ರಾಜ್ಯ

ರೇವಣ್ಣ ಆಯ್ತು, ಈಗ ಆರ್ ವಿ ದೇಶಪಾಂಡೆ ಸರದಿ; ಕ್ರೀಡಾಪಟುಗಳಿಗೆ ಕಿಟ್ ಎಸೆದ ಸಚಿವ!

Sumana Upadhyaya

ಹಳಿಯಾಳ: ಕೊಡಗು ಪ್ರವಾಹ ಸಂತ್ರಸ್ತರಿಗೆ ಆಶ್ರಯ ತಾಣದಲ್ಲಿ ಬಿಸ್ಕೆಟ್ ಎಸೆದು ಲೋಕೋಪಯೋಗಿ ಸಚಿವ ಹೆಚ್ ಡಿ ರೇವಣ್ಣ ವ್ಯಾಪಕ ಟೀಕೆಗೆ ಗುರಿಯಾಗಿದ್ದರು. ಇದೀಗ ಸಮ್ಮಿಶ್ರ ಸರ್ಕಾರದ ಮತ್ತೊಬ್ಬ ಹಿರಿಯ ಸಚಿವರು ಕೂಡ ಅದೇ ರೀತಿಯ ವರ್ತನೆ ತೋರಿದ್ದು ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಕಾರವಾರದಲ್ಲಿ ನಿನ್ನೆ ಕಂದಾಯ ಇಲಾಖೆ ಸಚಿವ ಆರ್ ವಿ ದೇಶಪಾಂಡೆ ಕಾರ್ಯಕ್ರಮದಲ್ಲಿ ಕ್ರೀಡಾ ವಸ್ತುಗಳನ್ನು ಪಡೆಯಲು ತಡವಾಗಿ ಬಂದ ಮಕ್ಕಳಿಗೆ ಕ್ರೀಡಾ ಸಾಮಗ್ರಿಗಳನ್ನು ಕೈಗೆ ನೀಡುವ ಬದಲು ವೇದಿಕೆಯಿಂದ ಎಸೆದು ದರ್ಪದ ರೀತಿಯ ವರ್ತನೆ ತೋರಿದ್ದು ಸಾರ್ವಜನಿಕರಿಂದ ವ್ಯಾಪಕ ಟೀಕೆಗಳು ಕೇಳಿಬರುತ್ತಿವೆ.

ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲ್ಲೂಕಿನಲ್ಲಿ ಲೋಕೋಪಯೋಗಿ ಇಲಾಖೆ ಮತ್ತು ಒಳನಾಡು ಜಲಸಾರಿಗೆ ಇಲಾಖೆ ವತಿಯಿಂದ ನೂತನ ಒಳಾಂಗಣ ಕ್ರೀಡಾಂಗಣ ಕಟ್ಟಡ ಉದ್ಘಾಟನೆ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ  ಸಾಧನೆ ಮಾಡಿದ ಕ್ರೀಡಾ ಪಟುಗಳು, ಕ್ರೀಡಾ ಸಂಘಗಳಿಗೆ ಕ್ರೀಡಾ ಸಾಮಗ್ರಿ ವಿತರಣೆ ವೇಳೆ ಈ ಘಟನೆ ನಡೆದಿದೆ. ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಮಕ್ಕಳಿಗೆ ದರ್ಪ ತೋರುವ ಮೂಲಕ ಸಚಿವರು ಅಗೌರವ ತೋರಿಸಿದ್ದಾರೆ ಎಂದು ಕ್ರೀಡಾಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

SCROLL FOR NEXT