ರಾಜ್ಯ

ಪಿಎನ್'ಬಿ ಹಗರಣ: ಪ್ರಧಾನಿ ಕಚೇರಿ, ವಿತ್ತ ಸಚಿವಾಲಯಕ್ಕೆ ಬೆಂಗಳೂರು ಉದ್ಯಮಿಯಿಂದ ನೋಟಿಸ್

Manjula VN
ಬೆಂಗಳೂರು; ಬಹುಕೋಟಿ ಜಾಬ್ ನ್ಯಾಷನಲ್ ಬ್ಯಾಂಕ್ ಹಗರಣಕ್ಕೆ ಸಂಬಂಧಿಸಿದಂತೆ ಪ್ರಧಾನಮಂತ್ರಿಗಳ ಕಚೇರಿ ಹಾಗೂ ವಿತ್ತ ಸಚಿವಾಲಯಕ್ಕೆ ಬೆಂಗಳೂರು ಉದ್ಯಮಿಯೊಬ್ಬರು ಲೀಗಲ್ ನೋಟಿಸ್ ಜಾರಿ ಮಾಡಿದ್ದಾರೆ. 
ಹಗರಣದಿಂದ ತಾವು ಕಳೆದುಕೊಂಡಿರುವ ಹಣವನ್ನು ಸರ್ಕಾರ ತುಂಬಿಕೊಡುವಂತೆ ಆಗ್ರಹಿಸಿ ಹರಿ ಪ್ರಸಾದ್ ಎಸ್.ವಿ ಬೆಂಗಳೂರಿನ ಉದ್ಯಮಿ ಎಂಬುವವರು ಪ್ರಧಾನಮಂತ್ರಿ ಕಚೇರಿ, ಜಾರಿ ನಿರ್ದೇಶನಾಲಯ ಹಾಗೂ ವಿತ್ತ ಸಚಿವಾಲಯಕ್ಕೆ ನೋಟಿಸ್ ಜಾರಿ ಮಾಡಿದ್ದಾರೆ. 
ನಾನು ಸೇರಿದಂತೆ ಹಲವು ಫ್ರಾಂಚೈಸಿಗಳು ಹಲವು ಬಾರಿ ಸರ್ಕಾರಕ್ಕೆ ಮಾಹಿತಿ ನೀಡಿ ಮೆಹುಲ್ ಚೋಕ್ಸಿ ವಿರುದ್ಧ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದೆವು. ಹಲವು ಬಾರಿ ಎಚ್ಚರಿಕೆಗಳನ್ನು ನೀಡಿದ್ದರೂ ಸರ್ಕಾರ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಹೀಗಾಗಿ 15 ಪುಟಗಳ ಲೀಗಲ್ ನೋಟಿಸ್ ಅನ್ನು ಪ್ರಧಾನಮಂತ್ರಿಗಳ ಕಚೇರಿ, ಜಾರಿ ನಿರ್ದೇಶನಾಲಯ ಹಾಗೂ ವಿತ್ತ ಸಚಿವಾಲಯಕ್ಕೆ ಹರಿ ಪ್ರಸಾದ್ ಅವರು ನೀಡಿದ್ದಾರೆ. 
ಚೋಕ್ಸಿ ಭಾರತದಲ್ಲಿದ್ದಾಗ ಹಗರಣಗಳ ಕುರಿತಂತೆ ಪೊಲೀಸರಿಗೆ ಹಾಗೂ ಸರ್ಕಾರಕ್ಕೆ ಮಾಹಿತಿ ನೀಡಲಾಗಿತ್ತು. ಆದರೂ, ಬೆಂಗಳೂರು ಪೊಲೀಸರಾಗರಿ ಅಥವಾ ಇತರೆ ರಾಜ್ಯ ಸರ್ಕಾರಗಳಾಲಿ ಇದನ್ನು ಗಂಭೀರವಾಗಿ ಪರಿಗಣಿಸಿ, ಕ್ರಮ ಕೈಗೊಳ್ಳಲಿಲ್ಲ. ಇದು ಚೋಕ್ಸಿಗೆ ದೊಡ್ಡ ಹಗರಣದಲ್ಲಿ ಸ್ವತಂತ್ರವಾಗಿ ಭಾಗಿಯಾಗುವಂತೆ ಮಾಡಿತು ಎಂದು ಹರಿ ಪ್ರಸಾದ್ ಅವರು ಹೇಳಿಕೊಂಡಿದ್ದಾರೆ. 
ಹರಿ ಪ್ರಸಾದ್ ಅವರ ಆಪ್ತರು ಮಾಹಿತಿ ನೀಡಿರುವ ಪ್ರಕಾರ, ಚೋಕ್ಸಿ ಪುತ್ರ ಅಮೆರಿಕದಲ್ಲಿ ವಾಸ್ತವ್ಯ ಹೂಡಿದ್ದು, ಪುತ್ರಿ ಬ್ರುಸೆಲ್ಸ್ ನಲ್ಲಿದ್ದಾರೆ. ಇನ್ನು ಪತ್ನಿ ದುಬೈ ಹಾಗೂ ಅಮೆರಿಕದಲ್ಲಿ ನೆಲೆಸಿದ್ದಾರೆ. ಯಾರೊಬ್ಬರೂ ಭಾರತಕ್ಕೆ ಬರುವ ಸ್ಥಿತಿಯಲ್ಲಿಲ್ಲ ಎಂದು ಹೇಳಿದ್ದಾರೆ. 
ಚೋಕ್ಸಿಗೆ ಸೇರಿದ ರೂ.1,300 ಕೋಟಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಸರ್ಕಾರ ಹೇಳಿದೆ, ಬ್ಯಾಂಕ್ ಗೆ ಆ ಹಣವನ್ನು ನೀಡುವುದಕ್ಕೂ ಮುನ್ನ ನನಗೆ ಮೋಸ ಮಾಡಿರುವ ರೂ.14,64,38,604 ನ್ನು ನೀಡಬೇಕು.
ಈಗಾಗಲೇ ಸರ್ಕಾರಕ್ಕೆ ಲೀಗಲ್ ನೋಟಿಸ್ ಕಳುಹಿಸಲಾಗಿದ್ದು, ಒಂದು ವೇಳೆ ಸರ್ಕಾರದಿಂದ ಯಾವುದೇ ರೀತಿಯ ಪ್ರತಿಕ್ರಿಯೆಗಳು ಬರದೇ ಹೋದರೆ ಸುಪ್ರೀಂಕೋರ್ಟ್ ಮೆಟ್ಟಿಲೇರಲಾಗುತ್ತದೆ ಎಂದು ತಿಳಿಸಿದ್ದಾರೆ. 
SCROLL FOR NEXT