ಹಲ್ಲೆ ಪ್ರಕರಣ: ನಲಪಾಡ್ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ
ಬೆಂಗಳೂರು: ವಿದ್ವತ್ ಮೇಲಿನ ಹಲ್ಲೆ ಪ್ರಕರಣದಲ್ಲಿ ಬಂಧಿತನಾಗಿರುವ ಕಾಂಗ್ರೆಸ್ ನಾಯಕ ಎನ್.ಎ. ಹ್ಯಾರೀಸ್ ಪುತ್ರ ಮಹಮದ್ ನಲಪಾಡ್ ನ್ಯಾಯಾಂಗ ಬಂಧನ ಅವಧಿಯನ್ನು ಮತ್ತೆ ವಿಸ್ತರಿಸಿ ನ್ಯಾಯಾಲಯ ಆದೇಶಿಸಿದೆ.
ಪ್ರಕರಣ ಸಂಬಂಧ ಬಂಧಿತರಾಗಿದ್ದ ನಲಪಾಡ್ ಹಾಗೂ ಇತರೆ ಆರೋಪಿಗಳ ನ್ಯಾಯಾಂಗ ಬಂಧನ ಅವಧಿ ಮೇ 11ಕ್ಕೆ ಅಂತ್ಯವಾಗಿದ್ದು ಇಂದು ಬೆಂಗಳೂರಿನ 1ನೇ ಎಸಿಎಂಎಂ ನ್ಯಾಯಾಲಯದಲ್ಲಿ ವೀಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾದ ಆರೋಪಿಗಳನ್ನುದ್ದೇಶಿಸಿ ನ್ಯಾಯಾಧೀಶರು ತೀರ್ಪು ನೀಡಿದ್ದಾರೆ.
ಮೇ 25ರವರೆಗೆ ನ್ಯಾಯ್ಂಗ ಬಂಧನ ಅವಧಿ ವಿಸ್ತರಣೆಯಾಗಿರುವ ಹಿನ್ನೆಲೆಯಲ್ಲಿ ನಲಪಾಡ್ ಮತ್ತು ಸಹಚರರು ಇನ್ನೂ 14 ದಿನ ನ್ಯಾಯ್ಂಗ ಬಂಧನದಲ್ಲಿಯೇ ಇರಬೇಕುದೆ.
ಆರೋಪಿಗಳ ವಿರುದ್ಧ 60 ದಿನಗಳೊಳಗೆಆರೋಪಪಟ್ಟಿ ಸಲ್ಲಿಸಲು ಪೋಲೀಸರು ವಿಫಲವಾಗಿದ್ದ ಕಾರಣ ನ್ಯಾಯಾಲಯ ಆರೋಪಿಗಳ ನ್ಯಾಯಾಂಗ ಬಂಧನ ಅವಧಿ ಮೇ 11ರವರೆಗೆ ವಿಸ್ತರಣೆ ಂಆಡಿತ್ತು. ಏತನ್ಮಧ್ಯೆ ಪ್ರಕರಣ ಸಂಬಂಧ ಸಿಸಿಸ್ಬಿ ಪೋಲೀಸರು 600 ಪುಟಗಳ ಆರೋಪಪಟ್ಟಿ ಸಲ್ಲಿಸಿದ್ದಾರೆ.
ನಲಪಾಡ್ ಹಾಗೂ ಸಹಚರರು ಫೆ.17ರಂದು ಬೆಂಗಳೂರಿನ ಯು.ಬಿ.ಸಿಟಿಯ ಫರ್ಜಿ ಕೆಫೆಯಲ್ಲಿ ವಿದ್ವತ್ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos