ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಜ್ಯ

ಹೈಕೋರ್ಟ್ ಗೆ ಐವರು ನೂತನ ನ್ಯಾಯಾಧೀಶರ ನೇಮಕ

ರಾಜ್ಯ ಹೈಕೋರ್ಟ್‌ಗೆ ಐವರು ನ್ಯಾಯಾಧೀಶರ ನೇಮಿಸಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ...

ರಾಜ್ಯ ಹೈಕೋರ್ಟ್
Sumana Upadhyaya
Updated On : 2 Nov 2018, 11:53 am

ಬೆಂಗಳೂರು: ರಾಜ್ಯ ಹೈಕೋರ್ಟ್‌ಗೆ ಐವರು ನ್ಯಾಯಾಧೀಶರ ನೇಮಿಸಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅನುಮೋದನೆ ನೀಡಿದ್ದಾರೆ. ಈ ಕುರಿತು ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ.

ನ್ಯಾಯಾಧೀಶರುಗಳಾದ ಅಶೋಕ ಗೋಳಪ್ಪ ನಿಜಗಣ್ಣವರ, ಹೇತೂರ್‌ ಪಿ, ಸಂದೇಶ್‌, ಕೆ ನಟರಾಜನ್, ಪಿ ಜಿ ಮುತಾಲಿಕ್ ಪಾಟೀಲ್ ಮತ್ತು ಎ ಎಸ್ ಬೆಳ್ಳುಂಕೆ ಅವರನ್ನು ಹೈಕೋರ್ಟ್‌ನ ನ್ಯಾಯಾಧೀಶರನ್ನಾಗಿ ನೇಮಿಸಲಾಗಿದೆ. ಈ ಐವರು ನ್ಯಾಯಾಧೀಶರ ನೇಮಕಕ್ಕೆ ನಿವೃತ್ತ ಮುಖ್ಯನ್ಯಾಯಮೂರ್ತಿ ದೀಪಕ್‌ ಮಿಶ್ರಾ ಅವರ ನೇತೃತ್ವದ ಕೊಲಿಜಿಯಂ 2018ರ ಆ.1ರಂದು ಶಿಫಾರಸು ಮಾಡಿತ್ತು.

ಇದೇ ವೇಳೆ, ಏಳು ಮಂದಿ ಹೆಚ್ಚುವರಿ ನ್ಯಾಯಾಧೀಶರಿಗೆ ಕರ್ನಾಟಕ ಹೈಕೋರ್ಟ್‌ನ ಕಾಯಂ ನ್ಯಾಯಾಧೀಶರನ್ನಾಗಿ ಬಡ್ತಿ ನೀಡುವ ಪ್ರಸ್ತಾವನೆಗೂ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಅವರು, ನ್ಯಾಯಮೂರ್ತಿಗಳಾದ ಕೆಂಪಯ್ಯ ಸೋಮಶೇಖರ್‌, ಕೆ.ಎಸ್‌. ಮುದ್ಗಲ್‌, ಶ್ರೀನಿವಾಸ್‌ ಎಚ್‌.ಕುಮಾರ್‌, ಜಾನ್‌ ಮೈಕೆಲ್‌ ಕುನ್ಹಾ, ಬಸವರಾಜ್‌ ಎ. ಪಾಟೀಲ್‌, ಎನ್‌.ಕೆ. ಸುಧೀಂದ್ರರಾವ್‌ ಮತ್ತು ಡಾ ಎಚ್‌.ಬಿ ಪ್ರಭಾಕರ್‌ ಶಾಸ್ತ್ರಿ ಅವರು ಕರ್ನಾಟಕ ಹೈಕೋರ್ಟ್‌ನ ಕಾಯಂ ನ್ಯಾಯಾಧೀಶರಾಗಿ ನೇಮಕಗೊಂಡಿದ್ದಾರೆ.

ಕಳೆದ ತಿಂಗಳು ಸುಪ್ರೀಂಕೋರ್ಟ್‌ ಕೊಲಿಜಿಯಂ ಇವರ ಹೆಸರುಗಳನ್ನು ಶಿಫಾರಸು ಮಾಡಲಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement