ಮೈಸೂರು: ಒಂದು ಸರಳವಾದ ಸಂಭಾಷಣೆ ಟ್ವಿಟ್ಟರ್ ನಲ್ಲಿ ಭಾರೀ ಟ್ರೋಲಿಂಗ್ ಗೆ ಕಾರಣವಾಗಲಿದೆ ಎಂದು ಯಾರೂ ಭಾವಿಸಿರಲಿಲ್ಲ!
ಮೈಸೂರು ಪ್ರವಾಸದಲ್ಲಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನಗರದ ಮಹಾರಾಣಿಯ ಆರ್ಟ್ಸ್ ಕಾಲೇಜ್ ಫಾರ್ ವುಮೆನ್ಸ್ ನಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದದಲ್ಲಿ ತೊಡಗಿದ್ದರು. ಆ ವೇಳೆ ವಿದ್ಯಾರ್ಥಿನೊಯೊಬ್ಬಳು ನ್ಯಾಷನಲ್ ಕ್ಯಾಡೆಟ್ ಕಾರ್ಪ್ಸ್(ಎನ್ ಸಿಸಿ) ಕುರಿತು ಪ್ರಶ್ನಿಸಿದಾಗ ರಾಹುಲ್ ’ತನಗೆ ಇದರ ಬಗೆಗೆ ಹೆಚ್ಚು ತಿಳಿದಿಲ್ಲ’ ಎಂದಿದ್ದಾರೆ!
ಎನ್ ಸಿಸಿ ತರಬೇತಿ ಪಡೆದು ’ಸಿ’ ಸರ್ಟಿಫಿಕೇಟ್ ಹೊಂದಿದ ವಿದ್ಯಾರ್ಥಿಗಳಿಗೆ ನೀವು ಯಾವ ರೀತಿಯ ಸೌಲಭ್ಯ ನೀಡುವಿರಿ? ಎಂದು ವಿದ್ಯಾರ್ಥಿನಿಯೊಬ್ಬರು ರಾಹುಲ್ ಗಾಂಧಿಗೆ ಪ್ರಶ್ನಿಸಿದಾಗ ಅವರು ಮೇಲಿನಂತೆ ಉತ್ತರಿಸಿದ್ದಾರೆ.