ರಾಜ್ಯ

ಹುಬ್ಬಳ್ಳಿ: ಸ್ವಚ್ಚತೆಯಿಂದಾಗಿ ದೇಶಕ್ಕೆ ಮಾದರಿಯಾಗಿದೆ ಮುಗಾದ್ ರೈಲ್ವೆ ನಿಲ್ದಾಣ!

Shilpa D
ಹುಬ್ಬಳ್ಳಿ: ದೇಶದ ಎಲ್ಲಾ ರೈಲ್ವೆ ನಿಲ್ದಾಣಗಳ ಹಳಿಗಳ ನ್ನು ದೊಡ್ಡದಾಗಿ ಬದಲಾವಣೆಯಾಗುತ್ತಿದೆ,  ಆದರೆ ಅಲ್ಲಿ ಸ್ವಚ್ಚತೆಯೇ ದೊಡ್ಡ ಸಮಸ್ಯೆಯಾಗಿದೆ, ಹುಬ್ಬಳ್ಳಿಯಿಂದ 30 ಕಿಮೀ ದೂರದಲ್ಲಿರುವ ಮುಗಾದ್ ರೈಲ್ವೆ ನಿಲ್ದಾಣ ಸ್ವಚ್ಚವಾಗಿದೆ.
ರೈಲ್ವೆ ನಿಲ್ದಾಣ ಸ್ವಚ್ಚವಾಗಿಡುವ ಜೊತೆಗೆ, ಹಳಿಗಳಿಗೆ ಪೈಂಟ್ ಕೂಡ ಮಾಡಿದ್ದಾರೆ, ಈ ರೈಲ್ವೆ ನಿಲ್ದಾಣವನ್ನು ಕೇಂದ್ರ ರೈಲ್ವೆ ಸಚಿವ ಪಿಯೂಶ್ ಗೋಯೆಲ್ ದೇಶದ ಮಾದರಿ ರೇಲ್ವೆ ನಿಲ್ದಾಣ ಎಂಬ ಹೊಗಳಿಕೆ ಪಡೆದಿದೆ.
ಹುಬ್ಬಳ್ಳಿ ಲೊಂಡಾ ವಲಯದಲ್ಲಿ ರುವ ಈ ರೇಲ್ವೈ ಹಳಿಗೆ ಸ್ವಚ್ಚ ಭಾರತ ಅಭಿಯಾನದಿಂದ ಸಹಾಯವಾಗಿದೆ, ಸ್ವಚ್ಛತೆಗೆ ಮೊದಲ ಆದ್ಯತೆ ನೀಡುವುದು ಹಲವು ವರ್ಷಗಳಿಂದ ರೂಢಿಯಾಗಿದೆ.ಇಲ್ಲಿನ ಸಿಬ್ಬಂದಿ ಸ್ವಇಚ್ಚೆಯಿಂದ ಸ್ವಚ್ಛತೆಯಲ್ಲಿ ಪಾಲ್ಗೋಳ್ಳುತ್ತಾರೆ ಹೊರತು ಬಲವಂತದಿಂದಲ್ಲ,
ಇಲ್ಲಿನ ಸಿಬ್ಬಂದಿಯ ಟೀಮ್ ವರ್ಕ್ ರೈಲ್ವೆ ಹಳಿ ಸ್ವಚ್ಛತೆಯಿಂದರಲು ಕಾರಣವಾಗಿದೆ, ಪ್ರತಿಯೊಬ್ಬರು ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾಗುತ್ತಾರೆ, ಜೊತೆಗೆ ಹಳಿಗಳ ಮೇಲೆ ಕಸ ಕಡ್ಡಿ ಹಾಕದಂತೆ ಪ್ರಯಾಣಿಕರಿಗೆ ಮನವಿ ಮಾಡುತ್ತಾರೆ.
ಸ್ವಚ್ಚತೆಯ ಜೊತೆಗೆ ಇಲ್ಲಿನ ಸಿಬ್ಬಂದಿ ಹಾಗೂ ಸ್ಟೇಷನ್ ಮಾಸ್ಟರ್ ಸಣ್ಣದೊಂದು ಗಾರ್ಡನ್ ಕೂಡ ಮಾಡಿದ್ದಾರೆ. ಹೀಗಾಗಿ ಈ ರೈಲ್ವೆ ನಿಲ್ದಾಣದ ಸೌಂದರ್ಯ ಮತ್ತಷ್ಚು ಹೆಚ್ಚಾಗಿದೆ. 
SCROLL FOR NEXT