ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಜ್ಯ

ನಮ್ಮ ಮೆಟ್ರೋ ಮುಷ್ಕರ: ಲೇಬರ್ ಕಮಿಷನ್ ಆದೇಶ ಪಾಲನೆಗೆ ಹೈಕೋರ್ಟ್ ನಿರ್ದೇಶನ

ಬೆಂಗಳೂರು ಮೆಟ್ರೋ ರೈಲು ನೌಕರರ ಒಕ್ಕೂಟ ಮತ್ತು ನಮ್ಮ ಮೆಟ್ರೋ ಆಡಳಿತ ಹೈಕೋರ್ಟ್ ನಲ್ಲಿ ಮಂಗಳವಾರ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಲೇಬರ್ ಕಮಿಷನ್......

ಸಾಂದರ್ಭಿಕ ಚಿತ್ರ
Raghavendra Adiga
Updated On : 30 May 2018, 12:44 pm
ಬೆಂಗಳೂರು: ಬೆಂಗಳೂರು ಮೆಟ್ರೋ ರೈಲು ನೌಕರರ ಒಕ್ಕೂಟ ಮತ್ತು ನಮ್ಮ ಮೆಟ್ರೋ ಆಡಳಿತ ಹೈಕೋರ್ಟ್ ನಲ್ಲಿ ಮಂಗಳವಾರ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಲೇಬರ್ ಕಮಿಷನ್ ನೀಡುವ ತೀರ್ಪನ್ನು ಪಾಲಿಸುವಂತೆ ಹೇಳಿದೆ. ಬುಧವಾರ ನಡೆದ ವಿಚಾರಣೆ ವೇಳೆ ನ್ಯಾಯಾಲಯ ಈ ತೀರ್ಪು ನೀಡಿದೆ.
ಲೇಬರ್ ಕಮಿಷನ್ ಕೊಟ್ಟ ಆದೇಶ ಪಾಲನೆಯಾಗಿರುವ ಕುರಿತ ವರದಿಯನ್ನು ಜೂನ್ 4 ರಂದು ಹೈಕೋರ್ಟ್ ಗೆ ಸಲ್ಲಿಸಬೇಕು ಎಂದು ಯಾಲಯವು ಆದೇಶಿಸಿದೆ. ಈ ದಿನ ಬೆಳಿಗ್ಗೆ 11.30ಕ್ಕೆ ಬೆಂಗಳೂರು ಗೊರಗುಂಟೆಪಾಳ್ಯ ಆಯೋಗದ ಕಚೇರಿಯ ಎರಡೂ ಪಕ್ಷಗಳ ನಡುವೆ ಸಭೆ ನಡೆಯಲಿದೆ.
ಎಕ್ಸ್ ಪ್ರೆಸ್ ಜತೆ ಮಾತನಾಡಿದ ಮೆಟ್ರೋ ನೌಕರ ಒಕ್ಕೂಟದ ಉಪಾಧ್ಯಕ್ಷ ಸೂರ್ಯನಾರಾಯಣ ಮೂರ್ತಿನಮ್ಮ ಬೇಡಿಕೆಗಳು ಯಾವುದೇ ರೀತಿಯಲ್ಲಿ ಈಡೇರಿಲ್ಲ, ನಾವು ಮುಷ್ಕರವನ್ನು ನಡೆಸುವುದಕ್ಕೆ ಮುಂದಾಗಿದ್ದೇವೆ.ಜೂನ್ 4 ರ ಬೆಳಿಗ್ಗೆ ಹೈಕೋರ್ಟ್ ವಿಚಾರಣೆಯು ನಿಗದಿಯಾಗಿರುವುದರಿಂದ, ವಿಚಾರಣೆಯ ಮುಗಿಯುವವರೆಗೂ ನಾವು ಕಾಯಬೇಕಾಗಿದೆ. ಎಲ್ಲಾ ವಿಭಾಗದ ಮೆಟ್ರೋ ನೌಕರರೊಡನೆ ಸಂವಹನ ನಡೆಸಲು ಸಮಯಾವಕಾಶ ಬೇಕಾಗಿರುವ ಕಾರಣ ಅಂದು  ಬಿಎಂಆರ್ಸಿಎಲ್ ಮೂರನೇ ಶಿಫ್ಟ್ ನಿಂದ  ನಮ್ಮ ಮುಷ್ಕರ ಮುಂದುವರಿಯುವುದು" 

Advertisement

Advertisement

ನಮ್ಮ ಮೆಟ್ರೋ ನೌಕರರ ಮೂರನೇ ಶಿಫ್ಟ್ ಬೆಳಿಗ್ಗೆ 9.30 ಕ್ಕೆ ಆರಂಭವಾಗುತ್ತದೆ. ಇದಕ್ಕೂ ಮೊದಲು ಒಕ್ಕೂಟವು ಜೀನ್ 4 ಬೆಳಿಗ್ಗೆಯಿಂದ ಮುಷ್ಕರಕ್ಕೆ ಕರೆ ನೀಡಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement