ಮೈಸೂರು: ಆಲ್ ಖೈದಾ ಉಗ್ರ ಜೈನಾಲಾಬಿಡಿನ್ ಮನ್ಮಹದ್ ಹುಸೇನ್ ಅಬು ಜುಬೈದಾ ಸದ್ಯ ಅಮೆರಿಕಾ ಶಸಸ್ತ್ರ ಪಡೆಯ ವಶದಲ್ಲಿದ್ದಾನೆ.
ಮೈಸೂರಿನ ಕೃಷ್ಣಮೂರ್ತಿ ಪುರಂ ನಲ್ಲಿರುವ ಶಾರದಾ ವಿಲಾಸ ಕಾಲೇಜಿನ ದಾಖಲೆಗಳ ಪ್ರಕಾರ ಜುಬೈದಾ ಮತ್ತು ಆತನ ನಾಲ್ಕು ಸ್ನೇಹಿತರು 1989 ರಲ್ಲಿ ಬಿಎಸ್ ಸಿ ಕಂಪ್ಯೂಟರ್ ಸೈನ್ಸ್ ಗೆ ದಾಖಲಾಗಿದ್ದರು, ಆದರೆ ಮೊದಲ ವರ್ಷದ ಪರೀಕ್ಷೆಯಲ್ಲಿ ಹಲವು ವಿಷಯಗಳು ಬಾಕಿ ಉಳಿದುಕೊಂಡಿದ್ದರಿಂದ ಕೋರ್ಸ್ ಪೂರ್ಣಗೊಂಡಿಲ್ಲ, ಉದಯಗಿರಿಯ ಎಂಜಿ ರಸ್ತೆಯ ಸಮೀಪವಿರುವ ಮನೆಯೊಂದರಲ್ಲಿ ಬಾಡಿಗೆಗೆ ವಾಸವಾಗಿದ್ದರು, ಆದರೆ ನಂತರ ಅವರು ಕಾಲಾಜಿಗೆ ಬರಲೇ ಇಲ್ಲ,
ದಾಖಲೆಗಳ ಪ್ರಕಾರ ಜುಬೈದ್, ಸೌದಿ ಅರೇಬಿಯಾದ ರಿಯಾದ್ ನಿಂದ ಬಂದಿದ್ದು, ಆತನ ತಂದೆ ಶಿಕ್ಷಕ ಎಂದು ಮಾಹಿತಿಯಿದೆ, ಅಪ್ಙಾನಿಸ್ತಾನಕ್ಕೆ ಹೋಗಲು ಮೈಸೂರಿನಿಂದ ದೆಹಲಿಗೆ ತೆರಳಿದ್ದ, ಈ ವೇಳೆ ನಡೆದ ಜಗಳದಲ್ಲಿ ಗಾಯಗೊಂಡಿದ್ದ. ಜಿಹಾದಿ ಫೈಟರ್ ಗಳ ಹಾಸ್ಟೆಲ್ ಮ್ಯಾನೇಜರ್ ಆಗಿದ್ದ.
ಜುಬೈದಾ ಲಾಡೇನ್ ನ ಹಿರಿಯ ಲೆಫ್ಟಿನೆಂಟ್ ಮತ್ತು ಕೌಂಟರ್ ಇಂಟಲಿಜೆನ್ಸ್ ಆಫೀಸರ್ ಆಗಿದ್ದ, ಆಲ್ ಕೈದಾದಲ್ಲಿ ಅತಿ ಉನ್ನತ ಮಟ್ಟದ ರ್ಯಾಂಕಿಂಗ್ ಸದಸ್ಯ ಆಗಿದ್ದ, ಹಲವು ಭಯೋತ್ಪದಕ ಕೃತ್ಯಗಳಲ್ಲಿ ಪಾಲುದಾರನಾಗಿದ್ದ, 9/11 ರಲ್ಲಿ ನ್ಯೂಯಾರ್ಕ್ ನ ವಿಶ್ವ ವಾಣಿಜ್ಯ ಕೇಂದ್ರದಮೇಲೆ ನಡೆದ ದಾಳಿಯಲ್ಲಿ ಈತನ ಪಾತ್ರವಿದೆ, ಆದರೆ 2002ರಲ್ಲಿ ಪಾಕಿಸ್ತಾನದಲ್ಲಿ ಆತನನ್ನು ಬಂಧಿಸಲಾಯಿತು, ಸದ್ಯ ಆತ ಕ್ಯುಬಾದಲ್ಲಿ ಬಂಧಿಸಲಾಗಿದೆ.,
ಡೈರಿ ಬರೆಯುವ ಹವ್ಯಾಸ ಇಟ್ಟುಕೊಂಡಿರುವ ಜುಬೈದಾ ಮೈಸೂರಿನಲ್ಲಿ ಇದ್ದುದನ್ನು ಬರೆದಿದ್ದಾನೆ. ಅಲ್ಲಿನ ಕೆಲಸದಾಕೆ ಫಿಲೋಮಿನ ಹೆಸರನ್ನು ನಮೂದಿಸಿದ್ದಾನೆ. ಮಾಧ್ಯಮಗಳಲ್ಲಿ ಈ ಬಗ್ಗೆ ಬಂದಿದ್ದನ್ನು ನಾನು ನೋಡಿದ್ದೇನೆ, ಆದರೇ ನನಗೆ ಈ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಇಲ್ಲ ಎಂದು ಪೊಲೀಸ್ ಆಯುಕ್ತ ಡಾ. ಸುಬ್ರಮಣ್ಯಶ್ವರ್ ರಾವ್ ಹೇಳಿದ್ದಾರೆ, ಈ ಪ್ರಕರಣ ಸಂಬಂಧ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಹೇಳಿದ್ದಾರೆ.