ಮೈಸೂರು: ಬಲ ಪಂಥೀಯರನ್ನು ತೀವ್ರವಾಗಿ ವಿರೋಧಿಸುವ ಮ್ಯಾಗ್ಸೆಸ್ಸೆ ಪ್ರಶಸ್ತಿ ಪುರಸ್ಕೃತ ಕರ್ನಾಟಕ ಶಾಸ್ತ್ರೀಯ ಸಂಗೀತಗಾರ ಟಿ.ಎಂ.ಕೃಷ್ಣ ದೇಶಕ್ಕೆ ಪ್ರಧಾನಿ ನರೇಂದ್ರ ಮೋದಿಗಿಂತ ಉತ್ತಮ ನಾಯಕನ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದಾರೆ.
ಮೈಸೂರಿನ ಸುತ್ತೂರು ಮಠದಲ್ಲಿ 2ನೇ ಬಾರಿಗೆ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟು ಮಾತನಾಡಿದ ಕೃಷ್ಣ ಅವರು, ಯಾರೂ ಪ್ರಧಾನಿ ಆಗಬೇಕೆಂಬ ಚಿಂತೆ ಬಿಡಬೇಕು. ಜನರು ಯಾವುದೋ ಪಕ್ಷ ಅಥವಾ ಸಿದ್ಧಾಂತ ಇರುವವರನ್ನು ಸಂಸದರನ್ನಾಗಿ ಕಳುಹಿಸದೇ ಉತ್ತರನ್ನು ಆಯ್ಕೆ ಮಾಡಬೇಕು.
ಪ್ರಾದೇಶಿಕ ಪಕ್ಷಗಳಿಗೆ ಅಧಿಕಾರ ಸಿಕ್ಕರೆ ಎಲ್ಲಾ ಭಾಷಿಕರಿಗೂ ಶಕ್ತಿ ಬಂದಂತೆ ಆಗುತ್ತದೆ. ಈ ಎಲ್ಲಾ ಸಮಸ್ಯೆಗೆ ಪರಿಹಾರ ಸಿಗಬೇಕಾದರೆ ಪ್ರಾದೇಶಿಕ ಪಕ್ಷಗಳು ಮುನ್ನಲೆಗೆ ಬರಬೇಕು. ಈ ದೇಶಕ್ಕೆ ಇದು ಅನಿವಾರ್ಯ ಕೂಡ. ಇಲ್ಲಿ ನಾವು ಕೇವಲ ಸಂಸದರನ್ನು ಆಯ್ಕೆ ಮಾಡಿ ಕಳುಹಿಸುತ್ತೇವೆ, ಪ್ರಧಾನಿಯನ್ನಲ್ಲ, ಆದರೆ ಪಾಶ್ಚಿಮಾತ್ಯ ದೇಶಗಳಲ್ಲಿ ಅಧ್ಯಕ್ಷರನ್ನು ಜನರೇ ನೇರವಾಗಿ ಆಯ್ಕೆ ಮಾಡುತ್ತಾರೆ ಎಂದು ಹೇಳಿದ್ದಾರೆ.
ಮೋದಿ ಅವರ ಹಲವು ನಿಯಮಗಳ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದ ಅವರು, ದೇಶದಲ್ಲಿ ನಡೆದ ಹಲವು ಲಿಂಚಿಂಗ್ ಪ್ರಕರಣಗಳ ಪ್ರಧಾನ ಮಂತ್ರಿ ಕಾರ್ಯಾಲಯಕ್ಕೆ ಪತ್ರ ಬರೆದಿದ್ದೆ.ಆದರೆ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಹೇಳಿದ್ದಾರೆ.