ರಾಜ್ಯ

ಇಂಡಿ ಶಾಸಕರ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ ಸೃಷ್ಟಿ: ಸೈಬರ್ ಕ್ರೈಂ ಪ್ರಕರಣ ದಾಖಲು

Raghavendra Adiga
ವಿಜಯಪುರ: ವಿಜಯಪುರ ಜಿಲ್ಲೆ ಇಂಡಿ ಶಾಸಕ ಕಾಂಗ್ರೆಸ್ ಪಕ್ಷದ ಯಶವಂತರಾಯಗೌಡ ವಿ.ಪಾಟೀಲ್ ಅವರ ಹೆಸರಲ್ಲಿ ವಂಚಕರು ನಕಲಿ ಫೇಸ್‌ಬುಕ್ ಖಾತೆ ತೆರೆದು ದೇಣಿಗೆ ಸಂಗ್ರಹಕ್ಕೆ ಮುಂದಾಗಿದ್ದಾರೆ. ಅದೂ ಒಂದು ಅಥವಾ ಎರಡು ನಕಲಿ ಖಾತೆಯಲ್ಲ ಬರೋಬ್ಬರಿ 8 ನಕಲಿ ಫೇಸ್‌ಬುಕ್ ಖಾತೆ ತೆರೆದು ದೇಣಿಗೆ ನಿಡುವಂತೆ ಪೋಸ್ಟ್ ಹಾಕಲಾಗಿದೆ. ಈ ಸಂಬಂಧ ರಾಜ್ಯ ಸೈಬರ್ ಕ್ರೈಂ ಅಪರಾಧ ಪೋಲೀಸರಿಗೆ ದೂರು ನಿಡಲಾಗಿದೆ.
ಕಾಂಗ್ರೆಸ್ ನಾಯಕ, ಶಾಸಕ ಯಶವಂತರಾಯಗೌಡ ಹೆಸರಲ್ಲಿ ಖಾತೆ ತೆರೆಯಲಾಗಿದೆ ಎಂದು ಅವರ ಆಪ್ತ ಸಹಾಯಕ ಎಸ್‌.ಸಿ.ರುದ್ರೇಶ್ ದೂರು ಸಲ್ಲಿಸಿದ್ದಾರೆ.ಶಾಸಕರು ಸ್ವತಃ ಫೇಸ್‌ಬುಕ್ ಖಾತೆ ನಿರ್ವಹಿಸುತ್ತಿರುವಂತೆ ತೋರಿಸಲಾಗಿದೆ, ಚಿತ್ರಗಳು, ಪೋಸ್ಟ್ ಗಳನ್ನು ಅಪ್ ಲೋಡ್ ಮಾಡಲಾಗಿದೆ.
ಇಂತಹಾ ಒಂದು ನಕಲಿ ಖಾತೆಯಲ್ಲಿ ಶಾಸಕರು ತಮಗೆ ಐದು ಸಾವಿರ ಡಾಲರ್ ನಿಡಿದರೆ ತಾವದನ್ನು ದ್ವಿಗುಣ (ಡಬಲ್) ಮಾಡಿಕೊಡುವುದಾಗಿ ಹೇಳುವ ಸಂದೇಶವಿದೆ.
ಸಧ್ಯ ಸೈಬರ್ ಕ್ರೈಂ ಪೋಲೀಸರು ಐಟಿ ಸೆಕ್ಷನ್ 66ರ ಅನಾಮಿಕ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ಕೈಗೊಂಡಿದ್ದಾರೆ.ಇದೇ ವೇಳೆ ಶಾಸಕರ ಹೆಸರಲ್ಲಿರುವ ನಕಲಿ ಖಾತೆಗಳ ಡಿಲೀಟ್ ಮಾಡಲು ಪೋಲೀಸರು ತಂತ್ರಜ್ಞರ ನೆರವು ಕೇಳಿದ್ದಾರೆ. ಖಾಯ್ತೆಗಳನ್ನು ಯಾವ ಐಪಿ ಅಡ್ರೆಸ್ ಮೂಲಕ ಸೃಷ್ಟಿಸಲಾಗಿದೆ ಎನ್ನುವುದನ್ನು ಪತ್ತೆ ಮಾಡಿ ಅಪರಾಧಿಗಳನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಜರುಗಿಸುವುದಾಗಿ ಪೋಲೀಸರು ಭರವಸೆ ನೀಡಿದ್ದಾರೆ.
SCROLL FOR NEXT