ರಾಜ್ಯ

ದೃಷ್ಟಿದೋಷವುಳ್ಳವರಿಗೆ ಬರವಣಿಗೆಗೆ ಕಾರ್ಯಕರ್ತರನ್ನು ಒದಗಿಸುವ ಮಹಿಳೆ ಪಲ್ಲವಿ

Sumana Upadhyaya

ಬೆಂಗಳೂರು: 2007ರಲ್ಲಿ ಕಲಬುರಗಿಯಿಂದ ಉದ್ಯೋಗ ಹುಡುಕಿಕೊಂಡು ಬಂದ ಪಲ್ಲವಿ ಆಚಾರ್ಯ ತಾನು ಬೆಂಗಳೂರಿನಲ್ಲಿ ಉಳಿದುಕೊಂಡಿದ್ದ ಪೇಯಿಂಗ್ ಗೆಸ್ಟ್ ನಲ್ಲಿ ದೃಷ್ಟಿದೋಷವಿರುವ ಮಹಿಳೆಯನ್ನು ಕಂಡಿದ್ದಳು. ದೃಷ್ಟಿದೋಷವಿದ್ದರೂ ಕೂಡ ತನ್ನೆಲ್ಲಾ ಕೆಲಸಗಳನ್ನು ಆಕೆ ಸ್ವತಃ ಮಾಡುತ್ತಿದ್ದಳು.

ಆಕೆಯ ಬಗ್ಗೆ ಪಲ್ಲವಿ ಹೇಳುವುದು ಹೀಗೆ: ಆಕೆಗೆ ನಾನು ಪರೀಕ್ಷೆಯೊಂದರಲ್ಲಿ ಬರೆಯಲು(ಸ್ಕ್ರೈಬ್ಸ್) ಸಹಾಯ ಮಾಡಿದ್ದೆ. ಕಣ್ಣು ಕಾಣಿಸದಿರುವ ಆಕೆಯ ಅನೇಕ ಸ್ನೇಹಿತರು ಅನೇಕ ಮಂದಿ ಇದ್ದು ಅವರಿಗೆ ಈ ರೀತಿ ಬರೆಯಲು ಸಹಾಯ ಮಾಡುವ ಕಾರ್ಯಕರ್ತರ ಅವಶ್ಯಕತೆಯಿದೆ ಎಂದು ಹೇಳಿದ್ದಳು. ಕೊನೆಗೆ ನಾನು ಒಬ್ಬರು ಈ ರೀತಿ ದೃಷ್ಟಿದೋಷವಿರುವವರಿಗೆ ಬರೆಯಲು ಸಹಾಯ ಮಾಡುವವರನ್ನು ವ್ಯವಸ್ಥೆ ಮಾಡಿದೆ.

ನಂತರ ಕೆಲ ಸಮಯಗಳಲ್ಲಿ ಕಾರ್ಯಜಾಲ ವಿಸ್ತಾರವಾಯಿತು ಎನ್ನುತ್ತಾರೆ ಪಲ್ಲವಿ.
ರಾಜ್ಯಾದ್ಯಂತ ದೃಷ್ಟಿದೋಷವುಳ್ಳ ವಿದ್ಯಾರ್ಥಿಗಳಿಗೆ ಬರೆಯಲು ಸಹಾಯ ಮಾಡುವವರನ್ನು ಪಲ್ಲವಿ ಒದಗಿಸಿಕೊಡುತ್ತಾರೆ. ಅವರಿಗೆ ಪ್ರಯಾಣ ವೆಚ್ಚ ಮತ್ತು ವಸತಿ ವ್ಯವಸ್ಥೆಯ ಅಗತ್ಯವಿದ್ದರೆ ಅದನ್ನು ಕೂಡ ನೆರವೇರಿಸುತ್ತಾರೆ. ಈ ರೀತಿ ಪ್ರತಿವರ್ಷ ಪಲ್ಲವಿ ಸುಮಾರು 2,000ಕ್ಕೂ ಅಧಿಕ ಸ್ಕ್ರೈಬ್ಸ್ ನ್ನು ಒದಗಿಸಿಕೊಡುತ್ತಾರೆ. ಡಿಗ್ರಿ ಪರೀಕ್ಷೆ, ಬ್ಯಾಂಕಿಂಗ್ ಪರೀಕ್ಷೆ, ಕೆಪಿಎಸ್ ಸಿ, ಇನ್ಶೂರೆನ್ಸ್ ಪರೀಕ್ಷೆ ಬರೆಯಲು ನೆರವು ನೀಡುತ್ತಿದ್ದು ಇತ್ತೀಚೆಗೆ ನಡೆದ ಕೆಪಿಎಸ್ ಸಿ ಪರೀಕ್ಷೆಯಲ್ಲಿ 350ಕ್ಕೂ ಅಧಿಕ ಸ್ಕ್ರೈಬ್ಸ್ ನ್ನು ಒದಗಿಸಿಕೊಟ್ಟಿದ್ದಾರೆ.



ಪಲ್ಲವಿ

ಇಲ್ಲಿ ಕಾರ್ಯಕರ್ತರಿಗೆ ನಾನು ಅಭಿನಂದನೆ ಹೇಳಬೇಕು. ಅವರ ಸಹಾಯವಿಲ್ಲದಿದ್ದರೆ ನನಗೆ ಈ ಕಾರ್ಯವನ್ನು ಇಷ್ಟೊಂದು ದೊಡ್ಡ ಮಟ್ಟದಲ್ಲಿ ಮಾಡಲು ಸಾಧ್ಯವಾಗುತ್ತಿರಲಿಲ್ಲ. ನನ್ನ ಕುಟುಂಬದವರು ಇದಕ್ಕೆ ಪ್ರೋತ್ಸಾಹ ನೀಡುತ್ತಿದ್ದಾರೆ. ದೃಷ್ಟಿ ದೋಷವುಳ್ಳವರು ಬರೆಯಲು ಸ್ಕ್ರೈಬ್ಸ್ ಅಗತ್ಯವಿರುವವರು ಪಲ್ಲವಿಯವರನ್ನು 9611911335ನ್ನು ಸಂಪರ್ಕಿಸಬಹುದು.

SCROLL FOR NEXT