ರಾಜ್ಯ

ನಲಪಾಡ್ ಜಾಮೀನು ಅರ್ಜಿ ವಿಚಾರಣೆ ಸೋಮವಾರಕ್ಕೆ ಮುಂದೂಡಿದ ಹೈಕೋರ್ಟ್

Raghavendra Adiga
ಬೆಂಗಳೂರು: ವಿದ್ವತ್ ಮೇಲಿನ ಹಲ್ಲೆ ಪ್ರಕರಣ ಸಂಬಂಧ ಬಂಧಿತನಾಗಿರುವ ಶಾಸಕ ಹ್ಯಾರೀಸ್ ಪುತ್ರ ಮೊಹಮ್ಮದ್ ನಲಪಾಡ್  ಜಾಮೀನು ಅರ್ಜಿ ವಿಚಾರಣೆಯನ್ನು ರಾಜ್ಯ ಹೈಕೋರ್ಟ್ ಸೋಮವಾರಕ್ಕೆ ಮುಂದೂಡಿದೆ 
ಕರ್ನಾಟಕ ಹೈಕೋರ್ಟ್ ನಲ್ಲಿ ನಲಪಾಡ್  ಜಾಮೀನು ಅರ್ಜಿ ವಿಚಾರಣೆಗೆ ಬಂದಿದ್ದು ನಲಪಾಡ್ ಮತ್ತು ಸಹಚರರ ಜಾಮೀನು ಅರ್ಜಿಯನ್ನು ನ್ಯಾಯಾಲಯ ಸೋಮವಾರ ಮಧ್ಯಾಹ್ನ  2. 30 ಕ್ಕೆ ಮುಂದೂಡಿ ಆದೇಶಿಸಿದೆ.
ನ್ಯಾಯಾಲಯಕ್ಕೂ ಸಿಕ್ಕಿರದ ವೈದ್ಯಕೀಯ ವರದಿಗಳು ಆರೋಪಿಗೆ ಹೇಗೆ ಸಿಕ್ಕೆದೆ ಎನ್ನುವುದು ಪ್ರಶ್ನೆಯಾಗಿದೆ ಎಂದು ಎಸ್ ಶ್ಯಾಂಸುಂದರ್ ಹೇಳಿದ್ದು ನಲಪಾಡ್  ಓರ್ವ ಪ್ರಭಾವಿ ಆರೋಪಿ ಎನ್ನುವುದು ಇದರಿಂದಸಾಬೀತಾಗಿದೆ ಎಂದು ಅವರು ಹೇಳಿದರು.
ಅಲ್ಲ್ದೆ ಈ ಸಂಬಂಧ ಮಲ್ಯ ಆಸ್ಪತ್ರೆ ವೈದ್ಯ ಆನಂದ್ ವಿರುದ್ಧ ತನಿಖೆ ನಡೆಯಬೇಕೆಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ವಿದ್ವತ್ ಮೇಲಿನ ಹಲ್ಲೆ ಪ್ರಕರಣದ ಆರೋಪದಲ್ಲಿ ಜೈಲು ಪಾಲಾಗಿರುವ ಆರೋಪಿ ನಲಪಾಡ್  ತನಗಿಂದು ಜಾಮೀನು ಸ್ಕ್ಕಿಯೇ ಸಿಕ್ಕಲಿದೆ ಎನ್ನುವ ಸಂತಸದಲ್ಲಿದ್ದ ವೇಳೆ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿದ ನ್ಯಾಯಾಲಯದ ಕ್ರಮ ಆರೋಪಿಗೆ ತೀವ್ರ ನಿರಾಸೆ ತಂದಿದೆ ಎನ್ನಲಾಗಿದೆ.
SCROLL FOR NEXT