ಬೆಂಗಳೂರು: ಹಿಟ್ ಆಂಡ್ ರನ್ ಪ್ರಕರಣ, ಪೋಲೀಸ್ ಪೇದೆ ಸಾವು 
ರಾಜ್ಯ

ಬೆಂಗಳೂರು: ಹಿಟ್ ಆಂಡ್ ರನ್ ಪ್ರಕರಣ, ಪೋಲೀಸ್ ಪೇದೆ ಸಾವು

ಬೆಂಗಳೂರಿನಲ್ಲಿ ನಡೆದ ಹಿಟ್ ಅಂಡ್‌ ರನ್ ಪ್ರಕರಣವೊಂದರಲ್ಲಿ ಪೋಲೀಸ್ ಮುಖ್ಯ ಪೇದೆಯೊಬ್ಬರು ಮೃತಪಟಿದ್ದಾರೆ.

ಬೆಂಗಳೂರು: ಬೆಂಗಳೂರಿನಲ್ಲಿ ನಡೆದ ಹಿಟ್ ಅಂಡ್‌ ರನ್ ಪ್ರಕರಣವೊಂದರಲ್ಲಿ ಪೋಲೀಸ್ ಮುಖ್ಯ ಪೇದೆಯೊಬ್ಬರು ಮೃತಪಟಿದ್ದಾರೆ. 
ಬೆಂಗಳೂರು ಬ್ಯಾಟರಾಯನಪುರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು ಬ್ಯಾಟರಾಯನಪುರ ಸಂಚಾರಿ ಠಾಣೆಯ ಕಾನ್‍ಸ್ಟೆಬಲ್ ರವಿಶಂಕರ್ ಸಾವನ್ನಪ್ಪಿದ್ದಾರೆ.ಜತೆಯಲ್ಲಿದ್ದ ಇನ್ನೋರ್ವ ಹೋಮ್‌ ಗಾರ್ಡ್‌ ವೆಂಕೋಬ್‌ ರಾವ್‌ ಅವರಿಗೆ ಗಾಯಗಳಾಗಿದೆ.
ಶನಿವಾರ ಮಧ್ಯಾಹ್ನ 12.45 ರ ಸಮಯದಲ್ಲಿ ರವಿಶಂಕರ್ ಹೊಸಕೆರೆ ಹಳ್ಳಿ ಬಳಿಯ ನೈಸ್‍ರಸ್ತೆ ಜಂಕ್ಷನ್ ಸಮೀಪ ಹೋಗುತ್ತಿದ್ದಾಗ ಲಾರಿಯೊಂದು ಬಂದು ಡಿಕ್ಕಿ ಹೊಡೆದಿದೆ. ಹೀಗೆ ಡಿಕ್ಕಿ ಹೊಡೆದ ರಭಸಕ್ಕೆ ಪೇದೆ ರವಿಶಂಕರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಆದರೆ ಹೀಗೆ ಗುದ್ದಿದ ವಾಹನ ಚಾಲಕ ವಾಹನವನ್ನು ನಿಲ್ಲಿಸದೆ ಪರಾರಿಯಾಗಿದ್ದಾನೆ.
ಬ್ಯಾಟರಾಯನಪುರ ಪೋಲೀಸರು  ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ಬ್ಯಾಟರಾಯನಪುರ ಠಾಣೆಯಲ್ಲಿ ಪ್ರಕರಣ ದಾಕಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT