ಅಕ್ರಮ ಮದ್ಯ ಮಾರಾಟ: ಸಿಡಿದೆದ್ದ ಮಹಿಳೆಯರಿಂದ ಚಳುವಳಿ ನಡೆಸಲು ನಿರ್ಧಾರ
ರಾಯಚೂರು: ಮಸ್ಕಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನಾನು ಗ್ರಾಮಗಳಲ್ಲಿ ಮದ್ಯ ಅಕ್ರಮ ಮಾರಾಟ ಅವ್ಯಾಹತವಾಗಿದ್ದು, ಮದ್ಯವ್ಯಸನಿಗಳಿಂದ ದಿನವೂ ಸಣ್ಣಪುಟ್ಟ ಜಗಳಗಳು, ಅಶಾಂತಿ ವಾತಾವರಣ ನಿರ್ಮಾಣಗೊಳ್ಳುತ್ತಿರುವ ಹಿನ್ನಲೆಯಲ್ಲಿ ಸಿಡಿದೆದ್ದಿರುವ ಮಹಿಳೆಯರು ಇದೀಗ ಅಕ್ರಮ ಮದ್ಯ ಮಾರಾಟದ ವಿರುದ್ಧ ಚಳುವಳಿ ನಡೆಸಲು ನಿರ್ಧರಿಸಿದ್ದಾರೆ.
ಮಸ್ಕಿ ತಾಲೂಕಿನ ವಟ್ಗಲ್ ಗ್ರಾಮದಿಂದ 35 ಕಿಮೀ ವರೆಗೂ ಮದ್ಯವನ್ನು ಮಾರಾಟವಂತಿಲ್ಲ ಹಾಗೂ ಮದ್ಯವನ್ನು ಸೇವಿಸಬಾರದು, ಮದ್ಯ ಮಾರಾಟ ಅಂಗಡಿಗಳಿಗೂ ಸರ್ಕಾರ ಪರವಾನಗಿಗಳನ್ನು ನೀಡಬಾರದು ಎಂದು ಮಹಿಳೆಯರು ಆಗ್ರಹಿಸುತ್ತಿದ್ದಾರೆ.
ಅನುಮತಿ ಪಡೆದ ಮದ್ಯದಂಗಡಿಗಳು ಹಾಗೂ ಮಾರಾಟಗಾರರು ಪೊಲೀಸರಿಗೆ ಲಂಚದ ಹಣವನ್ನು ನೀಡುತ್ತಿದ್ದಾರೆ. ಗ್ರಾಮದಲ್ಲಿ ಕೇವಲ 2 ಸಾವಿರ ಜನತೆಯಿದ್ದು, ದಿನಕ್ಕೆ ರೂ.10,000ದಷ್ಟು ಮದ್ಯವನ್ನು ಮಾರಾಟ ಮಾಡಲಾಗುತ್ತಿದೆ ಎಂದು ಸ್ಥಳೀಯ ನಿವಾಸಿ ಭೀಮಪ್ಪ ನಾಯಕ್ ಅವರು ಹೇಳಿದ್ದಾರೆ.
ಅಕ್ರಮ ಮದ್ಯ ಮಾರಾಟ ತಡೆಯುವ ಸಲುವಾಗಿ ಇದೀಗ ಮಹಿಳೆಯರು ಹೋರಾಟಕ್ಕಿಳಿದಿದ್ದಾರೆ.
ಮದ್ಯ ಮಾರಾಟವನ್ನು ಕೂಡಲೇ ನಿಲ್ಲಸಬೇಕು. ಜಿಲ್ಲಾ ಆಡಳಿತ ಮಂಡಳಿ ವಿರುದ್ಧ ಹೋರಾಟ ನಡೆಸಲು ನಿರ್ಧರಿಸಲಾಗಿದೆ. ಶೀಘ್ರದಲ್ಲಿಯೇ ಈ ಕುರಿತು ಚಳುವಳಿಯನ್ನು ಆರಂಭಿಸಲಾಗುತ್ತದೆ. ಮದ್ಯಕ್ಕೆ ಹಣ ನೀಡುವಂತೆ ಮಗನೊಬ್ಬ ಹೆತ್ತ ತಾಯಿಯನ್ನು ಪ್ರತೀನಿತ್ಯ ಹೊಡೆಯುತ್ತಿದ್ದಾರೆ. ಮದ್ಯಕ್ಕಾಗಿ ತಂದೆಯೊಬ್ಬ ಹೆತ್ತ ಮಗಳನ್ನೇ ಮಾರಾಟ ಮಾಡುತ್ತಿದ್ದಾನೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನನಗೆ 23 ವರ್ಷದ ಮಗನಿದ್ದು, ಮದ್ಯಕ್ಕಾಗಿ ಹಣ ನೀಡುವಂತೆ ಪ್ರತೀನಿತ್ಯ ಹೊಡೆಯುತ್ತಿರುತ್ತಾನೆ. ಗ್ರಾಮದಲ್ಲಿ ಮದ್ಯ ಮಾರಾಟ ಸಂಪೂರ್ಣವಾಗಿ ಸ್ಥಗಿತಗೊಳ್ಳಬೇಕು. ಇಲ್ಲದೇ ಹೋದರೆ ಗ್ರಾಮದ ಪುರುಷಕರು ರಾಕ್ಷಸರಂತೆ ವರ್ತಿಸುತ್ತಾರೆಂದು ತಿಳಿಸಿದ್ದಾರೆ.
ನಮಗೆ ನಾಲ್ವರು ಮಕ್ಕಳಿದ್ದು, ಎಲ್ಲರೂ ಹೆಣ್ಣು ಮಕ್ಕಳೇ. ಮಕ್ಕಳ ವಿದ್ಯಾಭ್ಯಾಸಕ್ಕೆ ಹಾಗೂ ಮನೆ ನಿರ್ವಹಣೆಗೆ ಹಣ ನೀಡದೇ ಹೋದರು, ಮದ್ಯಕ್ಕೆ ಹಣ ನೀಡುವಂತೆ ಹಿಂಸೆ ನೀಡುತ್ತೇನೆ. ಮನೆ ನಿರ್ವಹಣೆಗೆ ನಾವೇ ಕೆಲಸಕ್ಕೆ ಹೋಗಬೇಕಾಗಿದೆ. ಇದರೊಂದಿಗೆ ಪತಿಯ ಮದ್ಯದ ಚಟದ ಹಿಂಸೆ ಬೇಕೆ ಎಂದು ಯಮುನಾ ಎಂಬುವವರು ಹೇಳಿಕೊಂಡಿದ್ದಾರೆ.
ಮದ್ಯಕ್ಕೆ ಹಣ ನೀಡವವರೆಗೂ ಮನೆಯ ಒಳಗೆ ಬರಬಾರದು ಎಂದು ಪತಿ ನನ್ನನ್ನು ಹಾಗೂ ಮಕ್ಕಳನ್ನು ಹೊರಗೆ ಹಾಕುತ್ತಾನೆ. ಪ್ರತೀನಿತ್ಯ ನಾವು ಹೊರಗೆ ಜೀವನ ನಡೆಸುವಂತಾಗಿದೆ ಎಂದು ನಿಂಗಮ್ಮ ಎಂಬುವವರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.