ರಾಜ್ಯ

ಧಾರವಾಡ: ಹುಚ್ಚು ಬೆಕ್ಕಿನ ಕಾಟಕ್ಕೆ ಇಬ್ಬರ ಸಾವು; ಗ್ರಾಮಕ್ಕೆ ಆರೋಗ್ಯ ಇಲಾಖೆ ಅಧಿಕಾರಿಗಳು ದೌಡು

Nagaraja AB

 ಧಾರವಾಡ :ಹುಚ್ಚು ಬೆಕ್ಕು ಕಡಿತದಿಂದ ವಾರದಲ್ಲಿ ಇಬ್ಬರು ವ್ಯಕ್ತಿಗಳು ಮೃತಪಟ್ಟಿರುವುದರಿಂದ ಧಾರಾವಾಡದ ನೀರಾಲ್ ಕಟ್ಟಿ ಗ್ರಾಮದ ಜನರಲ್ಲಿ ಆತಂಕ ಮನೆಮಾಡಿದೆ.

ಜಿಲ್ಲಾಕೇಂದ್ರದಿಂದ 20 ಕಿಲೋಮೀಟರ್ ದೂರದಲ್ಲಿರುವ ಈ ಗ್ರಾಮದಲ್ಲಿ ಮಾರ್ಚ್ 18 ರಂದು ಒಬ್ಬ ವ್ಯಕ್ತಿ ಮೃತಪಟ್ಟಿದ್ದರೆ, ಮತ್ತೊಬ್ಬ ವ್ಯಕ್ತಿ ಮಾರ್ಚ್ 24 ರಂದು ಸಾವನ್ನಪ್ಪಿದ್ದಾರೆ.

 ಹಠಾತ್ ಆಗಿ ಇಬ್ಬರು ವ್ಯಕ್ತಿಗಳು ಮೃತಪಟ್ಟಿರುವ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ಗ್ರಾಮಕ್ಕೆ ಆಗಮಿಸಿದ್ದು, ಎರಡು ದಿನಗಳಿಂದ ಪ್ರಚಾರಾಂದೋಲನ ನಡೆಸುತ್ತಿದ್ದು,  ಲಸಿಕೆ ಹಾಕುತ್ತಿದ್ದಾರೆ.

ಫೆಬ್ರವರಿ ಮೊದಲ ವಾರದಲ್ಲಿ ಶಂಕಿತ ಹುಚ್ಚು ಬೆಕ್ಕು ಗ್ರಾಮದ ಒಂದು ಮಗು ಸೇರಿದಂತೆ ಐರು ಮಂದಿಗೆ ಕಚಿತ್ತು. ಹೀಗೆ ಕಚ್ಚಿಕೊಂಡವರಲ್ಲಿ ಒಬ್ಬರು ಆ ಬೆಕ್ಕನ್ನು ಹತ್ಯೆಗೈದಿದ್ದಾರೆ.
ಬಳಿಕ ಎಲ್ಲರೂ  ಗರಗ ಬಳಿಯ ಆಸ್ಪತ್ರೆಗೆ ಹೋಗಿ ಇಂಜೆಕ್ಷನ್ ಪಡೆದಿದ್ದಾರೆ. ಎಲ್ಲವೂ ಸರಿಯಾಗಿದೆ ಎಂದು ವೈದ್ಯರು ಸಲಹೆ ನೀಡಿದ್ದಾರೆ.

ಆದರೆ, ಈ ಆರು ಮಂದಿ ಮಾರ್ಚ್ ತಿಂಗಳಲ್ಲಿ ಹಾಸಿಗೆ ಹಿಡಿದಿದ್ದು, ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪೈಕಿ ಗಿರಿಜಾ ಘಂಟಿ, ಮಲ್ಲಿಕಾರ್ಜುನ ಮಾತಗಿ ಎಂಬವರು ರೇಬಿಸ್ ನಿಂದಾಗಿ ಮೃತಪಟ್ಟಿದ್ದಾರೆ.

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ಮೃತ ಗಿರೀಜಾ ಘಂಟಿ ಮಗಳು ಮಂಜುಳಾ ಘಂಟಿ ಪರಿಸ್ಥಿತಿ ಗಂಭೀರವಾದ ನಂತರ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಬದುಕಿಸಲು ಸಾಧ್ಯವಾಗಲಿಲ್ಲ ಎಂದು ಹೇಳಿದರು.

ಈ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಬೆಕ್ಕು ಕಡಿತಕ್ಕೊಳಗಾದ ಇತರರು ಆಸ್ಪತ್ರೆಗೆ ಧಾವಿಸಿ ತಪಾಸಣೆ ಮಾಡಿಸಿದ್ದಾರೆ. ಆದರೆ.ಇವರಲ್ಲಿ ಮಲ್ಲಿಕಾರ್ಜುನ ಮತಗಿ ಎಂಬವರು  ತೀವ್ರ ಅನಾರೋಗ್ಯಕ್ಕಾಗಿ ಮಾರ್ಚ್ 12 ರಂದು ಮೃತಪಟ್ಟಿದ್ದಾರೆ.

 ಇನ್ನುಳಿದ ನಾಲ್ವರ ಆರೋಗ್ಯ ಪರಿಸ್ಥಿತಿ ಸುಧಾರಿಸಿದೆ.ಮುಂಜಾಗ್ರತಾ ಕ್ರಮವಾಗಿ ಲಸಿಕೆ ನೀಡಲಾಗುತ್ತಿದೆ. ಇವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ಭರವಸೆ ನೀಡಿದ್ದಾರೆ.

ಆ ಮಧ್ಯೆ ಆರೋಗ್ಯ ಇಲಾಖೆ ಮುಂಜಾಗ್ರತಾ ಕ್ರಮವಾಗಿ  ಬೀದಿ ನಾಯಿ, ಸಾಕು ಪ್ರಾಣಿಗಳಿಗೂ ಲಸಿಕೆ ನೀಡಲು ನಿರ್ಧರಿಸಿದೆ. ಹುಚ್ಚು ನಾಯಿ ಅಥವಾ ವನ್ಯಜೀವಿಗಳಿಂದ ಕಡಿತಕ್ಕೊಳಾಗಿ ಬೆಕ್ಕಿಗೂ ಹುಚ್ಚು ಬಂದಿರಬಹುದೆಂದು ವೈದ್ಯರು ಶಂಕೆ ವ್ಯಕ್ತಪಡಿಸಿದ್ದಾರೆ.

 ರೋಗ ನಿರೋಧಕ ಶಕ್ತಿ ಹೊಂದಿರುವವರಿಗೆ ಸುಲಭವಾಗಿ ಇಂತಹ ರೋಗ ಹರಡುವುದಿಲ್ಲ. ಆದರೆ, ಇಂತಹ ಶಕ್ತಿ ಹೊಂದಿಲ್ಲದವರು ಯಾವುದೇ ಪ್ರಾಣಿಗಳು ಕಚ್ಚದಂತೆ ಸೂಕ್ತ ಮುನ್ನೆಚ್ಚರಿಕೆ ವಹಿಸಬೇಕೆಂದು ವೈದ್ಯರು ಸಲಹೆ ನೀಡುತ್ತಾರೆ.

SCROLL FOR NEXT