ಬೆಂಗಳೂರು: ಕಳೆದ ವಾರ ಫೈವ್ ಸ್ಟಾರ್ ಹೋಟೆಲ್ ಒಂದರಲ್ಲಿ ನಡೆದ ವಿಜ್ಞಾನ ಸಮ್ಮೇಳನದಲ್ಲಿ ಕಳ್ಳನೊಬ್ಬ ತನ್ನ ಕೈಚಳಕ ಮೆರೆದಿದ್ದಾನೆ.
ಮುಂಬೈ ಮೂಲದ ಮಹಿಳಾ ಜೆನೆಟಿಕ್ ವಿಜ್ಞಾನಿ ಡಾ. ಮಂಜೀತ್ ಮೆಹ್ತಾ ಬಳಿಯಿದ್ದ 3 ಲಕ್ಷ ರುಪಾಯಿ ಮೌಲ್ಯದ ಚಿನ್ನಾಭರಣವನ್ನು ಕಳ್ಳತನ ಮಾಡಿದ್ದು ಈ ಸಂಬಂಧ ಮಂಜೀತ್ ಹೈ ಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಕಳ್ಳನ ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮೇ 24 ಮತ್ತು 25ರಂದು ಎರಡು ದಿನಗಳ ಕಾಲ ಸಮ್ಮೇಳನ ನಡೆದಿದ್ದು, ಮೇ 24ರಂದು ಚಿನ್ನಾಭರಣವನ್ನು ಪರ್ಸ್ ನಲ್ಲಿಟ್ಟು ನನ್ನ ಪಕ್ಕದಲ್ಲಿ ಇಟ್ಟುಕೊಂಡಿದ್ದೆ. ನಂತರ ಹೋಟೆಲ್ ರೂಂಗೆ ಹೋಗಿ ನೋಡಿದಾಗ ಒಡವೆ ಕಳ್ಳತನವಾಗಿರುವ ಬಗ್ಗೆ ಅರಿವಿಗೆ ಬಂತು. ನಂತರ ಅಧಿಕಾರಿಗಳಿಗೆ ಮಾಹಿತಿ ನೀಡಿದಾಗ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿದ್ದು ಅದರಲ್ಲಿ ವ್ಯಕ್ತಿಯೊರ್ವ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ.