ನಾನು ಅಧಿಕಾರಕ್ಕಾಗಿ ಸಾಯಲ್ಲ, ಸಾಯುವುದಿದ್ದರೆ ಜನರಿಗಾಗಿ ಸಾಯುತ್ತೇನೆ: ಎಚ್ ಡಿಕೆಗೆ ಬಿಎಸ್ ವೈ ಟಾಂಗ್ 
ರಾಜ್ಯ

ನಾನು ಅಧಿಕಾರಕ್ಕಾಗಿ ಸಾಯಲ್ಲ, ಸಾಯುವುದಿದ್ದರೆ ಜನರಿಗಾಗಿ ಸಾಯುತ್ತೇನೆ: ಎಚ್ ಡಿಕೆಗೆ ಬಿಎಸ್ ವೈ ಟಾಂಗ್

"ಸಾಯುವುದಕ್ಕೂ ಮುನ್ನ ಒಮ್ಮೆ ಅಧಿಕಾರ ನೀಡಿ ಎಂದು ನಾನೆಂದೂ ಕೇಳುವುದಿಲ್ಲ, ನಾನು ಸಾಯುವುದಿದ್ದರೆ ಜನರಿಗಾಗಿ ಸಾಯುತ್ತೇನೆ, ಕೊನೆಯುಸಿರಿರುವವರೆಗೂ ಜನರಿಗಾಗಿ ಹೋರಾಡುತ್ತೇನೆ"

ಬೆಂಗಳೂರು: "ಸಾಯುವುದಕ್ಕೂ ಮುನ್ನ ಒಮ್ಮೆ ಅಧಿಕಾರ ನೀಡಿ ಎಂದು ನಾನೆಂದೂ ಕೇಳುವುದಿಲ್ಲ, ನಾನು ಸಾಯುವುದಿದ್ದರೆ ಜನರಿಗಾಗಿ ಸಾಯುತ್ತೇನೆ, ಕೊನೆಯುಸಿರಿರುವವರೆಗೂ ಜನರಿಗಾಗಿ ಹೋರಾಡುತ್ತೇನೆ" ಇದು ಯಡಿಯೂರಪ್ಪ ಮೇ.19 ರಂದು ವಿಧಾನಸಭೆಯಲ್ಲಿ ತಮ್ಮ ವಿದಾಯ ಭಾಷಣದಲ್ಲಿ ಹೆಚ್ ಡಿ ಕುಮಾರಸ್ವಾಮಿಗೆ ಟಾಂಗ್ ನೀಡಿದ ರೀತಿ. 
104 ಶಾಸಕರ ಸಂಖ್ಯಾಬಲವಿದ್ದ ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಮೇ.17 ರಂದು ಪ್ರಮಾಣವಚನ ಸ್ವೀಕರಿಸಿದ್ದರು. ಯಡಿಯೂರಪ್ಪ ಅವರ ಪ್ರಮಾಣವಚನವನ್ನು ಪ್ರಶ್ನಿಸಿ ಕಾಂಗ್ರೆಸ್-ಜೆಡಿಎಸ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ ಹಿನ್ನೆಲೆಯಲ್ಲಿ ಮೇ.19 ರಂದು ಯಡಿಯೂರಪ್ಪ ಅವರಿಗೆ ಬಹುಮತ ಸಾಬೀತುಪಡಿಸುವಂತೆ ಸೂಚಿಸಿತ್ತು. 
ಬಹುಮತ ಸಾಬೀತುಪಡಿಸುವುದಕ್ಕೂ ಮುನ್ನ ವಿಧಾನಸಭೆಯಲ್ಲಿ ಭಾಷಣ ಮಾಡಿದ ಯಡಿಯೂರಪ್ಪ, "ಕುಮಾರಸ್ವಾಮಿಯವರೇ ರಾಜ್ಯದ ಜನತೆಗಾಗಿ ನಿರಂತರ ಹೋರಾಟ ಮಾಡುತ್ತೇನೆ, ಸಾಯುವುದಕ್ಕೂ ಮುನ್ನ ಒಮ್ಮೆ ಅಧಿಕಾರ ನೀಡಿ, ಅಧಿಕಾರ ನೀಡದಿದ್ದರೇ ಸಾಯುತ್ತೇನೆ ಎಂದು ನಾನೆಂದೂ ಕೇಳುವುದಿಲ್ಲ, ನಾನು ಸಾಯುವುದಿದ್ದರೆ ಜನರಿಗಾಗಿ ಸಾಯುತ್ತೇನೆ ಕೊನೆಯುಸಿರಿರುವವರೆಗೂ ಜನರಿಗಾಗಿ ಹೋರಾಡುತ್ತೇನೆ" ಎಂದು ಕುಮಾರಸ್ವಾಮಿಗೆ ಟಾಂಗ್ ನೀಡಿದ್ದಾರೆ. 
ವಿಧಾನಸಭಾ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಭಾವನಾತ್ಮಕವಾಗಿ ಮತಯಾಚಿಸಿದ್ದ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ, ನಾನು ಇನ್ನೂ ಹೆಚ್ಚು ದಿನ ಬದುಕುವುದಿಲ್ಲ. ಬದುಕಬೇಕಿದ್ದರೆ ನೀವು ಜೆಡಿಎಸ್ ಗೆ ಮತ ಹಾಕಬೇಕು ಎಂದು ರಾಜ್ಯದ ಜನತೆಯಲ್ಲಿ ಮನವಿ ಮಾಡಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜನರು ಬಿಜೆಪಿ, ಮೋದಿ ಅವರೊಂದಿಗಿದ್ದಾರೆ': 2029ರ ಚುನಾವಣೆಯಲ್ಲಿ ಮತ್ತೊಂದು 'ಭಾರಿ ಸೋಲಿಗೆ' ಸಿದ್ಧರಾಗಿ: ರಾಹುಲ್ ಗಾಂಧಿ ವಿರುದ್ಧ ಅಮಿತ್ ಶಾ ವಾಗ್ದಾಳಿ

