ರಾಜ್ಯ

ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ: ಶೀಘ್ರದಲ್ಲಿಯೇ ಕಿಂಗ್ ಪಿನ್ ಗಳು ಬಹಿರಂಗ- ಸಿಸಿಬಿ

Nagaraja AB

ಬೆಂಗಳೂರು: ನಾಗರಿಕ  ಪೊಲೀಸ್ ಪೇದೆ ಲಿಖಿತ ಪರೀಕ್ಷೆಯ  ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಮತ್ತೋರ್ವ ಆರೋಪಿ ಬಸವರಾಜ್ ಎಲ್ಲಿ ಅಡಗಿದ್ದಾನೆ ಎಂಬ ಬಗ್ಗೆ ಸುಳಿವು ಸಿಕ್ಕಿದ್ದು,  ಶೀಘ್ರದಲ್ಲಿಯೇ ಆತನನ್ನು  ಬಂಧಿಸುವುದಾಗಿ ಸಿಸಿಬಿ ಪೊಲೀಸರು ಹೇಳಿದ್ದಾರೆ.

ಬಸವರಾಜ್ ಈ ಪ್ರಕರಣದ ಮತ್ತೊಬ್ಬ ಆರೋಪಿಯಾಗಿದ್ದಾನೆ. ಆತ ಪೊಲೀಸ್ ಅಥವಾ ಶಿಕ್ಷಣ ಇಲಾಖೆಗೆ ಸೇರಿದವನಲ್ಲಾ, ಒಂದು ಅಥವಾ ಎರಡು ದಿನಗಳಲ್ಲಿ ಆತನನ್ನು ಬಂಧಿಸುವುದಾಗಿ  ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಮಧ್ಯೆ ಬಂಧಿತ ಆರೋಪಿ ಶಿವಕುಮಾರಯ್ಯ ನಿಂದ ಮಹತ್ವದ ಮಾಹಿತಿ ಕಲೆ ಹಾಕಲಾಗುತ್ತಿದೆ. ಆತನ ವಿರುದ್ಧ  ಕಠಿಣ ಕೇಸ್ ದಾಖಲಿಸಲಾಗಿದ್ದು,  ಶೀಘ್ರದಲ್ಲಿ ದೊಡ್ಡ ಹೆಸರು ಹೊರಬರಲಿದ ಎಂದು ಅವರು ಹೇಳಿದ್ದಾರೆ.

ಈ ಮಧ್ಯೆ ಸಿಸಿಬಿ ಪೊಲೀಸರು ಪ್ರಶ್ನೆ ಪತ್ರಿಕೆ ಸೋರಿಕೆ ಸಂಬಂಧ ಮಹತ್ವದ ಸುಳಿವು ದೊರೆತಿದ್ದು, ಆರೋಪಿಯನ್ನು ಬಂಧಿಸಲು ಎಲ್ಲಾ ರೀತಿಯ ಕ್ರಮ ಕೈಗೊಂಡಿದ್ದಾರೆ. ಪೊಲೀಸರು ಎಲ್ಲಾ ಕಡೆ ಹುಡುಕಾಟ ನಡೆಸುತ್ತಿದ್ದು, ಸದ್ಯದಲ್ಲೇ ಸಂಪೂರ್ಣ ಮಾಹಿತಿ ದೊರೆಯಲಿದ್ದು. ನಾಲ್ಕು ದಿನಗಳೊಳಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.

 ಪೊಲೀಸ್ ಇಲಾಖೆಯ ಹಲವರೊಂದಿಗೆ ಸಂಪರ್ಕ ಹೊಂದಿದ್ದರಿಂದ ಪೊಲೀಸರು ತಮ್ಮ ಬೆನ್ನತ್ತುವ ವಿಷಯ ಅರಿತು ಪರಾರಿಯಾಗಲು ಯತ್ನಿಸಿದ್ದು, ಅಭ್ಯರ್ಥಿಗಳನ್ನು ಮಡಿಕೇರಿಯ ಸೋಮವಾರಪೇಟೆಯ ಕೊಡ್ಲಿಪೇಟೆಗೆ ಸ್ಥಳಾಂತರಿಸಲಾಗಿದೆ. ಕಾಳಿಮಠ ಸಂಸ್ಥೆಯ ಬಗ್ಗೆ ಶಿವಕುಮಾರಯ್ಯ ಹೇಳಿಕೆ ನೀಡಿದ್ದಾನೆ ಎನ್ನಲಾಗಿದೆ.

ಕಾನೂನು ಬಾಹಿರ ಚಟುವಟಿಕೆ ಸಂಬಂಧ ಶನಿವಾರ ಸಂತೆಯ ಕಾಳಿಮಠದ ನಂಜುಂಡಸ್ವಾಮಿ ವಿದ್ಯಾಸಂಸ್ಥೆ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲು ಕಾಯುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

SCROLL FOR NEXT