ರಾಜ್ಯ

ಆರ್ ಆರ್ ನಗರ ಉಪಚುನಾವಣೆ: 1 ಗಂಟೆ ವರೆಗೆ 34 ಪ್ರತಿಶತ ಮತದಾನ ದಾಖಲು

Raghavendra Adiga
ಬೆಂಗಳೂರು: ಬೆಂಗಳೂರು ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಇಂದು (ಮೇ 28) ಉಪಚುನಾವಣೆ ಇದ್ದು ಮತದಾನ ಪ್ರಕ್ರಿಯೆ ಪ್ರಾರಂಭವಾಗಿದೆ. ಮಧ್ಯಾಹ್ನ 1 ಗಂಟೆವರೆಗೆ ನಡೆದ ಮತದಾನ ಪ್ರಕ್ರಿಯೆಯಲ್ಲಿ  34 ಪ್ರತಿಶತದಷ್ಟು ಮತಗಳು ದಾಖಲಾಗಿದೆ.
ಅಪಾರ್ಟ್ ಮೆಂಟ್ ಒಂದರಲ್ಲಿ ಮತದಾರರ ಗುರುತಿನ ಚೀಟಿ ಪತ್ತೆಯಾದ ಕಾರಣ ಮೇ 12ರಂದು ನಡೆಯಬೇಕಿದ್ದ ಚುನಾವಣೆಯನ್ನು ಇಂದಿಗೆ ಮುಂದೂಡಲಾಗಿತ್ತು. 
ಬೆಂಗಳೂರಿನ ಜಾಲಹಳ್ಳಿಯಲ್ಲಿರುವ ಎಸ್ ಎಲ್ ವಿ ಪಾರ್ಕ್ ವ್ಯೂ ಅಪಾರ್ಟ್ ಮೆಂಟಿನಲ್ಲಿ ಮೇ 8ರಂದು 9,746 ಮತದಾರರ ಗುರುತು ಚೀಟಿಗಳು ಪತ್ತೆಯಾಗಿತ್ತು.  ಚುನಾವಣಾ ಆಯೋಗ ಆ ಗುರುತು ಚೀಟಿಗಳ ವಶಕ್ಕೆ ಪಡೆದ ಬಳಿಕ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರು ಪರಸ್ಪರ ಆರೋಪಗಳಲ್ಲಿ ತೊಡಗಿದ್ದರು.
ಇದೇ ವೇಳೆ ಇಸಿ ಕ್ಷೇತ್ರದಲ್ಲಿ ಚುನಾವಣೆಯನ್ನು ಮುಂದೂಡಿ ಆದೇಶಿಸಿತ್ತು. 
SCROLL FOR NEXT