ರಾಜ್ಯ

ಬಾರದ ಲೋಕಕ್ಕೆ ರೌಡಿ ರಂಗ! ರೌಡಿ ರಂಗ.. ರಂಗನಾಗಿ ಬದಲಾಗಿದ್ದೇಗೆ? ಮಾವುತನ ಹೃದಯ ಬಿರಿಯುವ ಮಾತುಗಳು!

Vishwanath S
ಇನ್ನೇರಡು ದಿನಗಳಲ್ಲಿ ವಿಶ್ವವಿಖ್ಯಾತ ಮೈಸೂರು ದಸರಾ ಅಂಬಾರಿ ಹೊರುವ ದಸರಾ ಆನೆಗಳನ್ನು ಕೂಡಿಕೊಳ್ಳಬೇಕಿದ್ದ ರೌಡಿ ರಂಗ ಅಲಿಯಾಸ್ ರಂಗ ಆನೆ ಅಪಘಾತವೊಂದರಲ್ಲಿ ಮೃತಪಟ್ಟು ಬಾರದ ಲೋಕಕ್ಕೆ ಪಯಣಿಸಿದ್ದಾನೆ. 
ರೌಡಿ ರಂಗನಾಗಿದ್ದ ಆನೆ ನಂತರ ಬರೀ ರಂಗನಾದ ಕಥೆ ಬಲು ರೋಚಕವಾಗಿದೆ. ಹೌದು ಬನ್ನೇರುಘಟ್ಟದಲ್ಲಿ ಆತನ ಪುಂಡಾಟ ಕಂಡು ಅವನಿಗೆ ರೌಡಿ ರಂಗ ಅಂತ ಹೆಸರಿಡಲಾಗಿತ್ತು. ಆದರೆ ಮತ್ತಿಗೋಡು ಶಿಬಿರಕ್ಕೆ ಬಂದ ನಂತರ ಆನೆಯ ರೌಡಿ ಚೆಷ್ಟೇಗಳು ಕಮ್ಮಿಯಾಗಿದ್ದವು. ಇಲ್ಲಿಗೆ ಬಂದ ಮೇಲೆ ಒಂದು ದಿನವೂ ಆತನನ್ನು ಕ್ರಾಲ್ ಗೆ ಹಾಕಿರಲಿಲ್ಲ. ಸೌಮ್ಯ ಸ್ವಭಾವ ಇದ್ದ ಕಾರಣ ರೌಡಿ ರಂಗ ಅನ್ನೋದನ್ನ ತೆಗೆದು ಕೇವಲ ರಂಗ ಅಂತ ಮಾತ್ರ ಹೆಸರು ಇಟ್ಟಿದ್ದೇವು ಅಂತ ಮಾವುತ ಅಹಮ್ಮದ್ ಷರೀಫ್ ಹೇಳುತ್ತಾರೆ. 
ಸೌವ್ಯ ಸ್ವಭಾವದ ರಂಗ ತನ್ನ ಹತ್ತಿರಕ್ಕೆ ಯಾರೇ ಹೋದರು ಏನು ಮಾಡುತ್ತಿರಲಿಲ್ಲ. ತನ್ನ ಪಾಡಿಗೆ ತಾನು ಇರುತ್ತಿದ್ದ. ಕ್ಯಾಂಪ್ ನಲ್ಲಿ ಇರುವ ಎಲ್ಲಾ ಆನೆಗಳೊಂದಿಗೆ ಉತ್ತಮ ಒಡನಾಟ ಇಟ್ಟುಕೊಂಡಿದ್ದ. ಹೇಳಿಕೊಟ್ಟ ಕೆಲಸಗಳನ್ನೆಲ್ಲ ಚೆನ್ನಾಗಿ ಕಲಿಯುತ್ತಿದ್ದ ಹಾಗೂ ಅದನ್ನು ಅಷ್ಟೇ ಚನ್ನಾಗಿ ಮಾಡುತ್ತಿದ್ದ ಎಂದು ಷರೀಫ್ ಹೇಳಿದ್ದಾರೆ. 
ಅಪಘಾತವಾಗಿ ನರಳಾಡುತ್ತಿದ್ದ ರಂಗನನ್ನು ಕಂಡು ಒಂದು ಕ್ಷಣ ಕುಸಿದುಬಿದ್ದೆ. ತನ್ನ ಕೈ ತುತ್ತು ಉಣ್ಣುತ್ತಿದ್ದ ರಂಗ ಕಣ್ಣೇದುರೇ ನರಳುತ್ತಿದ್ದ. ಬೆನ್ನಿನ ಭಾಗದಿಂದ ರಕ್ತ ಬಂದೇ ಸಮನೆ ಹರಿಯುತ್ತಿತ್ತು. ಆ ಕ್ಷಣದಲ್ಲಿ ನನ್ನ ಕೈಯಲ್ಲಿ ಕಣ್ಣೀರು ಹಾಕಿ ದೇವರನ್ನು ಪ್ರಾರ್ಥಿಸುವುದನ್ನು ಬಿಟ್ಟರೇ ಏನನ್ನ ಮಾಡಲು ಸಾಧ್ಯವಾಗಲಿಲ್ಲ ಎಂದು ಷರೀಫ್ ಕಣ್ಣೀರು ಹಾಕಿದ್ದಾರೆ.
ರೌಡಿ ರಂಗನಾಗಿದ್ದ ಆನೆ ಹೆದರುತ್ತಿದ್ದದ್ದು ಮಾತ್ರ ಅಭಿಮನ್ಯುವಿಗೆ!
ಮತ್ತಿಗೋಡು ಶಿಬಿರದ ಒಂದು ಆನೆಗೆ ರಂಗ ಜಾಸ್ತಿ ಭಯಪಡುತ್ತಿದ್ದ. ಆತ ಹತ್ತಿರ ಬಂದರೆ ಸಾಕು ಏನು ಅರಿಯದವನಂತೆ ನಿಂತು ಬಿಡುತ್ತಿದ್ದ. ಆತ ಮತ್ಯಾರು ಅಲ್ಲ ಬಲಾಢ್ಯ ಅಭಿಮನ್ಯ. ಅಭಿಮನ್ಯು ಅಂದರೆ ರಂಗನಿಗೆ ಎಲ್ಲಿಲ್ಲದ ಭಯ. ಕಾರಣ ಬನ್ನೇರುಘಟ್ಟದಿಂದ ಕರೆ ತರುವ ಸಂದರ್ಭದಲ್ಲಿ ಅರ್ಜುನ ಮತ್ತು ಅಭಿಮನ್ಯವನ್ನು ಬಳಸಲಾಗಿತ್ತು. ಹೀಗಾಗಿ ಆಗಿನ ಭಯ ಇನ್ನು ಕಡಿಮೆಯಾಗರಿಲ್ಲಿಲ್ಲ ಎಂದು ಷರೀಫ್ ಹೇಳಿದ್ದಾರೆ.
SCROLL FOR NEXT