ಸಂಗ್ರಹ ಚಿತ್ರ 
ರಾಜ್ಯ

ವಿಚಿತ್ರ ಸನ್ನಿವೇಶ: ಪ್ರಿಯಕರನ ಕಂಡು ಹಸೆಮಣೆ ಬಿಟ್ಟ ವಧು, ಪ್ರಿಯಕರನನ್ನೂ ಮದುವೆಯಾಗಲ್ಲ ಅಂತ ಕೊಟ್ಲು ಶಾಕ್!

ತಾಳಿ ಕಟ್ಟುವ ಶುಭ ವೇಳೆಯಲ್ಲೇ ಮದುವೆ ಮನೆಗೆ ಪ್ರಿಯಕರ ಎಂಟ್ರಿ ಕೊಟ್ಟಿದ್ದು ಆತನನ್ನು ಕಂಡ ಕೂಡಲೇ ನವ ವಧು ಹಸೆಮಣೆಯಿಂದ ಎದ್ದಿದ್ದು ಇದರಿಂದಾಗಿ ಮದುವೆ ಮನೆಯಲ್ಲಿ ಸಂತೋಷದ ಬದಲಿಗೆ...

ನೆಲಮಂಗಲ: ತಾಳಿ ಕಟ್ಟುವ ಶುಭ ವೇಳೆಯಲ್ಲೇ ಮದುವೆ ಮನೆಗೆ ಪ್ರಿಯಕರ ಎಂಟ್ರಿ ಕೊಟ್ಟಿದ್ದು ಆತನನ್ನು ಕಂಡ ಕೂಡಲೇ ನವ ವಧು ಹಸೆಮಣೆಯಿಂದ ಎದ್ದಿದ್ದು ಇದರಿಂದಾಗಿ ಮದುವೆ ಮನೆಯಲ್ಲಿ ಸಂತೋಷದ ಬದಲಿಗೆ ಆತಂಕ ಮನೆ ಮಾಡಿತ್ತು. 
ಆರತಕ್ಷತೆಯಲ್ಲಿ ವರನ ಜತೆ ನಗುಮೊಗದಿಂದಲೇ, ಸಂತೋಷದಿಂದಲೇ ನಿಂತು ನವ ವಧು ಪೋಟೋಗೆ ಪೋಸ್ ಕೊಟ್ಟಿದ್ದಳು. ಆದರೆ ಮಾರನೇ ದಿನ ತನ್ನ ಪ್ರಿಯಕರ ಮದುವೆ ಮನೆಗೆ ಭೇಟಿ ಕೊಟ್ಟ ಕೂಡಲೇ ಆಕೆ ಹಸೆಮಣೆಯಿಂದ ಎದ್ದು ಹೊರಬಂದಿದ್ದಾಳೆ. ನೋಡ ನೋಡುತ್ತಲೇ ಮದುವೆ ನಿಂತು ಹೋಗುತ್ತದೆ. ಎರಡೂ ಕುಟುಂಬಗಳ ನಡುವೆ ಜೋರು ಜಗಳವಾಗುತ್ತದೆ. ಅದೇ ಹಸೆಮಣೆಯಲ್ಲಿ ಪ್ರಿಯಕರನೊಂದಿಗೆ ಈ ಯುವತಿ ವಿವಾಹವಾಗುತ್ತಾಳೆ ಅಂತ ನಿರೀಕ್ಷಿಸುವಷ್ಟರಲ್ಲಿ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. 
ಈ ಘಟನೆ ನಡೆಸಿದ್ದು ನೆಲಮಂಗಲದ ವಿಶ್ವಶಾಂತಿ ಸಮುದಾಯ ಭವನದಲ್ಲಿ. ನೆಲಮಂಗಲದ ಸಮೀಪದ ಸಂದಾರಾಮಯ್ಯನಪಾಳ್ಯ ನಿವಾಸಿ ರಂಗನಾಥ್ ಹಾಗೂ ಬೆಂಗಳೂರಿನ ಕಾಮಾಕ್ಷಿಪಾಳ್ಯದ ಯುವತಿ ಪದ್ಮಪ್ರಿಯ ಎಂಬುವರ ವಿವಾಹ ಇಲ್ಲಿ ನಡೆಯುತ್ತಿತ್ತು. ತಾಳಿ ಕಟ್ಟುವ ವೇಳೆಯಲ್ಲಿ ಪದ್ಮಪ್ರಿಯಾಳ ಪ್ರಿಯಕರ ಸಂಜು ಎದುರಿಗೆ ಬಂದಿದ್ದರಿಂದ ವಧು ತಾಳಿಕಟ್ಟಿಸಿಕೊಳ್ಳದೆ ಮದುವೆ ಮುರಿದು ಬಿದ್ದಿದೆ. 
