ಬೆಂಗಳೂರು:ಕರ್ನಾಟಕ ಸರ್ಕಾರ ರಾಜ್ಯಾದ್ಯಂತದ ಬಾರ್ ಗಳಲ್ಲಿ ನಿಗದಿತ ಸ್ಥಳಗಳಲ್ಲಿ ನಿಂತು ಧೂಮಪಾನ ಮಾಡುವುದಕ್ಕೆ ಮಾತ್ರ ಅವಕಾಶವಿರಬೇಕು ಎಂದು ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ.
ಸುತ್ತೋಲೆಯಲ್ಲಿ ಹೇಳಿದಂತೆ ಬಾರ್, ಪಬ್, ರೆಸ್ಟೋರೆಂಟ್ ಗಳಲ್ಲಿ ಧೂಮಪಾನಕ್ಕಾಗಿ ಪ್ರತ್ಯೇಕ ಸ್ಥಳವಿರಬೇಕು. ಅಲ್ಲಿ ಕೇವಲ ನಿಂತು ಧೂಮಪಾನ ಮಾಡುವಂತಿರಬೇಕು ಅಲ್ಲದೆ ಟೇಬಲ್, ಕುರ್ಚಿಗಳು, ಆಹಾರ ಪದಾರ್ಥಗಳು, ಆಶ್ ಟ್ರೇ, ಬೆಂಕಿಪೆಟ್ಟಿಗೆ ಅಥವಾ ಲೈಟರ್ ಗಳನ್ನು ನೀಡುವಂತಿಲ್ಲ.
ಮುನಿಸಿಪಲ್ ಆಡಳಿತ ನಿರ್ದೇಶನಾಲಯ ಈ ಸುತ್ತೋಲೆಯನ್ನು ಹೊರಡಿಸಿದ್ದು ಧೂಮಪಾನಿಗಳಲ್ಲದವರು ಹಾಗೂ 18 ವರ್ಷದೊಳಗಿನ ವ್ಯಕ್ತಿಗಳು ಈ ಸ್ಥಳಗಳಿಗೆ ಪ್ರವೇಶಿಸುವುದಕ್ಕೆ ಅನುಮತಿಸಬಾರದು ಎನ್ನಲಾಗಿದೆ. ಸರ್ಕಾರವು ಧೂಮಪಾನಿಗಳಲ್ಲದವರ ಆರೋಗ್ಯ ಕಾಳಜಿಯಿಂಡ ಈ ಕ್ರಮಕ್ಕೆ ಮುಂದಾಗಿದೆ.
ಹೋಟೆಲ್, ಬಾರ್ ಗಳಲ್ಲಿ 30 ಕ್ಕಿಂತ ಹೆಚ್ಚಿನ ಆಸನಗಳನ್ನು ಹೊಂದಿದೆಯೆ ಎಂದು ಪರಿಶೀಲಿಸಲಿರ್ವ ನಾಗರಿಕ ಸೇವೆ ವಿಭಾಗ ಅವರಿಗೆ ನೋ-ಆಬ್ಜೆಕ್ಷನ್ ಸರ್ಟಿಫಿಕೇಟ್ (ಎನ್ಒಸಿ) ನೀಡಿದ ಬಳಿಕವಷ್ಟೇ ಧೂಮಪಾನವನ್ನು ಗೊತ್ತುಪಡಿಸಿದ ಧೂಮಪಾನ ಪ್ರದೇಶಗಳಲ್ಲಿ ಅನುಮತಿಸಲಾಗುವುದುಈ ನಿಯಮಗಳ ಉಲ್ಲಂಘಿಸಿದ ಪಬ್, ಬಾರ್ ಹಾಗೂ ರೆಸ್ಟೋರೆಂಟ್ ಗಳ ಪರವಾನಗಿ ರದ್ದುಗೊಳ್ಳಲಿದೆ.
ಪರೋಕ್ಷ ಧೂಮಪಾನಕ್ಕೆ ಯಾವ ನಿರ್ದಿಷ್ಟ ತಡೆ ಕ್ರಮಗಳಿಲ್ಲ ಎನ್ನುವುದನ್ನು ಇತ್ತೀಚಿನ ಅದ್ಯಯನ ತೋರಿಸಿದೆ. ನಾವು ಹೋಟೆಲ್ ಹಾಗೂ ಬಾರ್ ಗಳಲ್ಲಿ ದುಡಿಯುವ ಜನರ ಹಿತವನ್ನು ಬಯಸುತ್ತೇವೆ.ಅಲ್ಲದೆ , ಗ್ರಾಹಕರು ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳ ಆರೋಗ್ಯದ ಬಗ್ಗೆ ನಮಗೆ ಕಾಳಜಿ ಇದೆ ಎಂದು ಕರ್ನಾಟಕದ ನಗರಾಭಿವೃದ್ಧಿ ಮತ್ತು ವಸತಿ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.
