ಬೆಂಗಳೂರು: ಬಹುನಿರೀಕ್ಷಿತ ಮತ್ತೊಂದು 6 ಬೋಗಿಗಳ ಮೆಟ್ರೋ ರೈಲಿಗೆ ಸಿಎಂ ಕುಮಾರಸ್ವಾಮಿ ಚಾಲನೆ
ಬೆಂಗಳೂರು: ಬಹು ನಿರೀಕ್ಷಿತ ಮೂರನೇ 6 ಬೋಗಿಗಳ ಮೆಟ್ರೋ ರೈಲಿಗೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಗುರುವಾರ ಚಾಲನೆ ನೀಡಿದರು.
ವಿಧಾನಸೌಧದ ಬಳಿಯ ಡಾ.ಬಿ.ಆರ್.ಅಂಬೇಡ್ಕರ್ ನಿಲ್ದಾಣದಲ್ಲಿ ಕುಮಾರಸ್ವಾಮಿಯುವರು ಆರು ಬೋಗಿಗಳ ರೈಲಿಗೆ ಗ್ರೀನ್ ಸಿಗ್ನಲ್ ನೀಡಿದರು. ಇದರಿಂದ 6 ಬೋಗಿಗಳ ಮೂರನ ರೈಲು ಇಂದಿನಿಂದ ಕಾರ್ಯಾಚರಣೆ ಆರಂಭಿಸಿದೆ.
ಈ ಹಿಂದೆ ಜೂ.22 ಹಾಗೂ ಅ.4 ರಂದು ಮೊದಲೆರಡು 6 ಬೋಗಿಗಳ ಮೆಟ್ರೋ ರೈಲಿಗೆ ಚಾಲನೆ ನೀಡಲಾಗಿತ್ತು.
ಪರ್ಪಲ್ ಲೈನ್ ನಲ್ಲಿ ಪ್ರಯಾಣಿಕರ ಸಂಖ್ಯೆ 4 ಲಕ್ಷ ಮೀರಿರುವ ಹಿನ್ನಲೆಯಲ್ಲಿ ಈ ಮಾರ್ಗಕ್ಕೆ ಆರು ಬೋಗಿ ಸೇರ್ಪಡೆಗೊಳಿಸಲು ಬಿಎಂಆರ್'ಸಿಎಲ್ ಅಧಿಕಾರಿಗಳು ನಿರ್ಧರಿಸಿದ್ದರು.
ಇದರಂತೆ 6 ಬೋಗಿಗಳ ಮೆಟ್ರೋ ರೈಲಿಗೆ ಸಿಎಂ ಚಾಲನೆ ನೀಡಿದ್ದು, ಈ 6 ಬೋಗಿಯ ಮೆಟ್ರೋ ರೈಲಿನಲ್ಲಿ 2,004 ಪ್ರಯಾಣಿಕರು ಪ್ರಯಾಣಿಸಬಹುದಾಗಿದೆ. ಆರು ಬೋಗಿಗಳ ಪೈಕಿ ಮೊದಲ ಬೋಗಿ ಮಹಿಳೆಯರಿಗೆ ಮೀಸಲಿಡಲಾಗಿದೆ.