ರಾಜ್ಯ

ಗೌರಿ ಹತ್ಯೆ ಪ್ರಕರಣ: ಚಾರ್ಜ್'ಶೀಟ್'ನಲ್ಲಿ ಸನಾತನ ಸಂಸ್ಥೆ ಹೆಸರು

Manjula VN
ಬೆಂಗಳೂರು: ಹಿರಿಯ ಪತ್ರಕರ್ತೆ ಗೌರಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ನ್ಯಾಯಾಲಯಕ್ಕೆ 9235 ಪುಟುಗಳನ್ನು ಒಳಗೊಂಡ ಹೆಚ್ಚುವರಿ ದೋಷಾರೋಪಣಾ ಪಟ್ಟಿಯನ್ನು ಶುಕ್ರವಾರ ಎಸ್ಐಟಿ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದ್ದು, ಚಾರ್ಜ್ ಶೀಟ್ ನಲ್ಲಿ ಹಂತಕರಿಗೆ ಗೋವಾ ಮೂಲದ ಬಲಪಂಥೀಯ ವಿಚಾರಧಾರೆ ಪ್ರತಿಪಾದಿಸುವ ಸನಾತನ ಸಂಸ್ಥೆ ಜೊತೆಗೆ ನಂಟು ಇತ್ತು ಎಂದು ಹೇಳಿದೆ. 
ಕೊಲೆ ಸಂಚಿನಲ್ಲಿ ನೇರವಾಗಿ ಸತಾನ ಸಂಸ್ಥೆ ಪಾತ್ರವಹಿಸಿದೆಯೋ ಅಥವಾ ಇಲ್ಲವೋ ಎಂಬುದು ಇನ್ನೂ ಖಚಿತವಾಗಿಲ್ಲ. ಆದರೆ, ಆ ಸಂಸ್ಥೆ ಜೊತೆ ಕೊಲೆ ಪ್ರಕರಣದ ಪ್ರಮುಖ ಆರೋಪಿ ಮಹಾರಾಷ್ಟ್ರ ಮೂಲದ ಅಮೋಲ್ ಕಾಳೆ ಸೇರಿದಂತೆ 5 ಆರೋಪಿಗಳಿಗೆ ನಕಟ ನಂಟಿತ್ತು ಎಂಬುದಕ್ಕೆ ಪುರಾವೆಗಳಿವೆ ಎಂದು ಎಸ್ಐಟಿ ಹೇಳಿಕೊಂಡಿದೆ ಎಂದು ವರದಿಗಳು ತಿಳಿಸಿವೆ. 
ಹಂತಕರಿಗೆ ಗೌರಿ ಲಂಕೇಶ್ ಅವರೊಂದಿಗೆ ಯಾವುದೇ ರೀತಿಯ ವೈಯಕ್ತಿಕ ವೈಷಮ್ಯಗಳಿರಲಿಲ್ಲ. ಹಾಗಾದರೆ, ಯಾವ ಕಾರಣಕ್ಕೆ ಅವರನ್ನು ಹತ್ಯೆ ಮಾಡಲಾಯಿತು? ಇದಕ್ಕೆ ಕಾರಣ ಅವರು ನಂಬಿದ್ದ ಕೆಲ ಸಿದ್ಧಾಂತಗಳು. ಈ ಸಿದ್ಧಾಂತದ ಬಗ್ಗೆ ಅವರು ಬರೆಯುತ್ತಿದ್ದ ಬರವಣಿಗೆ ಹಾಗೂ ಆಡುತ್ತಿದ್ದ ಮಾತುಗಳು. ಸಿದ್ಧಾಂತ ಹಾಗೂ ಸಂಘಟನೆಯೇ ಇದಕ್ಕೆ ಕಾರಣವಿರಬಹುದು ಎಂದು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಎಸ್. ಬಾಲನ್ ಅವರು ಹೇಳಿದ್ದಾರೆ. 
ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ ಬಳಿಕ ಮತ್ತಷ್ಟು ತನಿಖೆಗಾಗಿ ಕಾಲಾವಕಾಶ ಬೇಕೆಂದು ಮನವಿ ಮಾಡಿಕೊಂಡಿದೆ ಎಂದು ತಿಳಿದುಬಂದಿದೆ. 
SCROLL FOR NEXT