ರಾಜ್ಯ

ರಾಜ್ಯ ವಿಧಾನ ಸಭೆ ಚುನಾವಣಾ ಫಲಿತಾಂಶ ಬಿಜೆಪಿ ತಕ್ಕ ಪಾಠ ಕಲಿಸುತ್ತದೆ: ಖರ್ಗೆ

Shilpa D
ಕಲಬುರಗಿ: ಮೇ 12 ರಂದು ರಾಜ್ಯ ವಿಧಾನಸಭೆಗೆ ಮತದಾನ ನಡೆಯಲಿದ್ದು, ಮೇ 15 ಕ್ಕೆ ಫಲಿತಾಂಶ ಹೊರಬೀಳಲಿದೆ, ಅಂದಿನ ಫಲಿತಾಂಶ  ಬಿಜೆಪಿಗೆ ತಕ್ಕ ಪಾಠ ಕಲಿಸುತ್ತದೆ, ಎನ್ ಡಿಎ ಮೈತ್ರಿ ಕೂಟವನ್ನು ಜನ ಒಪ್ಪುವುದಿಲ್ಲ ಎಂಬ ಸ್ಪಷ್ಟ ಸಂದೇಶ ರವಾನೆಯಾಗುತ್ತದೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಕಾಂಗ್ರೆಸ್ ಅಭಿವೃದ್ಧಿ ಅಂಶಗಳನ್ನು ಮುಂದಿಟ್ಟುಕೊಂಡು ಪ್ರಚಾರ ನಡೆಸುತ್ತಿದೆ, ಆದರೆ ಬಿಜೆಪಿ ಆರ್ ಎಸ್ ಎಸ್ ನ ಸಿದ್ಧಾಂತಗಳ ಮೇಲೆ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.
ಆರ್ ಎಸ್ ಎಸ್ ಬೆಂಬಲಿತ ಬಿಜೆಪಿ ಸರ್ಕಾರ  ಆರ್ ಎಸ್ ಎಸ್ ನ ಅಜೆಂಡಾಗಳನ್ನು ಅನುಷ್ಠಾನಕ್ಕೆ ತರುತ್ತಿದೆ, ಇದರಿಂದಾಗಿ ಸಮಾಜದ ಬಲಹೀನ ವರ್ಗದವರು, ಅಲ್ಪಸಂಖ್ಯಾತರು ಮಚ್ಚು ಬಡ ವರ್ಗದವರು ಭಯದಿಂದ ಬದುರುವ ವಾತಾವರಣ ನಿರ್ಮಾಣವಾಗಿದೆ ಎಂದು ದೂರಿದ್ದಾರೆ.
ಕರ್ನಾಟಕ ವಿಧಾನಸಭೆ ಚುನಾವಣಾ ಫಲಿತಾಂಶ ಬಹಳ ನಿರ್ಣಾಯಕವಾದದ್ದಾಗಿದ್ದು ,ರಾಜ್ಯ ಮತ್ತು ರಾಷ್ಟ್ರದ ಹಿತಾಸಕ್ತಿ ಅಡಗಿದೆ.  ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಡೆಯದಿದ್ದರೇ ಪ್ರಜಾಪ್ರಭುತ್ವದ ನಾಶವಾಗುವುದು ಖಚಿತ ಸಂವಿಧಾನದಲ್ಲಿ ಬದಲಾವಣೆ ತರುವುದಾಗಿ ಮಾತನಾಡುತ್ತಾರೆ, ಹಾಗೆಯೇ ಅಲ್ಪ ಸಂಖ್ಯಾತರ ವಿರುದ್ಧ ಹಿಂದುತ್ವವನ್ನು ಜಾರಿಗೆ ತರುತ್ತಾರೆ, ಹಿಗಾಗಿ ಜನ ಬಿಜೆಪಿಯನ್ನು ಒಪ್ಪಿಕೊಳ್ಳಬಾರದು ಎಂದು ತಿಳಿಸಿದ್ದಾರೆ.
SCROLL FOR NEXT