ರಾಜ್ಯ

ಕರಾವಳಿಯ ನಗರಗಳ ಕುಡಿಯುವ ನೀರು ಪೂರೈಕೆಗೆ ಎಡಿಬಿಯಿಂದ ಸಾಲದ ನೆರವು

Sumana Upadhyaya

ನವದೆಹಲಿ: ಕರ್ನಾಟಕದ ನಾಲ್ಕು ಕರಾವಳಿಯ ನಗರಗಳಿಗೆ ಕುಡಿಯುವ ನೀರು ಒದಗಿಸಲು ಯೋಜನೆಗೆ ಏಷ್ಯನ್ ಅಭಿವೃದ್ಧಿ ಬ್ಯಾಂಕ್ (ಎಡಿಬಿ) 75 ಮಿಲಿಯನ್ ಅಮೆರಿಕನ್ ಡಾಲರ್ (ಸುಮಾರು 532 ಕೋಟಿ ರೂಪಾಯಿ) ಸಾಲದ ನೆರವು ನೀಡಲಿದೆ.

ಕುಂದಾಪುರ, ಮಂಗಳೂರು, ಪುತ್ತೂರು ಮತ್ತು ಉಡುಪಿ ನಗರಗಳಿಗೆ ನೀರು ಪೂರೈಕೆಗೆ ಇರುವ ಯೋಜನೆ ಇದಾಗಿದ್ದು ಮಂಗಳೂರು ನಗರದ ಶುಚಿತ್ವಕ್ಕಾಗಿ ಸಹ ಬ್ಯಾಂಕಿನ ಸಾಲವನ್ನು ಬಳಸಿಕೊಳ್ಳಲಾಗುತ್ತದೆ.

2014ರಲ್ಲಿ ಎಡಿಬಿ ಮಂಡಳಿ ಅನುಮೋದನೆ ನೀಡಿದ್ದ ಈ ಕಾರ್ಯಕ್ರಮವನ್ನು ನಗರದಲ್ಲಿ ನೀರಿನ ಪೂರೈಕೆಗಾಗಿ ಮತ್ತು ನೀರಿನ ಸಂಪನ್ಮೂಲ ನಿರ್ವಹಣೆಗೆ, ನಗರದ ಮೂಲಭೂತ ಸೌಕರ್ಯಗಳ ಸುಧಾರಣೆಗೆ ಹಣವನ್ನು ವಿನಿಯೋಗಿಸಲಾಗುತ್ತದೆ.

ರಾಜ್ಯದ ಬ್ಯಾಡಗಿ, ದಾವಣಗೆರೆ ಮತ್ತು ಹರಿಹರ ಪಟ್ಟಣಗಳಲ್ಲಿ ಸಹ ನೀರಿನ ಪೂರೈಕೆಗೆ ಸಹ ಅನುದಾನವನ್ನು ಬಳಸಿಕೊಳ್ಳಲಾಗುತ್ತಿದೆ.

SCROLL FOR NEXT