ರಾಜ್ಯ

ಉಪ ಚುನಾವಣೆ ನೀತಿ ಸಂಹಿತೆ ಹಿನ್ನೆಲೆ: ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಗೆ ಮತ್ತೆ ಬ್ರೇಕ್!

Shilpa D
ಬೆಂಗಳೂರು: ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಶಿಕ್ಷಕರಿಗೆ ಈ ವರ್ಷ ವರ್ಗಾವಣೆ ಭಾಗ್ಯ ಇಲ್ಲವಂದೇ ತೋರುತ್ತಿದೆ, ವಿವಿಧ ಕಾರಣಗಳಿಂದಾಗಿ ಕೆಲ ದಿನಗಳ ಹಿಂದೆ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಸ್ಥಗಿತಗೊಂಡಿತ್ತು,  ಅಕ್ಟೋಬರ್ 15 ರಿಂದ ಪ್ರಕ್ರಿಯೆಯನ್ನು ಆರಂಭಿಸಲು ಸಿದ್ಧವಾಗಿತ್ತು, ಆದರೆ ಲೋಕಸಭೆ ಮತ್ತು ವಿಧಾನಸಭೆಗಳಿಗೆ ಉಪಚುನಾವಣೆ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಮತ್ತೆ ಸ್ಥಗಿತಗೊಂಡಿದೆ.
ವರ್ಗಾವಣೆ ಪ್ರಕ್ರಿಯೆ ವಿಳಂಭವಾಗುತ್ತಿರುವುದಕ್ಕೆ ಪ್ರತಿಭಟನೆ ನಡೆಸಲು ಶಿಕ್ಷಕರು ನಿರ್ದರಿಸಿದ್ದಾರೆ, ಇಡೀ ವರ್ಗಾವಣೆ ಪ್ರಕ್ರಿಯೆ ನವೆಂಬರ್ 23 ರೊಳಗೆ ಮುಗಿಯುವ ಸಾಧ್ಯತೆಯಿದೆ.
2016 ರಲ್ಲಿ ಶಾಲಾ ಮಟ್ಟದ ವರ್ಗಾವಣೆ ನಡೆದಿತ್ತು, 2.02 ಲಕ್ಷ ಪ್ರಾಥಮಿಕ ಮತ್ತು ಪ್ರೌಢ ಶಾಲೆ ಶಿಕ್ಷಕರಲ್ಲಿ ಸುಮಾರು 60 ಸಾವಿರ ಅಧಿಕಾರಿಗಳು ಹಾಗೂ ಶಿಕ್ಷಕರು ಪರಸ್ಪರ ವರ್ಗಾವಣೆ ಬಯಸಿ ಅರ್ಜಿ ಸಲ್ಲಿಸಿದ್ದರು, ಇದಕ್ಕೆ 2 ಸಾವಿರ ಆಕ್ಷೇಪಣೆಗಳು ಬಂದಿದ್ದವು,
ಇನ್ನೂ ಸರ್ಕಾರಿ ಪದವಿ ಕಾಲೇಜಿನ ಉಪನ್ಯಾಸಕರ ವರ್ಗಾವಣೆ ಪ್ರಕ್ರಿಯೆ ಮುಗಿದಿದ್ದು, ಕೆಲವು ವಾರಗಳ ಹಿಂದೆ ತಡೆ ಹಿಡಿಯಲಾಗಿದೆ, ಉಪನ್ಯಾಸಕರ ಜೊತೆ ಸಂಹವನ ಕೊರತೆಯಿಂದಾಗಿ ಈ ವರ್ಗಾವಣೆಗೂ ಬ್ರೇಕ್ ಬಿದ್ದಿದೆ.
SCROLL FOR NEXT