ರಾಜ್ಯ

ಸಗಣಿ ಎಸೆದು ದೀಪಾವಳಿ ಆಚರಣೆ: ಇದು ಈ ಗ್ರಾಮಸ್ಥರ ಸಂಪ್ರದಾಯ

Sumana Upadhyaya

ಮೈಸೂರು: ಬೆಳಕಿನ ಹಬ್ಬ ದೀಪಾವಳಿ ಸಮಯದಲ್ಲಿ ಹಣತೆ ಹಚ್ಚಿ ಹೊಸ ಬಟ್ಟೆ ತೊಟ್ಟು ಪಟಾಕಿ ಸಿಡಿಸಿ ಎಲ್ಲರೂ ಸಂಭ್ರಮಪಟ್ಟರೆ ತಮಿಳುನಾಡು ಮತ್ತು ಕರ್ನಾಟಕ ಗಡಿಭಾಗದಲ್ಲಿರುವ ಗೋಮತಾಪುರ ಗ್ರಾಮಸ್ಥರು ದೀಪಾವಳಿ ಹಬ್ಬ ಮುಗಿದ ಮರುದಿನ ಒಬ್ಬರ ಮೇಲೊಬ್ಬರು ಸಗಣಿಯನ್ನು ಎಸೆದು ಸಂಭ್ರಮಪಡುತ್ತಾರೆ. ಇದಕ್ಕಾಗಿ ಸಗಣಿಯನ್ನು ಹಬ್ಬಕ್ಕಿಂತ ಕೆಲ ದಿನಗಳ ಮೊದಲೇ ಸಂಗ್ರಹಿಸಿ ಇಟ್ಟುಕೊಳ್ಳುತ್ತಾರೆ.

ಬಲಿಪಾಡ್ಯಮಿ ಮುಗಿದ ಮರುದಿನ ಸಗಣಿಯನ್ನು ಒಬ್ಬರಿಗೊಬ್ಬರು ಎರಚಿಕೊಳ್ಳುತ್ತಾರೆ.
ಈ ದಿನ ಯಾರೂ ಸುಳ್ಳು ಹೇಳಬಾರದು ಎಂಬ ಸಂಪ್ರದಾಯ ಕೂಡ ಗ್ರಾಮಸ್ಥರಲ್ಲಿದೆ. ಈ ದಿನದಂದು ಮಣ್ಣಿನಿಂದ ತಯಾರಿಸಿದ ಮಾನವನ ಪ್ರತಿಕೃತಿಯನ್ನು ಕತ್ತೆ ಮೇಲೆ ಕುಳ್ಳಿರಿಸಿ ಮೆರವಣಿಗೆ ಕರೆದೊಯ್ಯಲಾಗುತ್ತದೆ.

ನಂತರ ಗ್ರಾಮಸ್ಥರು ಕತ್ತೆಯ ಮೇಲೆ ಕುಳಿತಿರುವ ಮಾನವ ಪ್ರತಿಕೃತಿಯನ್ನು ಹತ್ತಿರದ ಈಶ್ವರಸ್ವಾಮಿ ದೇವಸ್ಥಾನದ ಬಳಿ ಮಾನವನ ಪ್ರತಿಕೃತಿಯನ್ನು ದಹಿಸಿ ಸಗಣಿಯನ್ನು ಎಸೆಯಲು ಆರಂಭಿಸುತ್ತಾರೆ. ಯಾವುದೇ ಸಂದರ್ಭದಲ್ಲಿ ಕೂಡ ಮನುಷ್ಯ ಸುಳ್ಳು ಹೇಳಬಾರದು ಎಂಬುದು ಈ ಕ್ರಮದ ಸಂದೇಶವಾಗಿದೆ.

SCROLL FOR NEXT