ರಾಜ್ಯ

ಕಲಬುರಗಿ: ಎಲ್ಲಾ ಧರ್ಮದವರಿಗೂ ಈ ದರ್ಗಾ ಪ್ರವೇಶ ಮುಕ್ತ

Shilpa D
ಕಲಬುರಗಿ: ಧಾರ್ಮಿಕ ಸಾಮರಸ್ಯಕ್ಕೆ ಉದಾಹರಣೆ ಎಂಬಂತೆ ಹಿಂದೂ ಮತ್ತು ಮುಸ್ಲಿಂ ಬಾಂಧವರು ಒಟ್ಟಾಗಿ ಧರ್ಗಾದಲ್ಲಿ  ತಮ್ಮ ಪ್ರಾರ್ಥನೆ ಸಲ್ಲಿಸುತ್ತಾರೆ, ಕಲಬುರಗಿ ಜಿಲ್ಲೆಯಲ್ಲಿರುವ ಹಜರತ್ ಶಾ ರಕ್ನುದ್ದೀನ್  ಟೋಲಾ ದಲ್ಲಿರುವ ದರ್ಗಾ ಇದಾಗಿದೆ.
ಇಲ್ಲಿ ಧರ್ಮದವರು ಯಾವುದೇ ಅಡ್ಡಿಯಿಲ್ಲದೇ ಮುಕ್ತವಾಗಿ ಪ್ರವೇಶ ಪಡೆದು, ತಮ್ಮ ಪ್ರಾರ್ಥನೆ ಸಲ್ಲಿಸಬಹುದಾಗಿದೆ, 
14ನೇ ಶತಮಾನದಲ್ಲಿ ಮುಸ್ಲಿಂ ಸಂತನೊಬ್ಬ ಈ ದರ್ಗಾ ಸಮರ್ಪಿಸಿದ್ದಾನೆ, ಸುಮಾರು 40 ವರ್ಷಗಳ ಕಾಲ ಬೆಟ್ಟದ ಮೇಲೆ ಕುಳಿತು ತಪಸ್ಸು ಮಾಡಿ, ನಂತರ ಅದರ ಮೇಲೆ ಈ ಸಮಾಧಿ ನಿರ್ಮಿಸಲಾಗಿದೆ ಎಂದು ಸ್ಥಳೀಯರೊಬ್ಬರು ತಿಳಿಸಿದ್ದಾರೆ.
ದರ್ಗಾದ ಪಕ್ಕ  ಸಂತ ಶಾಹ ಖಾದ್ರಿ ಸಮಾಧಿಯಿದೆ. ಈತ ಹಿಂದೂವಾಗಿದ್ದ, ಆತನ ಹೆಸರು ರಾಮಾ ರಾವ್ ಎಂಬುದಾಗಿತ್ತು, ಖಾದ್ರಿ ಹಜರತ್ ರಕ್ನುದಿನ್  ಟೋಲಾ ಅವರ ಅನುಯಾಯಿಯಾಗಿದ್ದು, ಅವರ ಆದ್ಯಾತ್ಮಿಕ ಆಕಾಂಕ್ಷೆಗಳನ್ನು ಪೂರ್ಣಗೊಳಿಸಲು ನಿರ್ಧರಿಸಿದ್ದಾನೆ.
ಇಲ್ಲಿಗೆ ಹಿಂದೂ ಮತ್ತು ಮುಸ್ಲಿಮರು ಇಬ್ಬರು ಬರುತ್ತಾರೆ. ಜೊತೆಗೆ ಇಲ್ಲಿ ತಮ್ಮ ಪ್ರಾರ್ಥನೆ ಮಾಡಿ  ಆಶೀರ್ವಾದ ಕೇಳುತ್ತಾರೆ, ಎಲ್ಲಾ ಜಾತಿ ಹಾಗೂ ಧರ್ಮದವರಿಗೆ ಈ  ದರ್ಗಾ ಸದಾ ಬಾಗಿಲು ತೆರೆದಿದೆ ಎಂದು ಸ್ಥಳೀಯರು ವಿವರಿಸಿದ್ದಾರೆ. 
SCROLL FOR NEXT