'ನನ್ನ ಜೊತೆ ಮಲಗಿದ್ರೆ ಸಿನಿಮಾ ಅವಕಾಶ’: ಚಿಕ್ಕ ವಯಸ್ಸಿಗೆ ಚಿತ್ರರಂಗ ಬಿಟ್ಟಿದ್ದೇಕೆ; ಸೌಥ್ ನಿರ್ದೇಶಕನ ಬಗ್ಗೆ ನಟಿ ಶಾಕಿಂಗ್ ಹೇಳಿಕೆ!

3 ಬಾರಿ ಸಿಎಂ ಕೂಡ ಸುರಕ್ಷಿತವಾಗಿಲ್ಲ: ಮಮತಾ ಬ್ಯಾನರ್ಜಿ ಮೇಲೆ ಚಾಕುವಿನಿಂದ ದಾಳಿಗೆ ಯತ್ನ; ಮಹಿಳೆ ಬಂಧನ

ವಿಚಿತ್ರವಾದ್ರೂ ಸತ್ಯ: ಅಪ್ರಾಪ್ತೆಯನ್ನು ಹಿಂಬಾಲಿಸಿ ಲೈಂಗಿಕ ದೌರ್ಜನ್ಯ; ರೋಬೋಟ್ ವಶಕ್ಕೆ ಪಡೆದ ಪೊಲೀಸರು!

'ಏನೇನ್ ದಾಖಲೆ ಇದೆ ಎಲ್ಲಾ ತರಿಸುತ್ತೇನೆ': HDK 'ಸ್ಟಿಂಗ್' ಆರೋಪಕ್ಕೆ CM ಡಿಕೆಶಿ ಶಾಕಿಂಗ್ ರಿಯಾಕ್ಷನ್!