ರಾಜ್ಯ

ಯಶಸ್ವಿನಿ ಯೋಜನೆ: ಸರ್ಕಾರದ ಪ್ರತಿಕ್ರಿಯೆ ಕೇಳಿದ ಹೈಕೋರ್ಟ್

Sumana Upadhyaya

ಬೆಂಗಳೂರು: ಯಶಸ್ವಿನಿ ಯೋಜನೆಯನ್ನು ಆರೋಗ್ಯ ಕರ್ನಾಟಕಕ್ಕೆ ಸೇರಿಸುವ ತೀರ್ಮಾನದ ಬಗ್ಗೆ ಜೂನ್ 11ರೊಳಗೆ ಪ್ರತಿಕ್ರಿಯೆ ನೀಡುವಂತೆ ಆರೋಗ್ಯ ಇಲಾಖೆಗೆ ಹೈಕೋರ್ಟ್ ನೊಟೀಸ್ ಜಾರಿ ಮಾಡಿದೆ.

ರೈತರು ಮತ್ತು ಅವರ ಕುಟುಂಬ ಸದಸ್ಯರಿಗೆ ಸರ್ಕಾರಿ ಮತ್ತು ಖಾಸಗಿ ಎರಡೂ ಆಸ್ಪತ್ರೆಗಳಲ್ಲಿ ವಿಶೇಷ ಆರೋಗ್ಯ ಸೇವೆ ಪಡೆದುಕೊಳ್ಳಲು ಇರುವ ಯೋಜನೆ ಯಶಸ್ವಿನಿ ಯೋಜನೆಯಾಗಿದೆ.

ನಿನ್ನೆಯಿಂದ ಸರ್ಕಾರ ಆರೋಗ್ಯ ಕರ್ನಾಟಕ ಯೋಜನೆಯನ್ನು ಜಾರಿಗೆ ತಂದಿರುವುದರಿಂದ ಯಶಸ್ವಿನಿ ಯೋಜನೆಯನ್ನು ಹಿಂಪಡೆಯಲಾಗಿದೆ. ಆರೋಗ್ಯ ಕರ್ನಾಟಕ ಷರತ್ತಿನ ಪ್ರಕಾರ ಬಡತನ ರೇಖೆಗಿಂತ ಮೇಲಿನ ವರ್ಗದ ಫಲಾನುಭವಿಗಳು ಆಸ್ಪತ್ರೆಯ ಚಿಕಿತ್ಸೆ ವೆಚ್ಚದ ಶೇಕಡಾ 70ರಷ್ಟನ್ನು ಭರಿಸಬೇಕು.

SCROLL FOR NEXT