ಸಾಂದರ್ಭಿಕ ಚಿತ್ರ 
ರಾಜ್ಯ

'ನಮ್ಮ ಮೆಟ್ರೊ'ಗೆ 3 ಕೋಟಿ ರೂ. ಮೌಲ್ಯದ ಜಮೀನನ್ನು ದಾನ ಮಾಡಿದ ಮುನ್ನಿ ರೆಡ್ಡಿ ಕುಟುಂಬ!

ಇಳಿ ವಯಸ್ಸಿನಲ್ಲಿ ಮಕ್ಕಳಿಗೆ ಎಷ್ಟು ಸಂಪತ್ತು ಮಾಡಿಕೊಟ್ಟಿದ್ದೇವೆ ಎಂದು ತಿಳಿಯುವವರೇ ಬಹುತೇಕ ...

ಬೆಂಗಳೂರು: ಇಳಿ ವಯಸ್ಸಿನಲ್ಲಿ ಮಕ್ಕಳಿಗೆ ಎಷ್ಟು ಸಂಪತ್ತು ಮಾಡಿಕೊಟ್ಟಿದ್ದೇವೆ ಎಂದು ತಿಳಿಯುವವರೇ ಬಹುತೇಕ ಮಂದಿ. ಅಂತಹದ್ದರಲ್ಲಿ 84ರ ಇಳಿವಯಸ್ಸಿನ ವೃದ್ಧರೊಬ್ಬರು ಹೊಸೂರು ಮುಖ್ಯ ರಸ್ತೆಯಲ್ಲಿರುವ ತಮ್ಮ ಭೂಮಿಯನ್ನು ನಮ್ಮ ಮೆಟ್ರೊ ರೈಲು ಯೋಜನೆಗೆ ದಾನ ಮಾಡಿದ್ದಾರೆ.

84 ವರ್ಷದ ಮುನ್ನಿ ರೆಡ್ಡಿ ಮತ್ತು ಅವರ ನಾಲ್ವರು ಗಂಡು ಮಕ್ಕಳು ನಮ್ಮ ಮೆಟ್ರೊ ಯೋಜನೆಯ 2ನೇ ಹಂತದ ಕಾಮಗಾರಿಗೆ ಮಾರುಕಟ್ಟೆ ಮೌಲ್ಯ ಸುಮಾರು 3 ಕೋಟಿ ರೂಪಾಯಿಯ ಜಮೀನನ್ನು ನೀಡಿದ್ದಾರೆ. ಬೊಮ್ಮನಹಳ್ಳಿ ಸಮೀಪ ಇದ್ದ 268 ಚದರಡಿ ಜಮೀನನ್ನು ಬೆಂಗಳೂರು ಮೆಟ್ರೊ ರೈಲು ನಿಗಮಕ್ಕೆ ನೀಡಿದ್ದಾರೆ. 18.8 ಕಿಲೋ ಮೀಟರ್ ಉದ್ದದ ಆರ್ ವಿ ರಸ್ತೆ-ಬೊಮ್ಮನಹಳ್ಳಿ ರೈಲು ಹಳಿ ನಿರ್ಮಾಣಕ್ಕೆ ನೀಡಿದ್ದಾರೆ.

ಈ ಕುರಿತು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ರೆಡ್ಡಿಯವರ ಮೊಮ್ಮಗ ಆರ್ ಪ್ರಶಾಂತ್, ಮೆಟ್ರೊ ರೈಲಿನ ಎರಡನೇ ಹಂತದ ಕಾಮಗಾರಿಗೆ ನಿನ್ನ ಜಮೀನಿನ ಸ್ವಲ್ಪ ಭಾಗದ ಅವಶ್ಯಕತೆಯಿದೆ ಎಂದು ಕೇಳಿದರು. ನಗರದ ಅಭಿವೃದ್ಧಿಗೆ ಉಚಿತವಾಗಿ ನೀಡೋಣವೆಂದು ನಮ್ಮ ತಾತ ಹೇಳಿದರು. ಅದಕ್ಕೆ ನಾವೆಲ್ಲರೂ ಒಪ್ಪಿಕೊಂಡೆವು ಎನ್ನುತ್ತಾರೆ.

ಮುನ್ನಿ ರೆಡ್ಡಿಯವರ ಪೂರ್ವಜರು ಕರ್ನಾಟಕದವರೇ. ಬಹಳ ಕೃಷಿ ಭೂಮಿಯನ್ನು ಕೂಡ ಹೊಂದಿದ್ದರು. ಅಲ್ಲದೆ ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ ಕೂಡ ತೊಡಗಿಸಿಕೊಂಡಿದ್ದಾರೆ.
ಮುನ್ನಿ ರೆಡ್ಡಿ ಕುಟುಂಬದವರು ಜಮೀನನ್ನು ಮೆಟ್ರೊ ರೈಲು ಯೋಜನೆಗೆ ಉಚಿತವಾಗಿ ನೀಡಿರುವುದು ನಿಜಕ್ಕೂ ಆಶ್ಚರ್ಯಕರ. ಯಾವುದೇ ಪರಿಹಾರವನ್ನು ಕೂಡ ಅವರ ಕುಟುಂಬದವರು ಕೇಳಿಲ್ಲ. ಇದರಿಂದ ಮೆಟ್ರೊ ನಿಗಮಕ್ಕೆ ತುಂಬಾ ಉಪಕಾರವಾಗಿದೆ ಎಂದು ಬಿಎಂಆರ್ ಸಿಎಲ್ ನ ಜಮೀನು ಸ್ವಾಧೀನ ಕೇಂದ್ರದ ಪ್ರಧಾನ ವ್ಯವಸ್ಥಾಪಕ ಎಂ ಎಸ್ ಚನ್ನಪ್ಪ ಗೌಡರ್ ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಇಂದಿರಾ ಗಾಂಧಿ ಕೂಡ ಹೀಗೆ ಮಾಡಿರಲಿಲ್ಲ': ದೆಹಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯುವ ಮುನ್ನ ಅಭಿಜಿತ್ ದೀಪ್ಕೆ; ವಿಡಿಯೋ ಹಂಚಿಕೊಂಡ CJP

ಅಭಿಜೀತ್ ದೀಪ್ಕೆ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ; ಅಜ್ಜಿ ಸಾವಿನ ಸುದ್ದಿ ತಿಳಿಸುವುದು ಹೇಗೆ? ಪೊಲೀಸ್ ಕ್ರಮಕ್ಕೆ ಪೋಷಕರ ಆಕ್ರೋಶ

ದೇಶವಿರೋಧಿ ಶಕ್ತಿಗಳಿಂದ ಅಶಾಂತಿ ಸೃಷ್ಟಿಗೆ ಯತ್ನ; CJP ಪ್ರತಿಭಟನೆಯಿಂದ ದೂರವಿರಿ: ಮುಸ್ಲಿಮರಿಗೆ ಇಮಾಮ್‌ ಮುಖ್ಯಸ್ಥ ಕರೆ

CJP protest: ಮಮತಾ ಬ್ಯಾನರ್ಜಿ, ನೇಹಾ ಬೋರಾ, ಯೋಗೇಂದ್ರ ಯಾದವ್ ವಶಕ್ಕೆ ಪಡೆದ ಪೊಲೀಸರು

CEC ಜ್ಞಾನೇಶ್ ಕುಮಾರ್ ವಿರುದ್ಧ ಸಿಜೆಪಿ ಪ್ರತಿಭಟನೆ ವೇಳೆ 2 ಪೊಲೀಸರಿಗೆ ಕಲ್ಲೇಟು!