ಪರಮೇಶ್ವರ್ 
ರಾಜ್ಯ

ಜನಸ್ನೇಹಿ ತರಬೇತಿ ನೀಡಲು ಪೊಲೀಸರ ಪಠ್ಯಕ್ರಮದಲ್ಲಿ ಬದಲಾವಣೆ: ಪರಮೇಶ್ವರ್

ಜನರು ಪೊಲೀಸ್ ಠಾಣೆಯಲ್ಲಿ ಸೇವೆ ಪಡೆಯಲು ಯಾವುದೇ ಭಯವಿಲ್ಲದೇ ಬರುವಂತ ವಾತಾವರಣ ನಿರ್ಮಿಸಲು ಪೊಲೀಸರಿಗೆ ತರಬೇತಿ ವೇಳೆಯೇ ...

ಬೆಂಗಳೂರು: ಜನರು ಪೊಲೀಸ್ ಠಾಣೆಯಲ್ಲಿ ಸೇವೆ ಪಡೆಯಲು ಯಾವುದೇ ಭಯವಿಲ್ಲದೇ ಬರುವಂತ ವಾತಾವರಣ ನಿರ್ಮಿಸಲು ಪೊಲೀಸರಿಗೆ ತರಬೇತಿ ವೇಳೆಯೇ ಜನಸ್ನೇಹಿಯಾಗಿಸಲು ಪಠ್ಯಕ್ರಮದಲ್ಲಿ ಬದಲಾವಣೆ ತರಲಾಗುವುದು ಎಂದು ಉಪ ಮುಖ್ಯಮಂತ್ರಿ ಹಾಗೂ ಗೃಹ ಸಚಿವ ಡಾ.ಜಿ ಪರಮೇಶ್ವರ್ ಹೇಳಿದ್ದಾರೆ.
ನವೀಕರಣಗೊಂಡ ತಿಲಕ್ ನಗರ ಪೊಲೀಸ್ ಠಾಣೆ ಉದ್ಘಾಟಿಸಿದ ಬಳಿಕ ಮಾತನಾಡಿದ ಪರಮೇಶ್ವರ್, ಇಲ್ಲಿಯವರೆಗೆ ಪಠ್ಯಕ್ರಮದಲ್ಲಿ ಪೊಲೀಸ್ ಬಗ್ಗೆ ಮಾತ್ರ  ತರಬೇತಿ ಇರುತ್ತಿತ್ತು. ಆದರೆ ಜನರು ಯಾವುದೇ ಹಿಂಜರಿಕೆಯಿಲ್ಲದೇ ಪೊಲೀಸ್ ಠಾಣೆಗೆ ಹೋಗುವಂತ ವಾತಾವರಣ ನಿರ್ಮಿಸಬೇಕಾಗಿದೆ, ಹೀಗಾಗಿ ನಾವು ಪಠ್ಯಕ್ರಮದಲ್ಲೇ ಬದಲಾವಣೆ ತರಲು ಬಯಸಿದ್ದೇವೆ ಎಂದು ಹೇಳಿದ್ದಾರೆ.
ಪೊಲೀಸ್ ಸಿಬ್ಬಂದಿ ವೇತನ ತಾರತಮ್ಯ ಸರಿದೂಗಿಸಲು ರಾಘವೇಂದ್ರ ಔರಾದ್ಕರ್ ಅವರು ವರದಿಯನ್ನು ಜಾರಿಗೆ ತರಲು ಮುಖ್ಯಮಂತ್ರಿ ಎಚ್.ಡಿ ಕುಮಾರ ಸ್ವಾಮಿ ಅನುಮೋದನೆ ನೀಡಿದ್ದಾರೆ ಎಂದು ತಿಳಿಸಿದರು. 
22 ಕೋಟಿ ರು ವೆಚ್ಚದಲ್ಲಿ ಇನ್ ಫೋಸಿಸ್ ಕಂಪನಿ  ಸೈಬರ್ ಕ್ರೈಂ ತರಬೇತಿ ಕಟ್ಟಡವನ್ನು ನಿರ್ಮಿಸಿಕೊಡುತ್ತಿರುವುದಕ್ಕೆ ಪರಮೇಶ್ವರ ಅಭಿನಂದನೆ ಸಲ್ಲಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್, ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

ಲೆಬನಾನ್ ನಲ್ಲಿ ಇಸ್ರೇಲ್ ಆರ್ಭಟ: ಮನೆಗಳ ಮೇಲೆ ಸ್ಫೋಟಕಗಳಿಂದ ದಾಳಿ; ಹಲವು ಹಳ್ಳಿಗಳು ನಾಮಾವಶೇಷ!

IPL 2026: MI vs RCB; ಫಿಲ್ ಸಾಲ್ಟ್, ಕೊಹ್ಲಿ, ಪಾಟಿದಾರ್ ಭರ್ಜರಿ ಬ್ಯಾಟಿಂಗ್, ಮುಂಬೈಗೆ ಗೆಲ್ಲಲು 241 ರನ್ ಬೃಹತ್ ಗುರಿ!

SCROLL FOR NEXT