ಫೇಸ್ ಬುಕ್ ನಲ್ಲಿ ಪರಿಚಯವಾಗಿ ಸಂಜು ಹಾಗೂ ಪದ್ಮಪ್ರಿಯಾ ಇಬ್ಬರು ಹಲವು ವರ್ಷಗಳಿಂದ ಪ್ರೀತಿಯಲ್ಲಿ ಬಿದ್ದಿದ್ದರು. ಈ ವಿಷಯ ತಿಳಿಯದ ಪದ್ಮಪ್ರಿಯಾ ಪೋಷಕರು ಮದುವೆ ನಿಶ್ಚಯ ಮಾಡಿದ್ದರು. ಮಗಳು ಮಾಡಿದ ಎಡವಟ್ಟಿನಿಂದ ಇದೀಗ ಮದುವೆ ನಿಂತು ಹೋಗಿದೆ. 
ನಂತರ ನೆಲಮಂಗಲದ ಪಟ್ಟಣ ಪೊಲೀಸರು ಪ್ರಿಯಕರ ಸಂಜು ಹಾಗೂ ಪ್ರೇಯಸಿ ಪದ್ಮಪ್ರಿಯಾ ಇಬ್ಬರನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸುತ್ತಾರೆ. ಆ ನಂತರ ಪ್ರೇಮಿಗಳನ್ನು ಒಂದಾಗಿಸಲು ಪೊಲೀಸರು ಪ್ರಯತ್ನಪಟ್ಟರೂ ಅಲ್ಲಿಯೂ ಅವರಿಗೆ ಅಚ್ಚರಿ ಕಾದಿತ್ತು. ಪದ್ಮಪ್ರಿಯಾ ಪ್ರಿಯಕರನನ್ನು ವಿವಾಹವಾಗಲೂ ನಿರಾಕರಿಸುತ್ತಾಳೆ. ನಿಮ್ಮ ತಂದೆ ತಾಯಿ ಬಂದ್ರೆ ಮಾತ್ರ ನಿಮ್ಮನ್ನು ವಿವಾಹವಾಗುವುದಾಗಿ ಪದ್ಮ ಷರತ್ತು ವಿಧಿಸುತ್ತಾಳೆ. ಅದರಂತೆ ಸಂಜೆ ವೇಳೆ ಸಂಜು ಪೋಷಕರು ಬಂದಿದ್ದು ನೆಲಮಂಗಲದ ಗಣೇಶ್ ದೇವಸ್ತಾನದಲ್ಲಿ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

ಶಿಬು ಸೊರೇನ್ 'ರಾಜ್ಯದ ಪಿತಾಮಹ' ಎಂದು ಘೋಷಿಸುವಂತೆ ಜೆಎಂಎಂ ಆಗ್ರಹ

Indian Stock Market: ಸತತ ಕುಸಿತ, ಬರೊಬ್ಬರಿ ಶೇ.1ರಷ್ಟು ಕುಸಿದ Sensex, Nifty 50, ರೂಪಾಯಿ ಮೌಲ್ಯ ಇಳಿಕೆ!

SCROLL FOR NEXT