ರಾಜ್ಯ

ವಿಶ್ವಾಸ ಮತಕ್ಕೂ ಮೊದಲು ಹಂಗಾಮಿ ಸ್ಪೀಕರ್ ಬೋಪಯ್ಯ ನೇಮಕ ಕುರಿತ ನಿರ್ಧಾರ

Srinivasamurthy VN
ನವದೆಹಲಿ: ಹಿರಿಯ ಶಾಸಕ ಕೆ.ಜೆ. ಬೋಪಯ್ಯ ಹಂಗಾಮಿ ಸ್ಪೀಕರ್ ಆಗಿ ನೇಮಕಗೊಂಡಿರುವುದನ್ನು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ವಿರೋಧಿಸಿದ್ದು, ಈ ಸಂಬಂಧ ಉಭಯ ಪಕ್ಷಗಳು ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಲಿದೆ.
ಮೂಲಗಳ ಪ್ರಕಾರ ಇಂದು ಬೆಳಗ್ಗೆ 10.30ಕ್ಕೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅರ್ಜುನ್ ಕುಮಾರ್ ಸಿಕ್ರಿ ಅವರು ಈ ಅರ್ಜಿಯ ವಿಚಾರಣೆ ನಡೆಸಲಿದ್ದು, ವಿಶ್ವಾಸಮತಕ್ಕೂ ಮುನ್ನ ಎಲ್ಲರ ಚಿತ್ತ ಇದೀಗ ಸುಪ್ರೀಂ ಕೋರ್ಟ್ ನತ್ತ ನೆಟ್ಟಿದೆ. ಒಂದು ವೇಳೆ ಬೋಪಯ್ಯ ಅವರನ್ನೇ ಸುಪ್ರೀಂ ಕೋರ್ಟ್ ಹಂಗಾಮಿ ಸ್ಪೀಕರ್ ಆಗಿ ಮುಂದುವರೆಸಲು ಆದೇಶ ನೀಡಿದರೆ, ಅದರ ಬೆನ್ನಲ್ಲೇ ಇತ್ತ ವಿಧಾನಸೌಧದಲ್ಲಿ ನೂತನ ಶಾಸಕರಿಗೆ ಅವರೇ ಪ್ರಮಾಣ ವಚನ ಬೋಧಿಸಲಿದ್ದಾರೆ. 
ಅಲ್ಲದೆ ವಿಶ್ವಾಸ ಮತ ಯಾಚನೆ ಪ್ರಕ್ರಿಯೆಯ ಸಂಪೂರ್ಣ ಜವಾಬ್ದಾರಿಯೂ ಅವರದೇ ಆಗಿರುತ್ತದೆ. ಶನಿವಾರ ನಡೆಯಲಿರುವ ಬಹುಮತದ ಪರೀಕ್ಷೆ ಅಂತಿಮವಾಗಿ ನ್ಯಾಯಾಂಗ ಪರಿಶೀಲನೆಗೆ ಒಳಪಟ್ಟಿರುತ್ತದೆ. ಒಂದು ವೇಳೆ ಈ ಪ್ರಕ್ರಿಯೆಯಲ್ಲಿ ಏನಾದರೂ ದೋಷವಿದೆ ಎಂದು ಕಾಂಗ್ರೆಸ್ ಮತ್ತು ಜೆಡಿಎಸ್‌ ಅತೃಪ್ತಿ ವ್ಯಕ್ತಪಡಿಸಿದರೆ ಅದನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲು ಅವಕಾಶವಿದೆ’ ಎಂಬುದು ಕಾನೂನು ತಜ್ಞರ ಅಭಿಪ್ರಾಯ.
SCROLL FOR NEXT