪ ಅವರನ್ನು ಕಾಡುಗೋಡಿ ಪೋಲೀಸರು ಬಂಧಿಸಿದ್ದಾರೆ.
ತಾಯಿ-ಮಗನ ಆತ್ಮಹತ್ಯೆಗೆ ಈತ ಪ್ರಚೋದನೆ ನಿಡಿದ್ದರೆಂದು ಮೃತ ಮೌನೇಶ್ ಅವರ ಪತ್ನಿ ಶ್ರೀದೇವಿ ಕಾಡುಗೋಡಿ ಪೋಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಈ ಸಂಬಂಧ ತನಿಖೆ ಕೈಗೊಂಡಿದ್ದ ಪೋಲೀಸರು ಪ್ರಕರಣದಲ್ಲಿ ಸಾಂದರ್ಭಿಕ ಸನ್ನಿವೇಶ, ಸಾಕ್ಷಾಧಾರಗಳು  ಎಲ್ಲವನ್ನೂ ಪರಿಶೀಲಿಸಿ ಚಂದ್ರಪ್ಪನನ್ನು ಬಂಧಿಸಿದ್ದಾರೆ.
ಚಂದ್ರಪ್ಪನನ್ನು ಅಮಾನತುಗೊಳಿಸಿ ತನಿಖೆಗೆ ಆದೇಶಿಸಬೇಕೆಂದು  ಕೋಲಾರ ಎಸ್ಪಿಗೆ ಪತ್ರ ಬರೆದಿರುವುದಾಗಿ ಪೋಲೀಸರು ಹೇಳಿದ್ದಾರೆ.
ಕಾಡುಗೋಡಿಯ ಬೆಳ್ತೂರಿನಲ್ಲಿ ವಾಸವಾಗಿದ್ದ ಯಾದಗಿರಿ ಮೂಲದ ಸುಂದರಮ್ಮ (55) ಹಾಗೂ ಮೌನೇಶ್ (36)  ಮಂಗಳವಾರ ಬೆಳಗಿನ ಜಾವ ಅಪಾರ್ಟ್‍ಮೆಂಟ್‍ನ ಐದನೇ ಅಂತಸ್ತಿನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು.
SCROLL FOR NEXT