ಬೆಂಗಳೂರು: ವೈದ್ಯಕೀಯ ಎಂಜಿನಿಯರಿಂಗ್ ಮತ್ತು ಡೆಂಟಲ್ ಕಾಲೇಜುಗಳ ಸಮೂಹ(ಕಾಮೆಡ್ ಕೆ) 2018ನೇ ಸಾಲಿನ ಪ್ರವೇಶ ಪರೀಕ್ಷೆ ನಾಳೆ ದೇಶಾದ್ಯಂತ ನಡೆಯಲಿದೆ.
ರಾಜ್ಯದಲ್ಲಿನ ಖಾಸಗಿ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕಾಲೇಜುಗಳ ಪ್ರವೇಶಗಳಿಗೆ ಪರೀಕ್ಷೆ ನಡೆಸುವ ಕಾಮೆಡ್ ಕೆ ಈ ವರ್ಷ ಸುಮಾರು 5,758ಕ್ಕೂ ಅಧಿಕ ಅರ್ಜಿಗಳನ್ನು ಸ್ವೀಕರಿಸಿದೆ. ಕಳೆದ ವರ್ಷ 70,655 ಅರ್ಜಿಗಳು ಸ್ವೀಕೃತವಾದರೆ ಈ ವರ್ಷ 76,413 ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ.
ಕಂಪ್ಯೂಟರ್ ಆಧಾರಿತ ಪರೀಕ್ಷೆಯನ್ನು ದೇಶಾದ್ಯಂತ 340 ಕೇದ್ರಗಳಲ್ಲಿ 153 ನಗರಗಳಲ್ಲಿ ನಡೆಸಲಾಗುತ್ತದೆ. ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು 190 ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಸೀಟು ಪಡೆಯಲಿದ್ದಾರೆ. ಕಾಮೆಡ್ ಕೆಯಡಿ 20,000 ಎಂಜಿನಿಯರಿಂಗ್ ಸೀಟುಗಳು ದೊರೆಯಲಿವೆ. ಕಾಲೇಜುಗಳ ಗುಣಮಟ್ಟವನ್ನು ಹೆಚ್ಚಿರುವುದು ಅರ್ಜಿಗಳ ಸಂಖ್ಯೆಯನ್ನು ಹೆಚ್ಚಿಸುತ್ತದೆ. ಆದರೆ ಕಳೆದ ವರ್ಷ ವಿವಿಧ ಕಾಲೇಜುಗಳಲ್ಲಿ ಎಂಜಿನಿಯರಿಂಗ್ ಕೋರ್ಸ್ ಗಳ ಸೀಟುಗಳು ಖಾಲಿಯುಳಿದಿದ್ದವು.
ಈ ಮಧ್ಯೆ, ಕಾಮೆಡ್ ಕೆ ಯುಜಿಇಟಿ ಮತ್ತು ಕ್ಲಾಟ್ ಎರಡೂ ಪರೀಕ್ಷೆ ಬರೆಯುವವರಿಗೆ ತಯಾರಿಗೆ ಕಷ್ಟವಾಗುತ್ತಿದೆ. ಕ್ಲಾಟ್ 2018ನೇ ಸಾಲಿನ ಪರೀಕ್ಷೆ ನಾಳೆ ಅಪರಾಹ್ನ 3 ಗಂಟೆಯಿಂದ 5 ಗಂಟೆಯವರೆಗೆ, ಕಾಮೆಡ್ ಕೆ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ನಡೆಯಲಿದೆ.
ಕಳೆದ ವರ್ಷ ಎರಡೂ ಪರೀಕ್ಷೆ ಒಂದೇ ಸಮಯಕ್ಕೆ ಇದ್ದುದರಿಂದ ವಿದ್ಯಾರ್ಥಿಗಳು ಒಂದು ಪರೀಕ್ಷೆಯನ್ನು ಕಳೆದುಕೊಳ್ಳಬೇಕಾಗಿತ್ತು ಎಂದು ಅಭ್ಯರ್ಥಿಯೊಬ್ಬರು ಹೇಳುತ್ತಾರೆ.