ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ ಮತದಾನ ಆರಂಭವಾಗಿದ್ದು, ಮುಂದಿನ ಐದು ವರ್ಷಗಳ ರಾಜ್ಯದ ಭವಿಷ್ಯವನ್ನು ಕೋಟ್ಯಂತರ ಮತದಾರರು ರೂಪಿಸುತ್ತಿದ್ದಾರೆ.
ಕಳೆದೊಂದು ತಿಂಗಳಿನಿಂದ ರಾಜ್ಯದಲ್ಲಿ ನಡೆದ ರಾಜಕೀಯ ಪಕ್ಷಗಳ ಹೈವೋಲ್ಟೇಜ್ ಪ್ರಚಾರಕ್ಕೆ ತೆರೆ ಬಿದ್ದಿದ್ದು, ಇಂದು ಮತದಾನ ಆರಂಭವಾಗಿದೆ. ಈಗಾಗಲೇ ಮತಘಟ್ಟೆಗಳಲ್ಲಿ ಜನ ಸಾಲುಗಟ್ಟಿ ಮತದಾನ ಮಾಡುತ್ತಿದ್ದು, ಮತಗಟ್ಟೆಗಳಲ್ಲಿ ರಾಜಕೀಯ ಪಕ್ಷಗಳ ಕಾರ್ಯಕರ್ತರು ಮತದಾರರನ್ನು ಓಲೈಸುವ ಅಂತಿಮ ಕ್ಷಣದ ಕಸರತ್ತು ಮಾಡುತ್ತಿದ್ದಾರೆ.
ಇನ್ನು ಮೋದಿ ಅಲೆಯಲ್ಲಿ ತೇಲುತ್ತಿರುವ ಬಿಜೆಪಿ ಅದೇ ಹೆಸರಿನಲ್ಲೇ ತಾನು ಬಹುಮತ ಸಾಧಿಸುತ್ತೇನೆ ಎಂಬ ವಿಶ್ವಾಸದಲ್ಲಿದ್ದು, ಜನಪ್ರಿಯ 'ಭಾಗ್ಯ' ಸರಣಿ ಯೋಜನೆಗಳನ್ನುಘೋಷಣೆ ಮಾಡಿರುವ ಕಾಂಗ್ರೆಸ್ ತನ್ನ ಅಭಿವೃದ್ಧಿ ಕಾರ್ಯಕ್ರಮಗಳ ಆಧಾರದ ಮೇಲೆ ತನಗೆ ಮತನೀಡಿ ಗೆಲುವು ಸಾಧಿಸುವುಂತೆ ಮಾಡಲಿದ್ದಾರೆ ಎಂದು ಹೇಳುತ್ತಿದೆ. ಇತ್ತೆ ಜೆಡಿಎಸ್ ಕೂಡ ಕಳೆದ ಎರಡು ಬಾರಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ಆಡಳಿತವನ್ನು ನೋಡಿರುವ ರಾಜ್ಯದ ಜನತೆ ಈ ಬಾರಿ ತನಗೆ ಅವಕಾಶ ನೀಡಲಿದ್ದಾರೆ ಎಂದು ವಿಶ್ವಾಸದಲ್ಲಿದೆ.
ನಿರ್ಲಕ್ಷ್ಯ ತೋರಿ ಅವಕಾಶ ವಂಚಿತರಾಗದಿರಿ
ಇನ್ನು ರಾಜ್ಯದ ಜನತೆಗೆ ಅತ್ಯಂತ ಮಹತ್ವದ ದಿನವಾಗಿದ್ದು, ಯಾವುದೇ ರೀತಿಯ ಗಂಭೀರ ಕೆಲಸಗಿಳಿದ್ದರೂ ತಪ್ಪದೇ ಮತಗಟ್ಟೆಗೆ ತೆರಳಿ ಮತದಾನ ಮಾಡಿ.. ಮುಂದಿನ ಐದು ವರ್ಷಗಳ ಕಾಲ ನಮ್ಮನ್ನು ಆಳುವ ಸರ್ಕಾರದ ಆಯ್ಕೆ ನಮ್ಮ ಕರ್ತವ್ಯವಾಗಿದ್ದು, ಮತದಾನ ನಮ್ಮ ಹಕ್ಕು. ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ತೋರಿ ಮತದಾನದಿಂದ ವಂಚಿತರಾಗದಿರಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics