ಶಿವಮೊಗ್ಗ: ನಿಧಿ ಆಸೆಗೆ ನರಬಲಿ, ನಡೆಸಿದ್ದ ನಾಲ್ವರ ಬಂಧನ 
ರಾಜ್ಯ

ಶಿವಮೊಗ್ಗ: ನಿಧಿ ಆಸೆಗೆ ನರಬಲಿ ನಡೆಸಿದ್ದ ನಾಲ್ವರ ಬಂಧನ

ನಿಧಿಯಾಸೆಗಾಗಿ ನರಬಲಿ ನಿಡಿದ್ದ ನಾಲ್ವರನ್ನು ಶಿಕಾರಿಪುರ ಗ್ರಾಮಾಂತರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಶಿವಮೊಗ್ಗ: ನಿಧಿಯಾಸೆಗಾಗಿ ನರಬಲಿ ನಿಡಿದ್ದ ನಾಲ್ವರನ್ನು ಶಿಕಾರಿಪುರ ಗ್ರಾಮಾಂತರ ಠಾಣಾ ಪೊಲೀಸರು ಬಂಧಿಸಿದ್ದಾರೆ. 
ಕೇಶ್ಯನಾಯ್ಕ್(65)  ನಿಧಿಯಾಸೆಗೆ ಬಲಿಯಾದ ವ್ಯಕ್ತಿ. ಮಾರ್ಚ್ 7ರಂದು ಶಿಕಾರಿಪುರ ತಾಲೂಕಿನ ಅಂಜನಾಪುರದಲ್ಲಿ ನಿಧಿ ಸಿಕ್ಕುತ್ತದೆ ಎನ್ನುವ ಕಾರಣದಿಂಡ ನಾಲ್ವರು ಆರೋಪಿಗಳಾದ  ರಂಗಪ್ಪ, ಶೇಖರಪ್ಪ, ಮಂಜುನಾಥ ಹಾಗೂ ಗೌಸ್ ಪೀರ್ ಸೇರಿ ಕೇಶ್ಯನಾಯ್ಕ್  ಹತ್ಯೆ ಮಾಡಿದ್ದರು.
ಆರೋಪಿಗಳು ಕೇಶ್ಯನಾಯ್ಕ್ ಅವರ ರುಂಡ, ಕೈ, ಕಾಲು ಎಲ್ಲವನ್ನೂ ಬೇರ್ಪಡಿಸುವ ಮುಖೇನ ದಾರುಣವಾಗಿ ಕೊಲೆ ಮಾಡಿದ್ದರು. ಹೊಳೆ ದಂಡೆಯಲ್ಲಿ ಇರುವ ಹೊನ್ನೇಮರ ಚೌಡಮ್ಮ ದೇವಾಲಯದ ಬಳಿ ನಿಧಿ ಇದೆ, ನರಬಲಿ ನೀಡಿದ್ದಾದರೆ ನಿಧಿಯು ನಮಗೆ ದೊರೆಯಲಿದೆ ಎಂದು ನಂಬಿದ್ದ ಆರೋಪಿಗಳು ಈ ಕೃತ್ಯ ನಡೆಸಿದ್ದಾರೆ.
ನಿಧಿಗಾಗಿ ನರಬಲಿ ನಿಡಿದ್ದ ಪ್ರಕರಣ ಜಿಲ್ಲೆಯಾದ್ಯಂತ ಬಾರೀ ಕಳವಳ ಮೂಡಿಸಿತ್ತು.  ಪ್ರಕರಣದ ಬೆನ್ನತ್ತಿ ತನಿಖೆ ನಡೆಸಿದ್ದ ಶಿಕಾರಿಪುರ ಗ್ರಾಮಾಂತರ ಪೊಲೀಸರು ಇದೀಗ ಆರೋಪಿಗಳನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ..

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನ್ಯಾಯಾಂಗದಲ್ಲಿ ಭ್ರಷ್ಟಾಚಾರದ ಪಾಠ: ಕೇಂದ್ರ ಕ್ಷಮೆಯಾಚಿಸುತ್ತಿದ್ದಂತೆ NCERT ಪಠ್ಯ ಪುಸ್ತಕ ಬ್ಯಾನ್, ಪ್ರತಿಗಳನ್ನು ವಶಕ್ಕೆ ಪಡೆಯಲು ಸುಪ್ರೀಂ ಸೂಚನೆ

ಬಿಕಿನಿ ಧರಿಸಿರುವ ಮಹಿಳೆಯರ ಜೊತೆಗೆ ಸ್ಟೀಫನ್ ಹಾಕಿಂಗ್! Epstein ಫೈಲ್ಸ್ ನಲ್ಲಿ ಪೋಟೋ ಬಿಡುಗಡೆ

'The Kerala Story 2: Goes Beyond' ಬಿಡುಗಡೆಗೆ ಕೇರಳ ಹೈಕೋರ್ಟ್ ತಡೆ

ಅಪ್ರಾಪ್ತ ಬಾಲಕಿಯೊಂದಿಗೆ ಅನುಚಿತ ವರ್ತನೆ: ಪೋಕ್ಸೋ ಕೇಸ್ ದಾಖಲಾಗುತ್ತಿದಂತೆ ಮಲ್ಲಿಕಾರ್ಜುನ ಮುತ್ಯಾ video ರಿಲೀಸ್!

ನೀವು ಪಡೆದ IMF ಬೇಲ್ಔಟ್‌ಗಿಂತ 2 ಪಟ್ಟು ಹೆಚ್ಚು; ಜಾಗಬಿಟ್ಟು ಹೋಗುವುದೇ ಪಾಕ್​ಗಿರುವ ಒಂದೇ ಆಯ್ಕೆ: ವಿಶ್ವಸಂಸ್ಥೆಯಲ್ಲಿ ಭಾರತ ವಾಗ್ದಾಳಿ!

SCROLL FOR NEXT