ರಾಜ್ಯ

ಬಂಡೀಪುರ: ಪ್ರವಾಸಿಗರು ನಿಯಮ ಉಲ್ಲಂಘಿಸಿದ್ರೆ 1000 ರು. ದಂಡ!

Vishwanath S
ಬೆಂಗಳೂರು: ಬಂಡೀಪುರದ ಎರಡು ಹೆದ್ದಾರಿಗಳಲ್ಲಿ ಹಾದು ಹೋಗುವ ಪ್ರವಾಸಿಗರು ಕರ್ನಾಟಕದಲ್ಲಿ ಸಂರಕ್ಷಿತ ಪ್ರದೇಶಗಳಲ್ಲಿ ಪರಿಚಯಿಸಲಾಗಿರುವ ನೂತನ ನಿಯಮಗಳ ಉಲ್ಲಂಘನೆಗಾಗಿ 1000 ರುಪಾಯಿ ದಂಡವನ್ನು ಪಾವತಿಸುತ್ತಿದ್ದಾರೆ. 
ಬಂಡೀಪುರಹುಲಿ ಸಂರಕ್ಷಿತ ಪ್ರದೇಶದಲ್ಲಿ ನೂತನ ನಿಯಮಗಳನ್ನು ಜಾರಿಗೆ ತರಲಾಗಿದ್ದು ಬಂಡೀಪುರರಾಷ್ಟ್ರೀಯ ಉದ್ಯಾನವನ್ನು ಹಾದುಹೋಗುವಾಗ ಸೆಲ್ಫಿ ಮತ್ತು ಫೋಟೋಗಳನ್ನು ತೆಗೆದುಕೊಳ್ಳುವುದು, ಪ್ರಾಣಿಗಳಿಗೆ ಆಹಾರ ಹಾಕುವುದು, ಧೂಮಪಾನ ಮಾಡುವುದು ಕಳೆದ ಒಂದೂವರೆ ತಿಂಗಳಿನಿಂದ ಹೆಚ್ಚಾಗಿ ನಡೆಯುತ್ತಿದ್ದು ಈ ಹಿನ್ನೆಲೆಯಲ್ಲಿ 1 ಸಾವಿರದಿಂದ 2 ಸಾವಿರದವರೆಗೂ ದಂಡ ವಿಧಿಸಲಾಗುತ್ತಿದೆ. 
ಪ್ರತಿವರ್ಷ ಎಪ್ರಿಲ್-ಮೇ ತಿಂಗಳಲ್ಲಿ ಹೆಚ್ಚಾಗಿ ಪ್ರವಾಸಿಗರು ಬಂಡೀಪುರಕ್ಕೆ ಬರುವುದರಿಂದ ನಿಯಮಗಳ ಉಲ್ಲಂಘನೆ ಸಹ ಹೆಚ್ಚಾಗುತ್ತಿವೆ. ಮೈಸೂರು-ಮಾನಂದವಾಡಿ ಮತ್ತು ಗುಂಡ್ಲುಪೇಟೆ-ಸುಲ್ತಾನ್ ಬತೇರಿ ಹೆದ್ದಾರಿಗಳಲ್ಲಿ ನಿಯಮಗಳ ಉಲ್ಲಂಘನೆ ಹೆಚ್ಚಾಗುತ್ತಿದ್ದು ಅರಣ್ಯ ಇಲಾಖೆ ದಂಡ ವಿಧಿಸುತ್ತಿದೆ. 
ಈ ನಿಯಮ ಜಾರಿಯಾದಾಗಿನಿಂದಲೂ ಬಂಡಿಪುರ ಅಧಿಕಾರಿ ಪ್ರತಿ ದಿನ 12 ಸಾವಿರದಿಂದ 15 ಸಾವಿರ ರುಪಾಯಿವರೆಗೆ ಸಂಗ್ರಹಿಸುತ್ತಿದ್ದಾರೆ. ಎರಡು ಹೆದ್ದಾರಿಯಲ್ಲೂ ಪ್ರತಿದಿನ 5 ರಿಂದ 6 ಪ್ರಕರಣಗಳು ವರದಿಯಾಗುತ್ತಿವೆ.
SCROLL FOR NEXT