ಪರೋಕ್ಷ ಧೂಮಪಾನ ನೇರವಾಗಿ ಧೂಮಪಾನ ಮಾಡುವುದಕ್ಕಿಂತಲೂ ಹಾನಿಕಾರಕ ಎನ್ನುವುದು ಎಲ್ಲಾ ವೈಜ್ಞಾನಿಕ ಸಾಕ್ಷ್ಯಗಳಿಂದ ಸಾಬೀತಾಗಿದೆ.ಈ ಸಮಸ್ಯೆಯನ್ನು ಬಗೆಹರಿಸಲು ನಾವು ಆದ್ಯತೆ ನೀಡಬೇಕಿದೆ. ಹೋಟೆಲ್ ಹಾಗೂ ಬಾರ್ ಮಾಲೀಕರ ಸಂಘಗಳು ನಮ್ಮ ಈ ಉಪಕ್ರಮವನ್ನು ಸ್ವಾಗತಿಸುತ್ತವೆ ಎನ್ನುವ ನಂಬಿಕೆ ನಮಗಿದೆ.ಹೋಟೆಲ್, ಬಾರ್, ಕ್ಲಬ್ ಗಳಲ್ಲಿ ದುಡಿಯುವವರ ಆರೋಗ್ಯದ ಹಕ್ಕನ್ನು ಉಳಿಸುವ ನೈತಿಕ ಜವಾಬ್ದಾರಿ ನಮ್ಮದಾಗಿದೆ ಎಂದು ಅವರು ಹೇಳಿದ್ದಾರೆ.
ನ್ಯಾಷನಲ್ ಸೆಂಟರ್ ಫಾರ್ ಡಿಸೀಸ್ ಇನ್ಫಾರ್ಮ್ಯಾಟಿಕ್ಸ್ ಅಂಡ್ ರಿಸರ್ಚ್ (ಎನ್ಸಿಡಿಐಆರ್), ಅಸೋಸಿಯೇಷನ್ ಸಹಯೋಗದೊಂದಿಗೆ ಸೋಮವಾರ ಆಯೋಜಿಸಿದ್ದ ಜಂಟಿ ಸಮಾಲೋಚನೆ ಸಭೆಯ 'ಅಡ್ವಾನ್ಸಿಂಗ್ ಅರ್ಬನ್ ಹೆಲ್ತ್ ಪಾಲಿಸಿಸ್ - ಕಮ್ಯುನಿಕೇಬಲ್ ಡಿಸೀಸ್ ತಡೆಗಟ್ಟುವಿಕೆಗೆ ಪ್ರಮುಖ ನೀತಿಗಳು' ಹೆಲ್ತ್ಕೇರ್ ಪ್ರೊವೈಡರ್ಸ್ (ಇಂಡಿಯಾ) ಮತ್ತು ನ್ಯಾಷನಲ್ ಬೋರ್ಡ್ ಅಸೋಸಿಯೇಷನ್ ಆಫ್ ಅಕ್ರೆಡಿಟೆಡ್ ಇನ್ಸ್ಟಿಟ್ಯೂಶನ್ಸ್ ಕಾರ್ಯಕ್ರಮದ ಭಾಗವಾಗಿ ಈ ಸುತ್ತೋಲೆ ಹೊರಡಿಸಲಾಗಿದೆ.
ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ, ನಾನ್ ಕಮ್ಯುನಿಕೇಬಲ್ ರೋಗಗಳು (ಎನ್ಸಿಡಿಗಳು) ಪ್ರಮುಖವಾಗಿ ಹೃದಯಾಘಾತ ರೋಗಗಳು ಸ್ಟ್ರೋಕ್, ಮಧುಮೇಹ, ಕ್ಯಾನ್ಸರ್ ಮತ್ತು ಶ್ವಾಸಕೋಶದ ಕಾಯಿಲೆಗಳು ಭಾರತದಲ್ಲಿ ಸುಮಾರು 61% ನಷ್ಟು ಸಾವಿಗೆ ಕಾರಣವಾಗಿವೆ ಮತ್ತು 2008 ರಲ್ಲಿ ಎನ್ಸಿಡಿಗಳ ಕಾರಣದಿಂದ 5.2 ಮಿಲಿಯನ್ ಸಾವುಗಳು ಸಂಭವಿಸಿದೆ. ತಂಬಾಕು ಇಂತಹಾ ಸಾವಿಗೆ ಪ್ರಮುಖ ಕಾರಣವಾಗಿದ್ದು ಜಾಗತಿಕವಾಗಿ 14 ಶೇಕಡಾದಷ್ಟು ಸಾವುಗಳಿಗೆ ತಂಬಾಕು ಕಾರಣವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics