ವಿಧಾನಸೌಧ ಮತ್ತು ಪ್ಲಾಸ್ಟಿಕ್ ಬಾಟಲ್ಸ್( ಸಂಗ್ರಹ ಚಿತ್ರ)
ಬೆಂಗಳೂರು: ರಾಜ್ಯ ಸರ್ಕಾರ ಪರಿಸರ ಸ್ನೇಹಿಯಾಗಲು ಮುಂದಾಗಿದೆ, ವಿಧಾನಸೌಧ ಸೇರಿದಂತೆ ಸರ್ಕಾರದ ಎಲ್ಲಾ ಕಚೇರಿಗಳಲ್ಲೂ ಪ್ಲಾಸ್ಟಿಕ್ ಬಾಟಲ್ ಮತ್ತು ಪ್ಲಾಸ್ಟಿಕ್ ಕಪ್ ಬಳಸದಂತೆ ಕಟ್ಟು ನಿಟ್ಟಿನ ಆದೇಶ ಹೊರಡಿಸಲಾಗಿದೆ.
ಪ್ಲಾಸ್ಟಿಕ್ ಬಳಕೆ ತಗ್ಗಿಸುವಂತೆ ಇತ್ತೀಚೆಗೆ ರಾಜ್ಯ ಮುಖ್ಯ ಕಾರ್ಯದರ್ಶಿ ಆದೇಶ ಹೊರಡಿಸಿದ್ದರು. ಸಭೆಗಳಲ್ಲಿ ಪ್ಲಾಸ್ಟಿಕ್ ಬಾಟಲ್ ನೀರು ಬಳಸದಂತೆ ಸೂಚಿಸಿದ್ದೇವೆ, ಪ್ಲಾಸ್ಟಿಕ್ ಬದಲು ಸ್ಟೀಲ್ ಜಗ್ ಗಳಲ್ಲಿ ನೀರು ಬಳಸುವಂತೆ ತಿಳಿಸಿದೆ, ಮುಖ್ಯಮಂತ್ರಿ ಅಥವಾ ಇತರೇ ಯಾವುದೇ ಸರ್ಕಾರದ ಪ್ರತಿನಿಧಿಗಳ ಕಾರ್ಯಕ್ರಮದಲ್ಲಿ ಪ್ಲಾಸ್ಟಿಕ್ ಬಾಟಲ್ ಬದಲು ಟಂಬ್ಲರ್ ಗಳಲ್ಲಿ ನೀರು ನೀಡುವಂತೆ ತಿಳಿಸಲಾಗಿದೆ ಎಂದು ಮುಖ್ಯ ಕಾರ್ಯದರ್ಶಿ ಎಂ. ವಿಜಯ ಭಾಸ್ಕರ್ ಹೇಳಿದ್ದಾರೆ,
ವಿಧಾನಸೌಧದಲ್ಲಿ ಪ್ರತಿದಿನ 500 ಬಾಟಲ್ ಬಳಸಲಾಗುತ್ತದೆ.ಈಗಲೂ ಪ್ಲಾಸ್ಟಿಕ್ ಬಾಟಲ್ ಬಳಕೆಯಾಗುತ್ತಿದೆ ಎಂದು ಹೌಸ್ ಕೀಪಿಂಗ್ ಸಿಬ್ಬಂದಿ ತಿಳಿಸಿದ್ದಾರೆ, ಕೆಲವು ಅಧಿಕಾರಿಗಳು ವಯಕ್ತಿಕ ಬಳಕೆಗೆ ಉಪಯೋಗಿಸಿಕೊಳ್ಳುತ್ತಾರೆ, ಜೊತೆಗೆ ನೂರಾರು ಪೇಪರ್ ಕಪ್ಸ್ ಕೂಡ ಬಳಕೆಯಾಗುತ್ತದೆ ಎಂದು ತಿಳಿಸಿವೆ.
ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿ, ಕೂಡ ಇದೇ ರೀತಿಯ ಆದೇಶ ಹೊರಡಿಸಿದೆ, ಗ್ರಾಮ ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ಸಭೆಗಳಲ್ಲಿ 20 ಲೀಟರ್ ವಾಟರ್ ಕ್ಯಾನ್ ಜೊತೆಗೆ ನೀರನ್ನು ಸ್ಟೀಲ್ ಟಂಬ್ಲರ್ ಗಳಲ್ಲಿ ನೀಡಬೇಕು ಎಂದು ತಿಳಿಸಿದೆ. ಕೌನ್ಸಿಲರ್ ಗಳಿಗೆ ಹಾಗೂ ಅಧಿಕಾರಿಗಳಿಗೆ ನೀರನ್ನು ನಾವು ಪೇಪರ್ ಗ್ಲಾಸ್ ಗಳಲ್ಲಿ ನೀಡುತ್ತಿದ್ದೇವೆ ಎಂದು ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಹೇಳಿದ್ದಾರೆ.
ಇನ್ನು ಮುಂದೆ ಯಾವುದೇ ಕಾರಣಕ್ಕೂ ಭವಿಷ್ಯದಲ್ಲಿ ಪ್ಲಾಸ್ಚಿಕ್ ಬಾಟಲ್ ಬಳಸದಂತೆ ನಿರ್ಧರಿಸಿರುವುದಾಗಿ, ಮಂಗಳೂರು ಸ್ಥಳೀಯ ಸಂಸ್ಥೆ ನಿರ್ಧರಿಸಿದೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1 ತಿಂಗಳ ಹಿಂದೆ ಈ ಪ್ರಯೋಗ ಮಾಡಲಾಗಿದೆ, ಅವರು ತಿಂಗಳಿಗೆ ಸುಮಾರು 1ಸಾವಿರ ಬಾಟಲ್ ಬಳಸುತ್ತಾರೆ, ಮಂಗಳೂರು ಸಿಟಿ ಕಾರ್ಪೋರೇಷನ್ ಕುಡಿಯುವ ನೀರಿಗಾಗಿ ಸ್ಟೀಲ್ ಜಗ್ ಮತ್ತು ಟಂಬ್ಲರ್ ಗಳನ್ನು ಖರೀದಿಸಿದೆ.