ರಾಜ್ಯ

ಮೋದಿಯವರ ಆಡಳಿತದಲ್ಲಿ ಗೋ ಮಾಂಸ ರಫ್ತು ಹೆಚ್ಚಳ: ರಾಮಲಿಂಗಾ ರೆಡ್ಡಿ

Sumana Upadhyaya

ಬೆಂಗಳೂರು: ಗೋ ಹತ್ಯೆ ನಿಷೇಧ ಕುರಿತು ಬಿಜೆಪಿ ಇಬ್ಭಗೆಯ ನೀತಿ ತಳೆದಿದೆ ಎಂದು ಬಿಜೆಪಿ ವಿರುದ್ಧ ಆರೋಪಿಸಿರುವ ಗೃಹ ಸಚಿವ ರಾಮಲಿಂಗಾ ರೆಡ್ಡಿ, ಪ್ರಧಾನಿ ನರೇಂದ್ರ ಮೋದಿ ಆಡಳಿತದಲ್ಲಿ ದೇಶದಲ್ಲಿ ಗೋಮಾಂಸ ರಫ್ತು ಹೆಚ್ಚಾಗಿದೆ ಎಂದಿದ್ದಾರೆ.

ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಗೋಮಾಂಸ ನಿಷೇಧ ಕಾನೂನು ಜಾರಿಗೆ ತರಲಾಗುವುದು ಎಂದು ಇತ್ತೀಚೆಗೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಮತ್ತು ಯೋಗಿ ಆದಿತ್ಯನಾಥ್ ಅವರ ಹೇಳಿಕೆಯನ್ನು ಪ್ರಸ್ತಾಪಿಸಿದ ಅವರು, ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದು ನಾಲ್ಕು ವರ್ಷಗಳಾಯಿತು. ಆದರೂ ಬೇರೆ ದೇಶಗಳಿಗೆ ಗೋ ಮಾಂಸ ರಫ್ತಾಗುವುದನ್ನು ಅವರು ಏಕೆ ನಿಲ್ಲಿಸಲಿಲ್ಲ ಎಂದು ಕೇಳಿದ್ದಾರೆ.

ಇಂದು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೋವುಗಳ ಮೇಲೆ ನಿಜಕ್ಕೂ ಪ್ರೀತಿಯಿದ್ದರೆ ಗೋಮಾಂಸ ರಫ್ತಾಗುವುದನ್ನು ಅವರು ನಿಲ್ಲಿಸಬೇಕು ಎಂದು ಹೇಳಿದ್ದಾರೆ.

ಜಾಗತಿಕ ಮಟ್ಟದಲ್ಲಿ ಗೋ ಮಾಂಸ ರಫ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಆಡಳಿತದಡಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಅದಕ್ಕೆ ಮುಂಚೆ ಅದು ಮೂರನೇ ಸ್ಥಾನದಲ್ಲಿತ್ತು. ಪ್ರಸ್ತುತ ಗೋಮಾಂಸ ರಫ್ತಿನಲ್ಲಿ ಬ್ರೆಜಿಲ್ ಮೊದಲ ಸ್ಥಾನದಲ್ಲಿದ್ದರೆ, ಆಸ್ಟ್ರೇಲಿಯಾ ಮೂರನೇ ಸ್ಥಾನದಲ್ಲಿದೆ.

2015-16ರಲ್ಲಿ ಗೋ ಮಾಂಸ ರಫ್ತಿನಿಂದ 26,682 ಕೋಟಿ ರೂಪಾಯಿ ಬಂದಿದ್ದು, ಇದರರ್ಥ ಬಿಜೆಪಿ ಸರ್ಕಾರ ಗೋ ಮಾಂಸ ನಿಷೇಧ ಮಾಡುತ್ತದೆಯೆಂದೆ? ಅವರಿಗೆ ಗೋವಿನ ಬಗ್ಗೆ ಅಷ್ಟೊಂದು ಪ್ರೀತಿ, ಕಾಳಜಿಯಿದ್ದರೆ ಗೋ ಮಾಂಸ ರಫ್ತನ್ನು ನಿಲ್ಲಿಸಲಿ ಎಂದು ಹೇಳಿದ್ದಾರೆ.

SCROLL FOR NEXT