ಮೈಸೂರು: ಮದುವೆ ಮಂಟಪದ ಮುಂದೆ ಬಂದು ನಿಂತ ವಧು ನನಗೆ ಅದಾಗಲೇ ಮದುವೆಯಾಗಿದೆ ನಾನು ಮತ್ತೊಂದು ಮದುವೆಯಾಗುವುದಿಲ್ಲ ಎಂದು ಗೋಳಾಡಿದ್ದು ಪರಿಣಾಮ ಮದುವೆ ಮುರಿದು ಬಿದ್ದ ಪ್ರಕರಣ ಮೈಸೂರಿನಲ್ಲಿ ನಡೆದಿದೆ.
ಪೋಷಕರು ಮದುವೆಗಾಗಿ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು ಕೊನೆಯ ಕ್ಷಣದಲ್ಲಿ ವಧು ತಾನು ಅದಾಗಲೇ ಪ್ರಿಯಕರನೊಂದಿಗೆ ರಿಜಿಸ್ಟರ್ ಮದುವೆ ಮಾಡಿಕೊಂಡಿದ್ದು ಈಗ ಮತ್ತೊಂದು ಮದುವೆಯಾಗುವುದಿಲ್ಲ ಎಂದು ಗೋಳಾಡಿದ್ದಾಳೆ.
ಚಿಕ್ಕಮಗಳೂರು ಮೂಲದ ವಧುವಿಗೆ ಮೈಸೂರಿನ ಟಿ ನರಸೀಪುರದ ಮೂಲದ ನಿಖಿಲ್ ಅರಸ್ ಜತೆ ಮದುವೆ ನಿಶ್ಚಿಯವಾಗಿತ್ತು. ವಧು ಮನೆಯವರ ಒತ್ತಾಯದ ಮೇರಿಗೆ ಅರಸ್ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಮಂಗಳವಾರ ರಾತ್ರಿ ಆರತಕ್ಷತೆ ಇಂದು ಬೆಳಗ್ಗೆ ಮದುವೆ ನಡೆಯಬೇಕಿತ್ತು.
ಆದರೆ ವಧು ಮೈಸೂರಿನ ವಿಜಯನಗರದಲ್ಲಿರುವ ಸಂಬಂಧಿಕರ ಮನೆಗೆ ಹೋಗಿದ್ದಾಳೆ. ವಧುವಿನ ನಿರೀಕ್ಷೆಯಲ್ಲಿದ್ದ ವರನ ಕಡೆಯವರಿಗೆ ವಿಷಯ ತಿಳಿದು ಕಕ್ಕಾಬಿಕ್ಕಿಯಾಗಿದ್ದಾರೆ. ಆದರೆ ಮದುವೆ ಆಗಿರುವ ವಿಷಯ ತಿಳಿದ ಮೇಲೂ ಮತ್ತೊಂದು ಮದುವೆಗೆ ಎರಡು ಕುಟುಂಬದ ಸದಸ್ಯರು ವಧುವನ್ನು ಒತ್ತಾಯಿಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics