ಕಂಠೀರವ ಸ್ಟುಡಿಯೋದಲ್ಲಿ ಅಂಬಿ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೋಂಡಿದ್ದ ಜನ
ಬೆಂಗಳೂರು: ಶನಿವಾರ ನಿಧನರಾದ ಮಂಡ್ಯದ ಗಂಡು ಅಂಬರೀಷ್ ಅವರಿಗೆ ತವರು ಜಿಲ್ಲೆ ಮಂಡ್ಯದಲ್ಲಿ ಸಾರ್ವಜನಿಕ ದರ್ಶನಕ್ಕೆ ಸರ್.ಎಂ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಇಡಲಾಗಿತ್ತು, ಈ ವೇಳೆ ಲಕ್ಷಾಂತರ ಮಂದಿ ಅಭಿಮಾನಿಗಳು ದರ್ಶನ ಪಡೆದರು.
ಭಾನುವಾರ ಬೆಳಗ್ಗಿನವರೆಗೂ ಅಂಬರೀಶ್ ದರ್ಶನ ಪಡೆಯಲು ಜನಸಾಗರ ಹರಿದು ಬರುತ್ತಲೇ ಇತ್ತು. ಹೀಗಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಅಂಬರೀಷ್ ಕುಟುಂಬಸ್ಥರು ಬೆಳಗ್ಗೆ 10 ಗಂಟೆವರೆಗೂ ಕ್ರೀಡಾಂಗಣದಲ್ಲಿ ದರ್ಶನಕ್ಕೆ ಇಡಲಾಗಿತ್ತು.
ಮೈಸೂರು, ಚಾಮರಾಜನಗರ, ಹಾಸನ, ರಾಮನಗರ ಮತ್ತು ಹಲವು ಜಿಲ್ಲೆಗಳಿಂದ ಅಪಾರ ಪ್ರಮಾಣದಲ್ಲಿ ಅಭಿಮಾನಿಗಳು ದರ್ಶನ ಪಡೆದರು. ಸಾವಿರಾರು ವಾಹನಗಳು ಬಂದಿದ್ದರಿಂದ ಟ್ರಾಫಿಕ್ ಜಾಮ್ ಉಂಟಾಗಿತ್ತು. ಮೂರು ದಶಕಗಳ ಕಾಲ ಕನ್ನಡ ಸಿನಿಮಾ ಪ್ರೇಕ್ಷಕರನ್ನು ರಂಜಿಸಿದ ಅಂಬರೀಷ್ ಜನ ಮಾನಸದಲ್ಲಿ ಅಚ್ಚಳಿಯದೇ ಉಳಿದಿದ್ದಾರೆ, ಮೃತ ನಟ ಪಾರ್ಥೀವ ಶರೀರದ ಮುಂದೆ ಹಲವು ಅಭಿಮಾನಿಗಳು ಸೆಲ್ಪೀ ತೆಗೆದುಕೊಂಡರು.
ಹರಿದು ಬರುತ್ತಿದ್ದ ಜನಸಾಗರವನ್ನು ಸುಧಾರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.ಅಭಿಮಾನಿಗಳು ಬ್ಯಾರಿಕೇಡ್ ಮುರಿದು ನುಗ್ಗುತ್ತಿದ್ದ ಕಾರಣ ನೆರೆಹೊರೆಯ ಜಿಲ್ಲೆಗಳಿಂದ ಪೊಲೀಸರನ್ನು ಕರೆತರಲಾಗಿತ್ತು,.
ಗಣ್ಯರಿಗಾಗಿ ಮೀಸಲಿದ್ದ ಗೇಟ್ ನಲ್ಲಿ ಅಭಿಮಾನಿಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್ ಪುಟ್ಟರಾಜು ಕರೆತಂದರು. ಅಂಬರೀಷ್ ಪರ ಘೋಷಣೆಗಳನ್ನು ಕೂಗುತ್ತಾ ದರ್ಶನ ಪಡೆಯಲು ಸಾಲಲ್ಲಿ ನಿಂತಿದ್ದರು. ಜಿಲ್ಲಾಡಳಿತ ಶಾಂತಿ ಕಾಪಾಡುವಂತೆ ಮನವಿ ಮಾಡುತ್ತಿದ್ದರು.