ರಾಜ್ಯ

ಬೆಂಗಳೂರು ಉಪನಗರ ರೈಲುಗಳಲ್ಲೂ ಹವಾನಿಯಂತ್ರಿತ ಕೋಚ್: ಪಿಯುಶ್ ಗೋಯಲ್

Raghavendra Adiga
ಬೆಂಗಳೂರು: ಮೆಟ್ರೋ ರೈಲುಗಳಂತೆಯೇ ಬೆಂಗಳೂರು ಉಪನಗರ ರೈಲುಗಳು ಸಹ ಹವಾನಿಯಂತ್ರಿತ ಬೋಗಿಗಳನ್ನು ಹೊಂದಿರಲಿದೆ ಎಂದು ರೈಲ್ವೆ ಸಚಿವ ಪಿಯುಶ್ ಗೋಯಲ್ ತಿಳಿಸಿದ್ದಾರೆ.
ದೇಶಾದ್ಯಂತ ರೈಲ್ವೇ ನಿಲ್ದಾಣ ಹಾಗೂ ರೈಲುಗಳಲ್ಲಿ ಮಹಿಳಾ ಮತ್ತು ಮಕ್ಕಳ ಸುರಕ್ಷತೆಗಾಗಿ ಸಿಸಿಟಿವಿ ಕ್ಯಾಮೆರಾಗಳನ್ನು ಸ್ಥಾಪಿಸುವ ಪ್ರಕ್ರಿಯೆ ಆರಂಭವಾಗಿದೆ ಎಂದು ಅವರು ಹೇಳಿದರು.ಕರ್ನಾಟಕದ ವಾಣಿಜ್ಯ ಮತ್ತು ಕೈಗಾರಿಕಾ ಒಕ್ಕೂಟ ಆಯೋಜಿಸಿದ್ದ ಸಂವಾದದಲ್ಲಿ ಮಾತನಾಡಿದ ಸಚಿವರು "ಬೆಂಗಳೂರು ಉಪನಗರ ರೈಲು ಯೋಜನೆ ಪೂರ್ಣಗೊಂಡಾಗ ಸುಮಾರು 15 ಲಕ್ಷ ಪ್ರಯಾಣಿಕರು ಪ್ರಯಾಣಿಸಬಹುದು" ಎಂದಿದ್ದಾರೆ.
"ಹೆಚ್ಚುವರಿ ಸ್ಥಳಗಳನ್ನು ಸೂಚಿಸಲು ಕೇಳಿರುವ ಕೇಂದ್ರವು ಉಪನಗರ ರೈಲು ಯೋಜನೆಗಾಗ್ಗಿ 50:50 ನಿಧಿ ಹಂಚಿಕೆ ಒಪ್ಪಂದಕ್ಕೆ ಬದ್ದವಾಗಿದೆ. ನಾವು ರಾಜ್ಯವು ನಿಡಿದ ಜಾಗವನ್ನು ನಿರ್ವಹಣೆ ಮಾಡಬಹುದು." ಅವರು ಹೇಳಿದ್ದಾರೆ.
1994 ರ ಆರಂಭದಲ್ಲಿ ಪ್ರಸ್ತಾಪಿಸಲಾದ ಯೋಜನೆಯನ್ನು ಭೂಮಿ ಲಭ್ಯತೆಯ ಕೊರತೆ ಕಾರಣ ನೀಡಿ ತಡಹಿಡಿಯಲಾಗಿತ್ತು ಎಂದ ಗೋಯಲ್ ಈ ಬಾರಿ ಲಭ್ಯವಿರುವ ಜಾಗವನ್ನು ಪರಿಗಣಿಸಿ ಭೂಮಟ್ಟದಲ್ಲಿ 92 ಕಿಮೀ ಮತ್ತು ಮೇಲ್ಸೇತುವೆ ಅಥವಾ ಮೇಲು ರಸ್ತೆ ಮಟ್ಟದಲ್ಲಿ 68 ಕಿಮೀ ರೈಲ್ವೆ ಟ್ರ್ಯಾಕ್ ನಿರ್ಮಾಣ ಮಾಡಲಿದ್ದೇವೆ ಎಂದರು.
7,000 ರೈಲ್ವೆ ನಿಲ್ದಾಣಗಳಲ್ಲಿ ಉಚಿತ ವೈ-ಫೈ
ಇನ್ನು ಒಂದು ವರ್ಷದ ಅವಧಿಯಲ್ಲಿ ದೇಶಾದ್ಯಂತ 7,000 ರೈಲ್ವೆ ನಿಲ್ದಾಣಗಳಲ್ಲಿ ಉಚಿತ ವೈ-ಫೈ ಸೌಲಭ್ಯವನ್ನು ನೀಡಲಾಗುವುದು ಎಂದು ಸಚಿವರು ಹೇಳಿದರು. ಇದು ದೂರ, ದುರ್ಗಮ ಗ್ರಾಮಗಳ ಜನರಿಗೆ ರೈಲ್ವೆ ನಿಲ್ದಾಣದತ್ತ ಕರೆತರುತ್ತದೆ. ಅವರು  ವೈ-ಫೈ ಬಳಸಿಕೊಂಡು ಜ್ಞಾನವನ್ನು ಪಡೆದುಕೊಳ್ಳಲು ಸಾಧ್ಯವಾಗಿಸುತ್ತದೆ. ಎಂದ ಸಚಿವರು ಇದಕ್ಕಾಗಿ ಕೇರಳದ ಎರ್ನಾಕುಲಂ ಯುವಕನ ಉದಾಹರಣೆ ನೀಡಿದ್ದಾರೆ. ರ್ನಾಕುಲಂ ರೈಲ್ವೆ ನಿಲ್ದಾಣದ ಲ್ಲಿ ಕೆ. ಶ್ರೀನಾಥ್ ರೈಲು ನಿಲ್ದಾಣದ ಉಚಿತ ವೈ-ಫೈ ಬಳಸಿಕೊಂಡು ಜ್ಞಾನವನ್ನು ಹೊಂದಿದ್ದಲ್ಲದೆ  ಕೇರಳ ಪಬ್ಲಿಕ್ ಸರ್ವಿಸ್ ಪರೀಕ್ಷೆಗಳನ್ನು  ತೇರ್ಗಡೆಯಾಗಿದ್ದಾರೆ ಎಂದು ಅವರು ಹೇಳಿದರು.
ಕಡಿಮೆ ವೆಚ್ಚದಲ್ಲಿ ಉತ್ತಮ ಗುಣಮಟ್ಟದ ಸ್ಯಾನಿಟರಿ ಪ್ಯಾಡ್  ತಯಾರಿಸಲು ಮತ್ತು ಮಾರಾಟ ಮಾಡಲು ಉದ್ಯಮಿಗಳಿಗೆ, ನಿರ್ದಿಷ್ಟವಾಗಿ ಮಹಿಳೆಯರಿಗೆ ಉಚಿತ ತರಬೇತಿ ನೀಡಲು ರೈಲ್ವೆ ಇಲಾಖೆ ಯೋಜಿಸಿದೆ ಎಂದು ಸಚಿವರು ಹೇಳಿದ್ದಾರೆ.
SCROLL FOR NEXT