ರಾಜ್ಯ

ಬೆಂಗಳೂರಿಗರೇ ಎಚ್ಚರ: ಗುರುವಾರವೂ ಬಿರುಗಾಳಿ ಸಹಿತ ಮಳೆ ಬೀಳುವ ಸಾಧ್ಯತೆ

Srinivasamurthy VN
ಬೆಂಗಳೂರು: ಉತ್ತರ ಭಾರತದಲ್ಲಿ ಬಿರುಗಾಳಿ ಸಹಿತ ಮಳೆಗೆ 27 ಮಂದಿ ಬಲಿಯಾಗಿರುವ ಬೆನ್ನಲ್ಲೇ, ರಾಜಧಾನಿ ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧೆಡೆ ಗುರುವಾರವೂ ಕೂಡ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಇಲಾಖೆ, ಬೆಂಗಳೂರಿನಲ್ಲಿ ಈಗಾಗಲೇ ಅತ್ಯಧಿಕ ಪ್ರಮಾಣದಲ್ಲಿ ಮಳೆ ಸುರಿಯುತ್ತಿದ್ದು  ಇನ್ನೂ ಕೆಲ ದಿನಗಳ ಕಾಲ ನಗರದಲ್ಲಿ ಮಳೆ ಮುಂದುವರೆಯಲಿದೆ ಎಂದು ಮುನ್ಸೂಚನೆ ನೀಡಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಹವಮಾನ ಇಲಾಖೆ, ದಕ್ಷಿಣ ಕರ್ನಾಟಕದ ಘಟ್ಟಪ್ರದೇಶಗಳಲ್ಲಿ ಇಂದು ಬಿರುಗಾಳಿ ಸಹಿತ ಮಳೆಯಾಗುವ ಸಾಧ್ಯೆತೆ ಇದೆ. ಅಂತೆಯೇ ರಾಜಧಾನಿ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ಚದುರಿದ ಮಳೆಯಾಗುವ ನಿರೀಕ್ಷೆ ಎಂದು ಎಂದು ಟ್ವೀಟ್ ಮಾಡಿದೆ.
ಇನ್ನು ಕೆಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ನಗರದ ತಾಪಮಾನ ಇಳಿಕೆಯಾಗಿದೆ. ಮಂಗಳವಾರ 36 ಡಿಗ್ರಿ ಸೆಲ್ಸಿಯಸ್ ವರೆಗೆ ಏರಿಕೆಯಾಗಿದ್ದ ಗರಿಷ್ಠ ತಾಪಮಾನ ಬುಧವಾರ 33 ರಿಂದ 34 ಡಿ.ಸೆ.ವರೆಗೆ ಇಳಿಕೆಯಾಗಿದೆ. ಇನ್ನೂ ಕೆಲ ದಿನಗಳ ಕಾಲ ನಗರದಲ್ಲಿ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಇನ್ನು ಬೆಸ್ಕಾಂ ಮೂಲಗಳ ಪ್ರಕಾರ ನಗರದ ಬಹುಭಾಗಗಳಲ್ಲಿ ಬುಧವಾರ ಸುರಿದ ಧಾರಾಕಾರ ಗಾಳಿ ಮಳೆಗೆ 90 ವಿದ್ಯುತ್ ಕಂಬ ಹಾಗೂ 8 ಮರಗಳೂ ಸೇರಿದಂತೆ 45ಕ್ಕೂ ಹೆಚ್ಚು ಮರದ ಕೊಂಬೆಗಳು ನೆಲಕಚ್ಚಿವೆ. ಅಂತೆಯೇ ವಿದ್ಯಾರಣ್ಯಪುರದಲ್ಲಿ ಬೃಹತ್ ಗಾತ್ರದ ಮರ ಮನೆಯೊಂದರ ಮೇಲೆ ಬಿದ್ದು ಚಾವಣಿ ಮತ್ತು ಕಾಂಪೌಂಡ್ ಹಾನಿಗೀಡಾಗಿದೆ. ಇದೇ ರೀತಿ ಬೆಂಗಳೂರಿನಲ್ಲಿ ಬುಧವಾರ ಸುರಿದ ಮಳೆಯು ಭಾರೀ ಅನಾಹುತವನ್ನು ಸೃಷ್ಟಿಸಿತ್ತು.
SCROLL FOR NEXT