ರಾಜ್ಯ

ಬೆಂಗಳೂರು-ಮೈಸೂರು ನಡುವೆ ಸದ್ಯದಲ್ಲಿಯೇ ವಿಶ್ವದ ಹಳೆಯ ಉಗಿಬಂಡಿ ಸಂಚಾರ

Sumana Upadhyaya

ಬೆಂಗಳೂರು: ರೈಲು ಪ್ರಯಾಣ ಪ್ರಿಯರಿಗೆ ಇಲ್ಲೊಂದು ಸಿಹಿಸುದ್ದಿಯಿದೆ. ಬೆಂಗಳೂರು-ಮೈಸೂರು ನಡುವೆ ವಿಶ್ವದ ಅತಿ ಹಳೆಯ ಕಾರ್ಯನಿರ್ವಹಿಸುತ್ತಿರುವ ಬ್ರಾಜ್ ಗಾಜ್ ಉಗಿಬಂಡಿ ಸದ್ಯದಲ್ಲಿಯೇ ಆರಂಭವಾಗಲಿದೆ.

ಈ ಉಗಿಬಂಡಿಯನ್ನು 1855ರಲ್ಲಿ ನಿರ್ಮಿಸಲಾಗಿದ್ದು ಪ್ರಸ್ತುತ ಚೆನ್ನೈಯಲ್ಲಿದೆ, ಪ್ರಮುಖ ಸಂದರ್ಭಗಳಲ್ಲಿ ಅಲ್ಪ ದೂರದವರೆಗೆ ಚಲಿಸುತ್ತಿರುತ್ತದೆ.

ಯಲಹಂಕದ ರೈಲು ವೀಲ್ ಫ್ಯಾಕ್ಟರಿಯಲ್ಲಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ರೈಲ್ವೆ ಮಂಡಳಿ ಅಧ್ಯಕ್ಷ ಅಶ್ವಿನಿ ಲೊಹಣಿ, ಬೆಂಗಳೂರು-ಮೈಸೂರು ನಡುವೆ ಇಐಆರ್ -21 ರೈಲನ್ನು ಚಲಾಯಿಸಲು ನಾವು ಸಿದ್ಧತೆ ನಡೆಸುತ್ತಿದ್ದೇವೆ. ಇವೆರಡು ವಿಶ್ವದಲ್ಲಿಯೇ ಅತಿ ಹಳೆಯ ಕಾರ್ಯನಿರ್ವಹಿಸುತ್ತಿರುವ ಉಗಿಬಂಡಿಗಳಾಗಿವೆ ಎಂದರು.

ಈ ಪಾರಂಪರಿಕ ರೈಲು ಕರ್ನಾಟಕ ರಾಜ್ಯ ಇತಿಹಾಸದಲ್ಲಿ ಮೊದಲ ಬಾರಿಗೆ ಚಲಿಸುತ್ತಿದೆ. ಪ್ರತಿ ಉಗಿಬಂಡಿಯಲ್ಲಿ ಒಂದು ಅಥವಾ ಎರಡು ಬೋಗಿಗಳು ಮತ್ತು ಗರಿಷ್ಟ 60 ಪ್ರಯಾಣಿಕರವರೆಗೆ ಪ್ರಯಾಣಿಸಬಹುದು. ಚೆನ್ನೈಯಿಂದ ಅದನ್ನು ತರಿಸಲಾಗಿದೆ.
ಕರ್ನಾಟಕದಲ್ಲಿ ಅದು ಕೆಲ ದಿನ ಸಂಚರಿಸುವ ಮೂಲಕ ರಾಜ್ಯದ ಜನತೆಗೆ ಅನುಭವ ಸಿಗಲಿದೆ ಎಂದರು.

ನಗರಕ್ಕೆ ತರುವ ಮುನ್ನ ಕೆಲವು ಕಾರ್ಯವಿಧಾನಗಳನ್ನು ಪೂರ್ಣಗೊಳಿಸಬೇಕಾಗುತ್ತದೆ. ಅದನ್ನು ಸಾಧ್ಯವಾದಷ್ಟು ಸದ್ಯದಲ್ಲಿಯೇ ಅಳವಡಿಸಲಾಗುವುದು ಎಂದರು.

ಈ ಎರಡು ಉಗಿಬಂಡಿಗಳು ಮಾತ್ರವಲ್ಲದೆ, ಡಾರ್ಜಲಿಂಗ್ ನಲ್ಲಿ ಮೂರು ಪರ್ವತ ರೈಲುಗಳು, ಕಲ್ಕಾ-ಶಿಮ್ಲಾ ಮತ್ತು ನೀಲಗಿರಿಗಳಲ್ಲಿ ಉಗಿಬಂಡಿಗಳನ್ನು ಚಲಾಯಿಸಲಾಗುತ್ತಿದ್ದು ಅದು ಕಿರಿದಾದ ಗೇಜ್ ಟ್ರಾಕ್ ಗಳಲ್ಲಿ ಚಲಿಸಲಿದೆ ಎಂದರು.

SCROLL FOR NEXT