ಬೆಂಗಳುರು: ಕಳೆದ ಭಾನುವಾರ ನಿಧನರಾದ ಹಿರಿಯ ಕಾಂಗ್ರೆಸ್ ನಾಯಕ, ಮಾಜಿ ರೈಲ್ವೆ ಸಚಿವ ಸಿ.ಕೆ. ಜಾಫರ್ ಶರೀಫ್ ಅವರ ನಿವಾಸಕ್ಕೆ ಬುಧವಾರ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಭೇಟಿ ನೀಡಿ, ಅಗಲಿದ ನಾಯಕನ ಕುಟುಂಬದವರಿಗೆ ಸಾಂತ್ವನ ಹೇಳಿದರು.
ಜಾಫರ್ ಷರೀಫ್ ಅವರ ಫೋಟೋಗೆ ಪುಷ್ಪ ನಮನ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ರಾಷ್ಟ್ರಪತಿ, ಜಾಫರ್ ಷರೀಫ್ ನನಗೆ ತುಂಬ ಆತ್ಮೀಯರಾಗಿದ್ದರು. ಅವರು ಅನುವಾದ ಮಾಡಿದ್ದ ಪುಸ್ತಕ ಲೋಕಾರ್ಪಣೆಗೆ ನಾನು ಬಂದಿದ್ದೆ. ದುರದೃಷ್ಟವಶಾತ್ ಈಗ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವಂತಾಯಿತು ಎಂದರು.
ಈ ವೇಳೆ ರಾಜ್ಯಸಭಾ ಸದಸ್ಯ ರೆಹಮಾನ್ ಖಾನ್, ಸಚಿವರಾದ ಜಾರ್ಜ್, ಜಮೀರ್ ಅಹಮದ್ ಉಪಸ್ಥಿತರಿದ್ದರು.
ಭಾರತದ ಮೊದಲ ಶಿಕ್ಷಣ ಸಚಿವರಾಗಿದ್ದ ಮೌಲಾನಾ ಅಬುಲ್ ಕಲಾಂ ಆಜಾದ್ ಅವರ "ಇಂಡಿಯಾ ವಿನ್ಸ್ ಫ್ರೀಡಮ್" ಆಂಗ್ಲ ಕೃತಿಯ ಉರ್ದು ಅನುವಾದ ಮಾಡಿದ್ದ ಜಾಫರ್ ಶರೀಫ್ ಅವರ ಪುಸ್ತಕ ಬಿಡುಗಡೆ ಸಮಾರಂಭ ನ. 28ರಂದು ಬೆಂಗಳೂರು ಅರಮನೆ ಮೈದಾನದಲ್ಲಿ ನಡೆಯಬೇಕಿತ್ತು. ಇದಕ್ಕೆ ಪ್ರಣಬ್ ಅವರನ್ನು ಆಹ್ವಾನಿಸಲಾಗಿತ್ತು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos