ತಿರುಪತಿ ಬಾಲಾಜಿ ದೇವಾಲಯ 
ರಾಜ್ಯ

ಚಿತ್ರದುರ್ಗ: ಪೂರ್ಣಗೊಂಡ ಸುರಂಗಮಾರ್ಗ; ತಿರುಪತಿ ತಿಮ್ಮಪ್ಪನಿಗೆ 'ಹರಕೆ' ತೀರಿಸಿದ ಜನನಾಯಕರು!

ತಮ್ಮ ವಯಕ್ತಿಕ ಆಸೆ, ಆಕಾಂಕ್ಷೆ ಈಡೇರಿಸುವಂತೆ ದೇವರಲ್ಲಿ ಹರಕೆ ಮಾಡಿಕೊಂಡು, ನಂತರ ತೀರಿಸುವುದು ಜನ ಸಾಮಾನ್ಯರಲ್ಲಿ ಕಾಮನ್, ಆದರೆ ...

ಚಿತ್ರದುರ್ಗ: ತಮ್ಮ ವಯಕ್ತಿಕ ಆಸೆ, ಆಕಾಂಕ್ಷೆ ಈಡೇರಿಸುವಂತೆ ದೇವರಲ್ಲಿ ಹರಕೆ ಮಾಡಿಕೊಂಡು, ನಂತರ ತೀರಿಸುವುದು ಜನ ಸಾಮಾನ್ಯರಲ್ಲಿ ಕಾಮನ್, ಆದರೆ ಚಿತ್ರದುರ್ಗದ ಜನ ಪ್ರತಿನಿಧಿಗಳು ಸ್ವಲ್ಪ ಡಿಫರೆಂಟ್ ಆಗಿದ್ದಾರೆ, ಏಕೆಂದರೇ ಚಿತ್ರದುರ್ಗದ ಸುರಂಗಕಾಮಗಾರಿ ಶೀಘ್ರವಾಗಿ ಪೂರ್ಣಗೊಂಡ ಹಿನ್ನೆಲೆಯಲ್ಲಿ  ತಿರುಪತಿಯ ಬಾಲಾಜಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಭದ್ರಾ ಮೇಲ್ಡಂಡೆ ಯೋಜನೆಯ ಸುರಂಗ ಕಾಮಗಾರಿ ಸಂಪೂರ್ಣಗೊಂಡಿದ್ದು, ಈ ಭಾಗದ ಜನಪ್ರತಿನಿಧಿಗಳು ಹಾಗೂ ಸಂಸದರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಭಾನುವಾರ ತಿರುಪತಿಯಲ್ಲಿ ತಿಮ್ಮಪ್ಪನಿಗದೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಹರಕೆ ಸಲ್ಲಿಸಿದ್ದಾರೆ. 
ನಮ್ಮ ಕೋರಿಕೆ ಈಡೇರಿದ್ದಕ್ಕೆ ನಾವು ವಿಶೇಷ ಪೂಜೆ ಸಲ್ಲಿಸಿದ್ದೇವೆ,  ಈ ಕಾಮಗಾರಿ ಡಿಸೆಂಬರ್ ನಲ್ಲಿ ಪೂರ್ಣಗೊಳ್ಳಬೇಕಿತ್ತು, ಆದರೆ ನಾವು ಅಂದುಗೊಂಡಿದ್ದಕ್ಕಿಂತ ಮೊದಲೇ ಮುಗಿದಿದೆ, ಈ ಯೋಜನೆಯಿಂದ ಚಿತ್ರದುರ್ಗ ಮತ್ತು ಇತರ ಮೂರು ಜಿಲ್ಲೆಗಳ ರೈತರಿಗೆ ಅನುಕೂಲವಾಗಲಿದೆ,  ಹೀಗಾಗಿ ಈ ಭಾಗದ ಜನರ ಕನಸು ಶೀಘ್ರವೇ ನೆರವೇರಲಿದೆ ನಮೆಗೆಲ್ಲಾ ತುಂಬಾ ಸಂತೋಶವಾಗಿದೆ ಎಂದು ಚಿತ್ರದುರ್ಗ ಸಂಸದ ಬಿ,.ಎನ್ ಚಂದ್ರಪ್ಪ ಹೇಳಿದ್ದಾರೆ.
ಸಂಸದ ಚಂದ್ರಪ್ಪ ಅವರ ಜೊತೆಗೆ ಜಿಲ್ಲಾ ಉಸ್ತುವಾರಿ ಸಚಿವ  ವೆಂಕಟರಮಣಪ್ಪ, ಮಾಜಿ ಶಾಸಕ ಡಿ. ಸುಧಾಕರ್, ಹಾಗೂ ಗೋವಿಂದಪ್ಪ ಸೇರಿದಂತೆ ಅವರೆ ಬೆಂಬಲಿಗರೆಲ್ಲಾ ಶನಿವಾರ ಚಿತ್ರದುರ್ಗದಿಂದ ಹೊರಟು ಭಾನುವಾರ ತಿರುಪತಿಯಲ್ಲಿ ಪೂಜೆ ಸಲ್ಲಿಸಿ ಸೋಮವಾರ ವಾಪಸಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ವಿದ್ಯಾರ್ಥಿಗಳ ಮೇಲೆ ಪೆಲ್ಲೆಟ್ ಗುಂಡಿನ ದಾಳಿ: ಶಾ ಅವರೇ ಆದೇಶ ನೀಡಿದ್ದಾರೆ, ಇಲ್ಲವೇ ಅವರು ಅಸಮರ್ಥ; ವಜಾಗೊಳಿಗೊಳಿಸಿ- ಪ್ರಧಾನಿಗೆ ರಾಹುಲ್ ಒತ್ತಾಯ

CWRC ಆದೇಶದ ವಿರುದ್ಧ ಮೇಲ್ಮನವಿ: ಕಾವೇರಿ ಜಲಾನಯನ ಪ್ರದೇಶದ ಪರಿಸ್ಥಿತಿ ಅರಿಯಲು ಸಿಎಂ ವಿಜಯ್ ಗೆ ಹೆಲಿಕಾಪ್ಟರ್ ವ್ಯವಸ್ಥೆ- ಸಿಎಂ ಡಿಕೆ ಶಿವಕುಮಾರ್!

ಕಾವೇರಿ ನೀರು ಬಿಡುಗಡೆ ಸಮಿತಿಯ ಆದೇಶವು 'ಅವೈಜ್ಞಾನಿಕ', ಕರ್ನಾಟಕಕ್ಕೆ 'ಮಾರಕ': ಕೇಂದ್ರ ಸಚಿವ ಕುಮಾರಸ್ವಾಮಿ

ಚೆನ್ನೈ ಮೆಟ್ರೋ ರೈಲಿನಲ್ಲಿ ಸಿಎಂ ವಿಜಯ್ ಪ್ರಯಾಣ: ಜನರೊಂದಿಗೆ ಸಂವಾದ, ಸರಳತೆಗೆ ಫ್ಯಾನ್ಸ್ ಫಿದಾ! Video

Beat the f**king sh*t out: ಅಮೆರಿಕದ ನೆಲೆಗಳ ಮೇಲೆ ಇರಾನ್ ಕ್ಷಿಪಣಿ ದಾಳಿ, ಟ್ರಂಪ್ ಆಕ್ರೋಶ!