ರಾಜ್ಯ

ಹೆಚ್ 1ಎನ್ 1ಗೆ 31 ಮಂದಿ ಬಲಿ: ಆತಂಕಪಡುವ ಅಗತ್ಯವಿಲ್ಲ ಎಂದ ವೈದ್ಯರು

Sumana Upadhyaya

ಬೆಂಗಳೂರು: ಈ ವರ್ಷ ಹೆಚ್ 1ಎನ್ 1 ಗೆ ಕರ್ನಾಟಕದಲ್ಲಿ ಬಲಿಯಾದವರ ಸಂಖ್ಯೆ 31ಕ್ಕೇರಿದೆ ಎಂದು ಕಳೆದ ಶನಿವಾರ ಆರೋಗ್ಯ ಇಲಾಖೆ ನೀಡಿರುವ ವರದಿ ಹೇಳಿದೆ.

ಆದರೆ ರಾಜೀವ್ ಗಾಂಧಿ ಹೃದ್ರೋಗ ಕೇಂದ್ರ ಹೇಳುವ ಪ್ರಕಾರ, ಜನರು ಆತಂಕಪಡುವ ಅಗತ್ಯವಿಲ್ಲ. ಕಳೆದ ವರ್ಷ 3,260 ಮಂದಿಯಲ್ಲಿ ಹೆಚ್ 1ಎನ್ 1 ವೈರಾಣು ಕಾಣಿಸಿಕೊಂಡಿದ್ದು 15 ಜನ ಮೃತಪಟ್ಟಿದ್ದರು ಎಂದು ಹೇಳುತ್ತಾರೆ. ಈ ವರ್ಷ ರೋಗಿಗಳ ಪ್ರಮಾಣ ಅಷ್ಟೊಂದು ಇಲ್ಲ ಎನ್ನುತ್ತಾರೆ ವೈದ್ಯರು.

ಕಳೆದ ಶನಿವಾರದ ಹೊತ್ತಿಗೆ ರಾಜ್ಯದಲ್ಲಿ 1,231 ಹೆಚ್ 1ಎನ್ 1 ವೈರಾಣು ಹೊಂದಿರುವವರು ಪತ್ತೆಯಾಗಿದ್ದು 31 ಮಂದಿ ಮೃತಪಟ್ಟಿದ್ದಾರೆ. ಅದಕ್ಕೆ ಹಿಂದಿನ ದಿನ ಶುಕ್ರವಾರ ಬಿಡುಗಡೆ ಮಾಡಿರುವ ವರದಿ ಪ್ರಕಾರ 1,215 ಮಂದಿಯಲ್ಲಿ ವೈರಾಣು ಕಾಣಿಸಿಕೊಂಡಿದ್ದು 19 ಮಂದಿ ಮೃತಪಟ್ಟಿದ್ದಾರೆ. ಕೇವಲ ಒಂದೇ ದಿನದಲ್ಲಿ ಮೃತಪಟ್ಟವರ ಸಂಖ್ಯೆ 12ಕ್ಕೆ ಏರಿಕೆಯಾಗಲು ಏನು ಕಾರಣ ಎಂದು ಕೇಳಿದರೆ ಮೃತಪಟ್ಟವರ ಅಂಕಿಅಂಶಗಳನ್ನು ನೀಡಲು ವಿಳಂಬವಾಗಿರಬಹುದು ಎಂದು ವೈದ್ಯರು ಹೇಳುತ್ತಾರೆ.

ರಾಜೀವ್ ಗಾಂಧಿ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ ಸಿ ನಾಗರಾಜ್, ನಮ್ಮ ಆಸ್ಪತ್ರೆಯಲ್ಲಿ 20 ರೋಗಿಗಳು ಮೃತಪಟ್ಟಿದ್ದಾರೆ. ಒಂದೇ ದಿನದಲ್ಲಿ ಅಷ್ಟು ಏರಿಕೆ ತೋರಿಸಲು ಕಾರಣ ಆಸ್ಪತ್ರೆಯ ಅಧಿಕೃತ ಪ್ರಕ್ರಿಯೆಗಳಿಂದಾಗಿರಬಹುದು. ನಮ್ಮಲ್ಲಿ ಹೆಚ್ 1 ಎನ್ 1 ಹೊರರೋಗಿಗಳು ಮತ್ತು ಒಳ ರೋಗಿಗಳ ಸಂಖ್ಯೆ ಕಡಿಮೆಯಾಗಿದೆ. ನಮ್ಮಲ್ಲಿ ದಾಖಲಾದ ನಾಲ್ವರು ರೋಗಿಗಳಲ್ಲಿ ಇಬ್ಬರಲ್ಲಿ ಹೆಚ್ 1ಎನ್ 1 ಪತ್ತೆಯಾಗಿದೆ. ಹೊರರೋಗಿಗಳಲ್ಲಿ 18ರಿಂದ 19 ಮಂದಿಯಲ್ಲಿ ಕಾಣಿಸಿಕೊಂಡಿತ್ತು, ಅದೀಗ 8 ಅಥವಾ 9ಕ್ಕೆ ಇಳಿದಿದೆ. ನವೆಂಬರ್ 23ರಂದು ರೋಗಿಗಳ ಸಾವಿನ ಅಂಕಿಅಂಶ ಸಭೆ ನಡೆಯಲಿದ್ದು ಅಲ್ಲಿ ಇಲಾಖೆಯ ಇನ್ನಷ್ಟು ಅಂಕಿಅಂಶ ಪತ್ತೆಯಾಗಲಿದೆ ಎಂದರು.

SCROLL FOR NEXT